alex Certify ಜನವರಿ 26 ರಂದು ಬಿಡುಗಡೆಗೆ ಸಜ್ಜಾಗಿದೆ ‘ಅಲೆಕ್ಸಾ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿ 26 ರಂದು ಬಿಡುಗಡೆಗೆ ಸಜ್ಜಾಗಿದೆ ‘ಅಲೆಕ್ಸಾ’

ಆ ಒಂದು ಕಾರಣಕ್ಕೆ ನಾನು ಅಲೆಕ್ಸಾ ಸಿನಿಮಾ ಒಪ್ಪಿಕೊಂಡೆ, ಕೊನೆಗೂ ಆ ಆಸೆ ಈಡೇರಿತು; ಅದಿತಿ ಪ್ರಭುದೇವ-sandalwood news pavan teja aditi prabhudeva starrer crime thriller alexa movie teaser released ...

ಈಗಾಗಲೇ ತನ್ನ ಟ್ರೈಲರ್ ಮತ್ತು  ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಜೀವ ನಿರ್ದೇಶನದ ‘ಅಲೆಕ್ಸಾ’ ಸಿನಿಮಾ ಜನವರಿ 26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಅದಿತಿ ಪ್ರಭುದೇವ ತಮ್ಮ instagram ಖಾತೆಯಲ್ಲಿ ಈ ಚಿತ್ರದ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಚಿತ್ರತಂಡಕ್ಕೆ ನಿಮ್ಮ ಪ್ರೀತಿ, ಆಶೀರ್ವಾದವಿರಲಿ  ಎಂದು ಬರೆದುಕೊಂಡಿದ್ದಾರೆ.

ಈ ಸಿನಿಮಾವನ್ನು ಶ್ರೀ ಭುವನೇಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಚಂದ್ರು ನಿರ್ಮಾಣ ಮಾಡಿದ್ದು, ಪವನ್ ತೇಜ ಮತ್ತು ಆದಿತಿ ಪ್ರಭುದೇವ ಸೇರಿದಂತೆ ಮೇಘಶ್ರೀ, ನಾಗಾರ್ಜುನ್, ಹನುಮಂತೇಗೌಡ, ಮಿಮಿಕ್ರಿ ಗೋಪಿ, ಚಂದ್ರಕಲಾ ಮೋಹನ್ ತೆರೆಹಂಚಿಕೊಂಡಿದ್ದಾರೆ. ಉಮೇಶ್ ಆರ್ ಬಿ ಸಂಕಲನವಿದ್ದು, ಸಾಯಿ ಸತೀಶ್ ಛಾಯಾಗ್ರಹಣವಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಇನ್ವೆಸ್ಟಿಗೇಶನ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...