alex Certify ʼಪೊಣ್ಣಿಯಿನ್ ಸೆಲ್ವಂʼ ಚಿತ್ರದ ಐಶ್ವರ್ಯಾ ರೈ ಲುಕ್‌ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪೊಣ್ಣಿಯಿನ್ ಸೆಲ್ವಂʼ ಚಿತ್ರದ ಐಶ್ವರ್ಯಾ ರೈ ಲುಕ್‌ ಬಹಿರಂಗ

ಖ್ಯಾತ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶಿಸುತ್ತಿರುವ ಚೋಳ ಸಾಮ್ರಾಜ್ಯ ಪತನದ ಕಥಾ ಹಂದರವುಳ್ಳ ‘ಪೊಣ್ಣಿಯಿನ್ ಸೆಲ್ವಂ’ ತಮಿಳು ಸಿನಿಮಾದ ಶೂಟಿಂಗ್ ಮಧ್ಯಪ್ರದೇಶದ ಓರ್ಛಾದಲ್ಲಿ ಭರದಿಂದ ಸಾಗುತ್ತಿದೆ. ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್‍ ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರು ಶೂಟಿಂಗ್‍ನಲ್ಲಿ ಭಾಗಿಯಾಗಿದ್ದಾಗ ಪಿಂಕ್ ರೇಷ್ಮೆ ಸೀರೆ ಉಟ್ಟು, ಮೈತುಂಬ ಆಭರಣ ಧರಿಸಿ ರಾಣಿಯಂತೆ ಕಂಗೊಳಿಸುತ್ತಿದ್ದರು.

ಮನೆಯಲ್ಲೇ ಮಾಡಿ ಟೇಸ್ಟಿ ಗೋಧಿ ಬಿಸ್ಕೇಟ್

ಇದರ ಫೋಟೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿ ವೈರಲ್ ಆಗಿದೆ. ಅಂದಹಾಗೆ, ಐಶ್ವರ್ಯಾ ಅಭಿನಯದ ಎರಡು ಪಾತ್ರಗಳ ಹೆಸರು ನಂದಿನಿ ಮತ್ತು ಮಂದಾಕಿನಿ ದೇವಿ.

ಕಳೆದ ತಿಂಗಳು ಪುದುಚೆರಿಯಲ್ಲಿ ಈ ಸಿನಿಮಾದ ಕೆಲವು ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ಆ ವೇಳೆ ಐಶ್ವರ್ಯಾ ಅವರು ದಕ್ಷಿಣ ಭಾರತದ ಖ್ಯಾತ ನಟಿ ವರಲಕ್ಷ್ಮೀ ಶರತ್ ಕುಮಾರ್ ಹಾಗೂ ಅವರ ಸೋದರಿ ಪೂಜಾರನ್ನು ಭೇಟಿ ಮಾಡಿ ಫೋಟೊ ಹಂಚಿಕೊಂಡಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...