alex Certify ಹೊಸ ಬಟ್ಟೆ ಕೇಳಿದ್ದಕ್ಕೆ ಪತ್ನಿಯನ್ನೇ ಹೊರಗಟ್ಟಿದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಬಟ್ಟೆ ಕೇಳಿದ್ದಕ್ಕೆ ಪತ್ನಿಯನ್ನೇ ಹೊರಗಟ್ಟಿದ ಪತಿ

ಗಂಡ-ಹೆಂಡತಿ ಎಂದರೆ ನೂರಾರು ಅಸಮಾಧಾನಗಳು ಇದ್ದೇ ಇರುತ್ತವೆ. ಮಾಡುವ ನೂರಾರು ಕೆಲಸಗಳಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ. ಎಲ್ಲರ ಮನೆಯಲ್ಲೂ ಇದೇ ರೀತಿಯ ಮನಸ್ತಾಪಗಳ ಕಾರಣ ನಿತ್ಯ ಜಗಳ ಇರುತ್ತದೆ. ಅಹಮದಾಬಾದ್‌ನಲ್ಲಿ 38 ವರ್ಷದ ಮಹಿಳೆಯ ಕತೆ ಸ್ವಲ್ಪ ಭಿನ್ನ.

ಯಾವಾಗಲೂ ಹೊಸ ಬಟ್ಟೆ ಕೊಡಿಸಿ ಎಂದು ಗಂಡನನ್ನು ಗೋಗರೆದು ಹಿಂಸಿಸುತ್ತಿದ್ದ ಪತ್ನಿಯನ್ನು ಪತಿರಾಯ ದೂರ ತಳ್ಳಿದ್ದಾನೆ. ಆಕೆ ಸೀದಾ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ.

ಅದಲ್ಲದೇ ಗಂಡ ಮತ್ತು ಅವರ ಕುಟುಂಬಸ್ಥರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾರೆ ಎಂದು ಕೂಡ ದೂರಿನಲ್ಲಿ ಆರೋಪಿಸಿದ್ದಾಳೆ.

ಮತ್ತೊಂದು ವಿನಾಶಕಾರಿ ಹಂತ ತಲುಪಿದ ಉಕ್ರೇನ್-ರಷ್ಯಾ ವಾರ್: ಉಕ್ರೇನ್ ಉಡೀಸ್ ಗೆ ಧಾವಿಸಿದ ರಷ್ಯಾ ಯುದ್ಧನೌಕೆಗಳು

ನನಗೆ ಹಳೆಯ ಬಟ್ಟೆಗಳು ಧರಿಸಲು ಆಗುತ್ತಿರಲಿಲ್ಲ. ಹಾಗಾಗಿ ಹೊಸ ಬಟ್ಟೆ ಕೊಡಿಸಲು ಗಂಡನಿಗೆ ಕೇಳಿದೆ. ಅಷ್ಟಕ್ಕೇ ಸಿಟ್ಟು ಮಾಡಿಕೊಂಡು ಗಂಡ ದೂರವಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾಳೆ. ಪಟಾನ್‌ ಮೂಲದ ಗಂಡನ ಜತೆಗೆ ಘಾಟ್ಲೊಡಿಯಾದಲ್ಲಿ ಮಹಿಳೆ ವಾಸವಿದ್ದಳು ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...