alex Certify ಮೆಸ್‌ ನಲ್ಲಿ ಕೊಟ್ಟ ಕಳಪೆ ಊಟ ನೋಡಿ ಕಣ್ಣೀರಿಟ್ಟ ಯುಪಿ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಸ್‌ ನಲ್ಲಿ ಕೊಟ್ಟ ಕಳಪೆ ಊಟ ನೋಡಿ ಕಣ್ಣೀರಿಟ್ಟ ಯುಪಿ ಪೊಲೀಸ್

ಉತ್ತರ ಪ್ರದೇಶದ ಪೊಲೀಸ್​ ಪೇದೆಯೊಬ್ಬರು ಪೊಲೀಸ್​ ಮೆಸ್​ನಲ್ಲಿ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕಾನ್​ ಸ್ಟೇಬಲ್​ ಮನೋಜ್​ ಕುಮಾರ್​ ಎಂಬುವರು ದಾಲ್​, ರೊಟ್ಟಿ ಮತ್ತು ಅನ್ನದ ತಟ್ಟೆಯನ್ನು ಹೊತ್ತುಕೊಂಡು ರಸ್ತೆಯಲ್ಲಿ ಅಳುತ್ತಿರುವಾಗ ಹಿರಿಯ ಅಧಿಕಾರಿಯೊಬ್ಬರು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. ಆಹಾರದ ಗುಣಮಟ್ಟದ ಬಗ್ಗೆ ದೂರು ನೀಡಿದರೂ ಯಾವುದೇ ಸುಧಾರಣೆಯಾಗಿಲ್ಲ ಎಂದು ಅವರು ದೂರಿದರು.

ನಮ್ಮೆಲ್ಲರಿಗೂ ಮೆಸ್​ನಲ್ಲಿ ನೀರಿನ ದಾಲ್​ ಮತ್ತು ಬೇಯಿಸದ ರೊಟ್ಟಿಗಳನ್ನು ನೀಡಲಾಗುತ್ತದೆ. ಪೊಲೀಸ್​ ಸಿಬ್ಬಂದಿಗೆ ಪೌಷ್ಠಿಕ ಆಹಾರ ನೀಡುವುದಾಗಿ ರಾಜ್ಯ ಸರ್ಕಾರ ಭತ್ಯೆ ನೀಡುವುದಾಗಿ ಸಿಎಂ ಘೋಷಿಸಿದ್ದರು. ಆದರೆ 12 ಗಂಟೆಗಳ ಕರ್ತವ್ಯದ ನಂತರ ನಮಗೆ ಸಿಗುವುದು ಇದೇ. ಸರಿಯಾದ ಆಹಾರ ತೆಗೆದುಕೊಳ್ಳದಿದ್ದರೆ ನಾವು ಹೇಗೆ ಕೆಲಸ ಮಾಡಬೇಕು ಎಂದು ಕಾನ್​ಸ್ಟೆಬಲ್​ ವಿಡಿಯೋದಲ್ಲಿ ಹೇಳಿದ್ದಾರೆ.

ಇನ್ನೊಂದು ವಿಡಿಯೊದಲ್ಲಿ, ತಟ್ಟೆಯಲ್ಲಿ ಆಹಾರದೊಂದಿಗೆ ಕಾಣಿಸಿಕೊಂಡಿದ್ದು “ಪ್ರಾಣಿಗಳು ಸಹ ಇದನ್ನು ತಿನ್ನುವುದಿಲ್ಲ” ಎಂದು ಜನರಿಗೆ ಹೇಳುತ್ತಿದ್ದಾರೆ. ಈ ವಿಡಿಯೋ ಬಗ್ಗೆ ಸಾಮಾಜಿಕ‌ ಜಾಲತಾಣದಲ್ಲಿ ದೊಡ್ಡ ಚರ್ಚೆಯಾಗುತ್ತಿದ್ದು, ಸರ್ಕಾರವನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...