alex Certify ಭಿಕ್ಷುಕ ಮಕ್ಕಳ ಶಿಕ್ಷಣದ ಖರ್ಚು-ವೆಚ್ಚ ಭರಿಸುತ್ತಿದ್ದಾರೆ ಈ ಶಿಕ್ಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಿಕ್ಷುಕ ಮಕ್ಕಳ ಶಿಕ್ಷಣದ ಖರ್ಚು-ವೆಚ್ಚ ಭರಿಸುತ್ತಿದ್ದಾರೆ ಈ ಶಿಕ್ಷಕರು

ಅಜ್ಮೀರ್: ನಮ್ಮ ದೇಶದಲ್ಲಿ ಅತ್ಯಂತ ಶ್ರೀಮಂತರು ಹಾಗೂ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಜನರಿದ್ದಾರೆ. ಅದೆಷ್ಟೋ ಮಕ್ಕಳು ಶಾಲೆಗೆ ಹೋಗಲಾಗದೆ ಊಟಕ್ಕಾಗಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ. ಬಾಲಕಾರ್ಮಿಕ ಪದ್ಧತಿಗೆ ನಿಷೇಧವಿದ್ದರೂ, ಇಂದಿಗೂ ಅಸಂಖ್ಯಾತ ಮಕ್ಕಳು ಭಿಕ್ಷಾಟನೆಯಿಂದಲೇ ಜೀವನ ಮಾಡುತ್ತಿದ್ದಾರೆ. ಇಂಥ ಮಕ್ಕಳ ಪುನರುಜ್ಜೀವನಕ್ಕಾಗಿ ಇಲ್ಲೊಬ್ಬರು ಮುಂದೆ ಬಂದಿದ್ದಾರೆ.

ರಾಜಸ್ಥಾನದ ಅಜ್ಮೀರ್‌ನ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಸುನಿಲ್ ಜೋಸ್ ಮತ್ತು ಅವರ ಗುಂಪು ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಲು ಮುಂದಾಗಿದ್ದಾರೆ. ಇವರ ಉದ್ದಾನ್ ಸೊಸೈಟಿಯು 50 ಬಾಲ ಭಿಕ್ಷುಕರನ್ನು ದತ್ತು ತೆಗೆದುಕೊಂಡು ಅವರನ್ನು ಸರ್ಕಾರಿ ಶಾಲೆಗಳಲ್ಲಿ ಸೇರಿಸಿ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಉತ್ತಮ ಭವಿಷ್ಯಕ್ಕಾಗಿ ಈ ಮಕ್ಕಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಬೇಕೆಂದು ಬಯಸುತ್ತಿರುವ ಜೋಸ್, ಅವರ ಆಹಾರ ಮತ್ತು ಶಾಲೆಯ ವೆಚ್ಚವನ್ನು ಕೂಡ ಭರಿಸುತ್ತಿದ್ದಾರೆ.

ಜೋಸ್ ಅವರು ಕಯಾರ್ ಮತ್ತು ಪಂಚೀಲ್‌ನಲ್ಲಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದ್ದು ಮಾತ್ರವಲ್ಲದೆ ಅವರಿಗೆ ಶಾಲಾ ವ್ಯಾನ್ ವ್ಯವಸ್ಥೆಯನ್ನೂ ಮಾಡಿದ್ದಾರೆ. ಮಕ್ಕಳು ವಾಸಿಸುತ್ತಿರುವ ಕೊಳೆಗೇರಿಗಳಿಂದ ಅವರನ್ನು ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಅವರಿಗೆ ಮಧ್ಯಾಹ್ನದ ಊಟವೂ ಸಿಗುತ್ತದೆ. ಶಾಲೆ ಮುಗಿದ ಬಳಿಕ ಮಕ್ಕಳನ್ನು ಜೋಸ್ ಮನೆಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಅವರಿಗೆ ಟ್ಯೂಷನ್ ಹಾಗೂ ಭೋಜನವನ್ನು ನೀಡಲಾಗುತ್ತದೆ.

ಜೋಸ್ ತನ್ನ ಸಂಬಳವನ್ನು ಮಕ್ಕಳ ಉಪಹಾರ, ಸಂಜೆಯ ಊಟ ಮತ್ತು ಬಟ್ಟೆಗೆ ತಗಲುವ ಎಲ್ಲಾ ಖರ್ಚುಗಳನ್ನು ಭರಿಸುತ್ತಿದ್ದಾರೆ. ಜೋಸ್‌ ಅವರ ಉದ್ದನ್ ಸೊಸೈಟಿಯು ಒಟ್ಟು ನಾಲ್ವರು ಶಿಕ್ಷಕರನ್ನು ಹೊಂದಿದ್ದು, ಅವರು ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಾರೆ.

ಈ ಪ್ರಯತ್ನಗಳ ಹಿಂದೆ ಬಾಲ ಭಿಕ್ಷುಕರನ್ನು ಭಿಕ್ಷಾಟನೆಯಿಂದ ದೂರವಿಡುವುದು ಮತ್ತು ಅವರನ್ನು ಶಿಕ್ಷಣದಿಂದ ವಂಚಿರಾಗದಂತೆ ಮಾಡುವುದು ಇವರ ಉದ್ದೇಶವಾಗಿದೆ. ಅಲ್ಲದೆ, ಮಕ್ಕಳ ಆರೋಗ್ಯ ಕಾಳಜಿಯನ್ನು ಕೂಡ ಸೊಸೈಟಿ ನೋಡಿಕೊಳ್ಳುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...