alex Certify ಎರಡು ತಿಂಗಳಿನಲ್ಲಿ ಲವ್​ ಬ್ರೇಕ್​-ಅಪ್​: ಜೋಡಿಯ ವೈರಲ್​ ಆಡಿಯೋಗೆ ಮೀಮ್ಸ್​ಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ತಿಂಗಳಿನಲ್ಲಿ ಲವ್​ ಬ್ರೇಕ್​-ಅಪ್​: ಜೋಡಿಯ ವೈರಲ್​ ಆಡಿಯೋಗೆ ಮೀಮ್ಸ್​ಗಳ ಸುರಿಮಳೆ

ಎರಡು ತಿಂಗಳ ಫ್ರೆಂಡ್​ಷಿಪ್​ ಮುರಿದು ಬಿದ್ದುದಕ್ಕೆ ವಂಶಿಕಾ ಎಂಬ ಯುವತಿ ಆಕಾಶ್​ ಎಂಬಾತನ ವಿರುದ್ಧ ದೂರಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲವಾರು ರೀತಿಯ ಮೀಮ್ಸ್​ ಜತೆ ವೈರಲ್​ ಆಗುತ್ತಿದೆ. ಜನರು ಇದನ್ನು ಭಾರಿ ತಮಾಷೆಯಾಗಿ ತೆಗೆದುಕೊಂಡಿದ್ದಾರೆ.
ಆಕಾಶ್​ಗಾಗಿ ನಾನು ಥ್ರೆಡಿಂಗ್ ಮತ್ತು ವ್ಯಾಕ್ಸಿಂಗ್ ಎಲ್ಲಾ ಮಾಡಿಸಿದ್ದೆ. ನನಗೆ ತುಂಬಾ ನೋವಾಯಿತು. ನಾನು ಪಾರ್ಲರ್‌ನಲ್ಲಿ ಸ್ಟೈಲಿಸ್ಟ್ ಮುಂದೆ ಕಿರುಚಿದ್ದೆ. ಇಷ್ಟೆಲ್ಲಾ ಮಾಡಿದರೂ ಆತ ನನ್ನನ್ನು ಬಿಟ್ಟು ಹೋದ ಎಂದು ವಂಶಿಕಾ ಹೇಳಿದ್ದು, ಹಾಸ್ಯದ ರೂಪದಲ್ಲಿ ವೈರಲ್​ ಆಗುತ್ತಿದೆ.

ಇದಕ್ಕೆ ಈಗ ಆಕಾಶ್​ ಪ್ರತಿಕ್ರಿಯೆ ನೀಡಿದ್ದು, ಅದು ಕೂಡ ಈಗ ವೈರಲ್​ ಆಗುತ್ತಿದೆ. ಆಕಾಶ್​ನ ಸ್ನೇಹಿತನೊಬ್ಬ ಆಕಾಶ್​ಗೆ ಕರೆ ಮಾಡಿ ಈ ಬಗ್ಗೆ ಪ್ರಶ್ನಿಸಿದ್ದಾನೆ. ಅದಕ್ಕೆ ಆಕಾಶ್​ ನೀಡಿರುವ ಹೇಳಿಕೆ ಕೂಡ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಆಕಾಶ್​ ಹೇಳಿರುವುದು ಏನೆಂದರೆ, ನಮ್ಮ ಭೇಟಿ ಎರಡೇ ತಿಂಗಳು ಆಗಿತ್ತು. ಎರಡನೇ ತಿಂಗಳ ವಾರ್ಷಿಕೋತ್ಸವದ ಸಿದ್ಧತೆಯಲ್ಲಿಯೂ ಇದ್ದೆವು. ಆದರೆ ಆಕೆ ಕಾಲೇಜಿನಲ್ಲಿ ಕರೀನಾ ಕಪೂರ್​ನಂತೆ ವರ್ತಿಸುತ್ತಾಳೆ. ತನ್ನ ಕಾರಣಕ್ಕೆ ಬೇರೆ ಹುಡುಗರನ್ನು ಆಕೆ ತಿರಸ್ಕರಿಸುತ್ತಾಳೆ. ಅವಳೇನು ಕರೀನಾ ಕಪೂರಾ ಎಂದಿದ್ದಾನೆ.

ಇದರ ವಿಡಿಯೋ ವೈರಲ್​ ಆಗಿದ್ದು, ಇದು ನಿಜವಾದದ್ದಲ್ಲ, ಬದಲಿಗೆ ವೈರಲ್​ ಆಗುವ ಉದ್ದೇಶದಿಂದ ಸ್ಕ್ರಿಪ್ಟೆಡ್​ ಎಂದು ತೋರುತ್ತಿದೆ ಎಂದು ಹಲವರು ಹೇಳಿದ್ದಾರೆ. ಇನ್ನು ಹಲವರು ತಾವು ಆಕಾಶ್​ ಪರವಾಗಿ ಇದ್ದೇವೆ ಎಂದು ತಮಾಷೆ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...