alex Certify ಮಾಲ್ಡೀವ್ಸ್ ನಲ್ಲಿ ಪ್ರಿಯಕರನೊಂದಿಗೆ ಅಲನ್ನಾ ಪಾಂಡೆ…! ಅಭಿಮಾನಿಗಳೊಂದಿಗೆ ಫೋಟೋ ಹಂಚಿಕೊಂಡ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲ್ಡೀವ್ಸ್ ನಲ್ಲಿ ಪ್ರಿಯಕರನೊಂದಿಗೆ ಅಲನ್ನಾ ಪಾಂಡೆ…! ಅಭಿಮಾನಿಗಳೊಂದಿಗೆ ಫೋಟೋ ಹಂಚಿಕೊಂಡ ನಟಿ

ಇಂಟರ್ನೆಟ್ ಸೆಲೆಬ್ರೆಟಿ ಅಲನ್ನಾ ಪಾಂಡೆ ಮತ್ತು ಅವರ ಬಾಯ್‌ಫ್ರೆಂಡ್ ಐವರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಂಚಿಕೊಂಡ ಅಲನ್ನಾ, ತಮ್ಮಿಬ್ಬರ ಅದ್ಭುತ ಚಿತ್ರಗಳನ್ನು ಶೇರ್‌ ಮಾಡಿದ್ದಾರೆ.

ಮಾಲ್ಡೀವ್ಸ್ ನತ್ತ ತೆರಳಿರುವ ಈ ಪ್ರಣಯ ಪಕ್ಷಿಗಳು ಅದ್ಭುತ ಫೋಟೋ ಕ್ಲಿಕ್ಕಿಸಿದ್ದು, ತಮ್ಮ ಸಂಭ್ರಮವನ್ನು ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಐವರ್, ಅಲನ್ನಾಗೆ ಪ್ರಪೋಸ್ ಮಾಡುತ್ತಿರುವ ಫೋಟೋಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ. ಅಲ್ಲದೆ ತಾನು ಐವರ್ ನನ್ನು ಭೇಟಿ ಮಾಡುವವರೆಗೂ, ಒಬ್ಬ ವ್ಯಕ್ತಿಯನ್ನು ಇಷ್ಟೊಂದು ಪ್ರಮಾಣದಲ್ಲಿ ಪ್ರೀತಿಸುತ್ತೇನೆಂದು ಗೊತ್ತಿರಲಿಲ್ಲ. ತನ್ನನ್ನು ಪ್ರೀತಿಸಿದ್ದಕೆ ಅಲನ್ನಾ ಅವರು ಐವರ್ ಗೆ ಧನ್ಯವಾದ ಅರ್ಪಿಸಿದ್ದಾರೆ.

BIG NEWS: ರೈತರು, ಕಾಂಗ್ರೆಸ್ ಕಾರ್ಯಕರ್ತರ ಕೈ ಕತ್ತರಿಸಿ, ಕಣ್ಣು ಕಿತ್ತು ಹಾಕ್ತೇವೆ; ಬಿಜೆಪಿ ಸಂಸದ ಬೆದರಿಕೆ

ಇನ್ನು ಇನ್ಸ್ಟಾಗ್ರಾಂನಲ್ಲಿ ಇವರಿಬ್ಬರ ಸಂಬಂಧದ ಪೋಸ್ಟ್ ಹಂಚಿಕೊಂಡ ಬಳಿಕ ಪ್ರೇಮಿಗಳಿಗೆ, ಅಲನ್ನಾ ತಾಯಿ ಡೀನ್ನಾ, ಚಿಕ್ಕಮ್ಮ ಭಾವನಾ ಪಾಂಡೆ ಮತ್ತು ಸ್ನೇಹಿತರಾದ ಅಲವಿಯಾ ಜಾಫೆರಿ, ಅದಿತಿ ಭಾಟಿಯಾ ಮುಂತಾದವರಿಂದ ಅಭಿನಂದನಾ ಸಂದೇಶಗಳು ಹರಿದು ಬಂದಿದೆ.

ಮತ್ತೊಂದು ಪೋಸ್ಟ್‌ನಲ್ಲಿ, ಅಲನ್ನಾ ಪಾಂಡೆ ಅವರು ಎರಡು ವರ್ಷಗಳ ಹಿಂದೆ ನವೆಂಬರ್ 5 ರಂದು ಐವರ್ ಅವರನ್ನು ಭೇಟಿಯಾದ ನಂತರ ಅವರು ಹೇಗೆ ಪ್ರೀತಿಸುತ್ತಿದ್ದರು ಎಂಬುದನ್ನು ಹಂಚಿಕೊಂಡಿದ್ದಾರೆ. ಹ್ಯಾಲೋವೀನ್ ಪಾರ್ಟಿಯಲ್ಲಿ ಅಲನ್ನಾ ಹಾಗೂ ಐವರ್ ಭೇಟಿಯಾಗಿದ್ದರು. ಅಂದು ಬಾಯಿ ನೋವು ಬರುವ ರೀತಿ ಐವರ್ ಅಲನ್ನಾ ಅವರನ್ನು ನಗಿಸಿದ್ದರಂತೆ. ಹೀಗಾಗಿ ಆತನ ಮೇಲೆ ಪ್ರೀತಿಯುಂಟಾಯಿತು ಎಂಬುದಾಗಿ ಅಲನ್ನಾ ಹೇಳಿಕೊಂಡಿದ್ದಾರೆ.

ಐವರ್ ಕೂಡ ತನ್ನ ಹಾಗೂ ಅಲನ್ನಾ ಅವರ ಕ್ಯೂಟ್ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೂ ಅಲನ್ನಾಳಿಗೆ ಯಾವ ರೀತಿ ಪ್ರಪೋಸ್ ಮಾಡಿದೆ ಅನ್ನೋ ಬಗ್ಗೆ ಹಂಚಿಕೊಂಡಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...