alex Certify ಈ ಐಫೋನ್​, ಆಂಡ್ರಾಯ್ಡ್​​ ಫೋನ್ ​ಗಳಲ್ಲಿ ಲಭ್ಯವಿರೋದಿಲ್ಲ ವಾಟ್ಸಾಪ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಐಫೋನ್​, ಆಂಡ್ರಾಯ್ಡ್​​ ಫೋನ್ ​ಗಳಲ್ಲಿ ಲಭ್ಯವಿರೋದಿಲ್ಲ ವಾಟ್ಸಾಪ್..!

ನಿಮ್ಮ ಮೊಬೈಲ್​ನಲ್ಲಿ ವಾಟ್ಸಾಪ್​ ಸೇವೆ ದೊರಕುತ್ತಿಲ್ಲವೇ..? ಹಾಗಾದರೆ ವಾಟ್ಸಾಪ್​ ಕಂಪನಿಯು ಈ ಹಿಂದೆ ನೀಡಿದ್ದ ಸೂಚನೆಯನ್ನು ಕಾರ್ಯಗತಗೊಳಿಸಿದ್ದಿರಬಹುದು. ಇದರಿಂದ ಅನೇಕರು ತಮ್ಮ ಮೊಬೈಲ್​ಗಳಲ್ಲಿ ವಾಟ್ಸಾಪ್​ ಸೇವೆಯನ್ನು ಕಳೆದುಕೊಳ್ಳಲಿದ್ದಾರೆ. ಹಳೆಯ ಸಾಫ್ಟ್​ವೇರ್​ಗಳನ್ನು ಹೊಂದಿರುವ ಬಳಕೆದಾರರ ಮೊಬೈಲ್​ನಲ್ಲಿ ವಾಟ್ಸಾಪ್​ ಸ್ಥಗಿತಗೊಳ್ಳಲಿದೆ.

ಅಂದಹಾಗೆ ಇವು ಫೋನ್​ಗಳ ಸಮಸ್ಯೆಯಲ್ಲ. ಬದಲಾಗಿ ಸಾಫ್ಟ್​ವೇರ್​ಗಳ ಸಮಸ್ಯೆಯಿಂದಾಗಿ ವಾಟ್ಸಾಪ್​​ ಕೆಲವೊಂದು ಮೊಬೈಲ್​ಗಳಲ್ಲಿ ತನ್ನ ಸೇವೆಯನ್ನು ನೀಡುವುದನ್ನು ಸ್ಥಗಿತಗೊಳಿಸಲಿದೆ. ಹೀಗಾಗಿ ನೀವು ಸಾಫ್ಟ್​ವೇರ್​ಗಳನ್ನು ಅಪ್​ಡೇಟ್​ ಮಾಡಿಕೊಂಡಲ್ಲಿ ನಿಮ್ಮದೇ ಮೊಬೈಲ್​ಗಳಿಂದ ಪುನಃ ವಾಟ್ಸಾಪ್​ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ಹಾಗಾದರೆ ಯಾವ್ಯಾವ ಮೊಬೈಲ್​ಗಳಲ್ಲಿ ವಾಟ್ಸಾಪ್​ ಸೇವೆ ನಿಲ್ಲಿಸಿದೆ ಎಂಬುದರ ಪಟ್ಟಿ ಇಲ್ಲಿದೆ ನೋಡಿ

ಹಳೆಯ ಸಾಫ್ಟ್​ವೇರ್​ಗಳಿಗೆ ವಾಟ್ಸಾಪ್​ ಸೇವೆ ಸ್ಥಗಿತಗೊಳಿಸುವುದಾಗಿ ಈ ಹಿಂದೆಯೇ ಕಂಪನಿಯು ಸೂಚನೆ ನೀಡಿತ್ತು. ಇದಕ್ಕೆ ನವೆಂಬರ್​ 1ರವರೆಗೆ ಗಡುವನ್ನೂ ನೀಡಲಾಗಿತ್ತು.

ಆ್ಯಪಲ್​ : ಐಫೋನ್​ 6, ಐಫೋನ್​ 6ಎಸ್​ ಪ್ಲಸ್​, ಐಫೋನ್​ ಎಸ್​ಇ

ಎಲ್​ಜಿ : ಲ್ಯುಸಿಡ್​ 2, ಒಪ್ಟಿಮಸ್​ ಎಫ್​ 7, ಒಪ್ಟಿಮಸ್​ ಎಫ್​5, ಒಪ್ಟಿಮಸ್​ ಎಲ್​ 3 II, ಡ್ಯುಯಲ್​ ಒಪ್ಟಿಮಸ್ ಎಲ್​5, ಬೆಸ್ಟ್​ ಎಲ್​5 II, ಒಪ್ಟಿಮಸ್​ ಎಲ್​​5, ಡ್ಯುಯಲ್​ ಬೆಸ್ಟ್​​ ಎಲ್​ 3 II, ಒಪ್ಟಿಮಸ್​ ಎಲ್​ 7, ಒಪ್ಟಿಮಸ್​ ಎಲ್​​7, ಡ್ಯುಯಲ್​​ ಬೆಸ್ಟ್​ ಎಲ್​ 7II, ಒಪ್ಟಿಮಸ್​ ಎಫ್​6, ಎನಾಕ್ಟ್​​ ಒಪ್ಟಿಮಸ್​ ಎಫ್​ 3, ಬೆಸ್ಟ್​ ಎಲ್​ 4 II, ಬೆಸ್ಟ್​​ ಎಲ್​ 2 II, ಒಪ್ಟಿಮಸ್​ ನಿಟ್ರೋ ಹೆಚ್​ಡಿ, ಒಪ್ಟಿಮಸ್​​ 4 ಎಕ್ಸ್​ ಹೆಚ್​ಡಿ ಹಾಗೂ ಒಪ್ಟಿಮಸ್​ ಎಫ್​​ 3ಕ್ಯೂ

ಹ್ಯೂವಾಯ್​ : ಅಸೆಂಡ್​ ಜಿ740, ಅಸೆಂಡ್​ ಮೇಟ್​, ಸೆಂಡ್​ ಡಿ ಕ್ವಾಡ್​​ ಎಕ್ಸ್​ಎಲ್​, ಎಸೆಂಡ್​ ಡಿ1 ಕ್ವಾಡ್ ಎಕ್ಸ್​ಎಲ್​, ಅಸೆಂಡ್​ ಪಿ 1 ಎಸ್​ ಹಾಗೂ ಅಸೆಂಡ್​ ಡಿ2

ಸ್ಯಾಮ್​ಸಂಗ್​ : ಗ್ಯಾಲಕ್ಸಿ ಟ್ರೆಂಡ್ ಲೈಟ್​, ಗ್ಯಾಲಕ್ಸಿ ಟ್ರೆಂಡ್ II, ಗ್ಯಾಲಕ್ಸಿ ಎಸ್​II, ಗ್ಯಾಲಕ್ಸಿ ಎಸ್​ 3 ಮಿನಿ, ಗ್ಯಾಲಕ್ಸಿ ಎಕ್ಸ್​ಕವರ್​ 2, ಗ್ಯಾಲಕ್ಸಿ ಕೋರ್​ ಹಾಗೂ ಗ್ಯಾಲಕ್ಸಿ ಏಸ್​ 2

ಸೋನಿ : ಎಕ್ಸ್​ಪೀರಿಯಾ ಮಿರೋ, ಎಕ್ಸ್​ಪೀರಿಯಾ ನಿಯೋ ಎಲ್​, ಎಕ್ಸ್​ಪೀರಿಯಾ ಆರ್ಕ್​ ಎಸ್​

ಜೆಡ್​​ಟಿಇ: ಗ್ರ್ಯಾಂಡ್​ ಎಸ್​ ಫ್ಲೆಕ್ಸ್​, ಜೆಡ್​​ಟಿಇ ವಿ 956, ಗ್ರ್ಯಾಂಡ್​​ ಎಕ್ಸ್​​ ಕ್ವಾಡ್​​ ವಿ 987 ಹಾಗೂ ಗ್ರ್ಯಾಂಡ್​ ಮೆಮೋ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...