alex Certify ವಿಮಾನದಲ್ಲಿ ಪ್ರಯಾಣಿಕರ ಲಗೇಜ್ ಗೆ ಸ್ಥಳಾವಕಾಶ ಹೇಗೆ ಕಲ್ಪಿಸುತ್ತಾರೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ಪ್ರಯಾಣಿಕರ ಲಗೇಜ್ ಗೆ ಸ್ಥಳಾವಕಾಶ ಹೇಗೆ ಕಲ್ಪಿಸುತ್ತಾರೆ ಗೊತ್ತಾ….?

ಯಾವುದೇ ಪ್ರಯಾಣವಾಗಲಿ ನಮ್ಮ ಲಗ್ಗೇಜ್ ಬಹು ಪ್ರಮುಖ ವಸ್ತುವಾಗಿರುತ್ತದೆ. ಎಂತಹ ಪರಿಸ್ಥಿತಿಯಲ್ಲೂ ಲಗೇಜ್ ಒಂದನ್ನು ಬಿಟ್ಟು ನಾವು ಬೇರೆಡೆಗೆ ದೃಷ್ಟಿ ತಪ್ಪಿಸಿದರೆ ಕಳುವಾಗುವ ಅಪಾಯ ಇದ್ದೇ ಇರುತ್ತದೆ. ಅದರಲ್ಲೂ ವಿಮಾನದಲ್ಲಿ ಸಂಚರಿಸುವಾಗ ಎಷ್ಟು ಕಡಿಮೆ ಸಾಧ್ಯವೋ ಅಷ್ಟು ಲಗೇಜ್ ಇರುವುದು ಉತ್ತಮ.

ಸುಮಾರು 500 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ವಿಮಾನದಲ್ಲಿ ಅಷ್ಟು ಜನರ ಲಗೇಜ್‌ ಗೆ ವಿಮಾನದ ಸಿಬ್ಬಂದಿ ಹೇಗೆ ಅಚ್ಚುಕಟ್ಟಿನ ಜಾಗವನ್ನು ಹೇಗೆ ಕಲ್ಪಿಸುತ್ತಾರೆ ಎನ್ನುವುದೇ ಇದುವರೆಗಿನ ದೊಡ್ಡ ರಹಸ್ಯವಾಗಿತ್ತು. ಅದನ್ನು ಟಿಕ್ ಟಾಕ್ ವೀಡಿಯೋ ಮೂಲಕ ಸ್ಟೀಫನ್ ಎಂಬಾತ ಬಯಲುಗೊಳಿಸಿದ್ದಾರೆ.

ವಿಮಾನದಲ್ಲಿರುವ ಕಾರ್ಗೋ ಸ್ಪೇಸ್ ಪ್ರದೇಶದಲ್ಲಿ ಪ್ರಯಾಣಿಕರ ಎಲ್ಲಾ ಲಗ್ಗೇಜುಗಳನ್ನು ಇರಿಸಲಾಗುತ್ತದೆ. ಕನ್ವೇಯರ್ ಬೆಲ್ಟ್ ಮೇಲೆ ಎಲ್ಲಾ ಲಗೇಜಗಳು ಸಾವಕಾಶವಾಗಿ ಈ ಪ್ರದೇಶಕ್ಕೆ ಸಾಗಿಸಲ್ಪಡುತ್ತವೆ. ಅಲ್ಲಿ ಒಂದರ ಮೇಲೊಂದರಂತೆ ಲಗೇಜ್ ಗಳನ್ನು ಇರಿಸಿ ಜೋಪಾನ ಮಾಡಲಾಗುತ್ತದೆ. ಯೂಟ್ಯೂಬ್ ನಲ್ಲಿ ಕೂಡ ಸ್ಟೀಫನ್ ತನ್ನ ಈ ವಿಶಿಷ್ಟ ವಿಡಿಯೋವನ್ನು ಹಂಚಿಕೊಂಡಿದ್ದಾನೆ‌. ಪ್ಯಾಕಿಂಗ್ ಬ್ಯಾಗ್ಸ್ ಇನ್ ದ ಏರ್ಪ್ಲೇನ್ ಎಂದು ಶೀರ್ಷಿಕೆ ನೀಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...