alex Certify ಆಲಿಯಾ ಭಟ್‌ ತದ್ರೂಪಿ ಹೇಳಿದ್ದೇನು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಲಿಯಾ ಭಟ್‌ ತದ್ರೂಪಿ ಹೇಳಿದ್ದೇನು ಗೊತ್ತಾ ?

ಆಲಿಯಾ ಭಟ್ ಗೊತ್ತಲ್ವಾ, ಪ್ರಸ್ತುತ ತಾಯಿಯಾಗುವ ಸುದ್ದಿಯಿಂದ ಪ್ರಖ್ಯಾತರಾಗಿದ್ದಾರೆ. ಹೈವೇ, ಗಂಗೂಬಾಯಿ ಕಥಿವಾಡಿ ಮತ್ತು ರಾಝಿ ಮುಂತಾದ ಹಲವಾರು ಚಿತ್ರಗಳ ಮೂಲಕ ಅವರು ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ. ಆದರೆ, ಅವರದೇ ರೀತಿ ಕಾಣುವ ಯುವತಿ ಇದ್ದಾರೆ.

ಹ್ಯೂಮನ್ಸ್ ಆಫ್ ಬಾಂಬೆ ಹಂಚಿಕೊಂಡ ವಿಡಿಯೊದಲ್ಲಿ ಆಲಿಯಾ ರೀತಿಯೇ ಕಾಣುವ, ಆಕೆ ನಕ್ಕಂತೆ ನಗುವ ಸೆಲೆಸ್ಟಿ ಬೈರಗಿ ಗಮನ‌ ಸೆಳೆಯುತ್ತಾರೆ.

ಸೆಲೆಸ್ಟಿ ಬೈರಗಿಯನ್ನು ಆಲಿಯಾ ಭಟ್‌ನ ಡೊಪ್ಪಲ್‌ ಗ್ಯಾಂಗರ್ ಅಥವಾ ಅವಳಿಜವಳಿ ಎಂದು ಹೇಳುವಂತಿದ್ದಾಳೆ.‌ ಹ್ಯೂಮನ್ಸ್ ಆಫ್ ಬಾಂಬೆ ಹಂಚಿಕೊಂಡ ಪೋಸ್ಟ್‌ನಲ್ಲಿ, ಸೆಲೆಸ್ಟಿ ಅವರು ನಟಿಯನ್ನು ಹೋಲುತ್ತಿದ್ದರೂ ತಮ್ಮ ಐಡೆಂಟಿಟಿ ನನ್ನದು, ಅದನ್ನು ಉಳಿಸಿಕೊಳ್ಳಲು ಬಯಸುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋ ಸೆಲೆಸ್ಟಿ ಸೀರೆಯಲ್ಲಿ ನೃತ್ಯ ಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. “ನೀವು ನಟಿ ಆಲಿಯಾ ಭಟ್ ಅವರನ್ನು ನೋಡುತ್ತಿದ್ದೀರಿ ಎಂದು ಭಾವಿಸುತ್ತೀರಾ? ಹತ್ತಿರದಿಂದ ನೋಡಿ. ನಾನು ಸೆಲೆಸ್ಟಿ ಬೈರಗಿ. ನನ್ನನ್ನು ಅಲಿಯಾಸ್ ಡೊಪ್ಪೆಲ್‌ಗ್ಯಾಂಗರ್ ಎಂದು ಕರೆಯಲಾಗುತ್ತದೆ” ಎಂದು ವೀಡಿಯೊದಲ್ಲಿ ಟೆಕ್ಸ್ಟ್‌ ಓದಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...