alex Certify ಇಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಮಾಂಸಾಹಾರ ಮಾರಾಟಕ್ಕೆ ಬ್ರೇಕ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಮಾಂಸಾಹಾರ ಮಾರಾಟಕ್ಕೆ ಬ್ರೇಕ್​….!

ಗುಜರಾತ್​ನಲ್ಲಿ ಮಾಂಸಾಹಾರ ಪದಾರ್ಥಗಳ ಮೇಲಿನ ಸಮರ ಮುಂದುವರಿದಿದ್ದು ಅಹಮದಾಬಾದ್​​ ಮುನ್ಸಿಪಲ್​ ಕಾರ್ಪೋರೇಷನ್​​​ ವ್ಯಾಪ್ತಿಯ ಸಾರ್ವಜನಿಕ ರಸ್ತೆಗಳ ಬದಿಯಲ್ಲಿರುವ ಅಂಗಡಿಗಳಲ್ಲಿ ಮಾಂಸಾಹಾರ ಮಾರಾಟ ನಿಷೇಧಿಸಲಾಗಿದೆ.

ಸಾರ್ವಜನಿಕ ರಸ್ತೆಗಳಲ್ಲಿ, ಶಾಲಾ ಕಾಲೇಜು ಹಾಗೂ ಧಾರ್ಮಿಕ ಸ್ಥಳಗಳಿಂದ 100 ಮೀಟರ್​ ವ್ಯಾಪ್ತಿಯಲ್ಲಿ ಯಾವುದೇ ಮಾಂಸಾಹಾರಿ ಸ್ಟಾಲ್​ಗಳನ್ನು ನಿರ್ಮಿಸಲು ಅವಕಾಶವನ್ನು ನಿರ್ಬಂಧಿಸಲಾಗಿದೆ ಎಂದು ಅಹಮದಾಬಾದ್​ ಮುನ್ಸಿಪಲ್​ ಕಾರ್ಪೋರೇಷನ್​​​ ಆದೇಶ ಹೊರಡಿಸಿದೆ ಎಂದು ಎಎಂಸಿ ನಗರ ಯೋಜನಾ ಸಮಿತಿ ಅಧ್ಯಕ್ಷ ದೇವಾಂಗ್​ ದಾನಿ ಹೇಳಿದ್ದಾರೆ.

ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತಿನ್ನಿ ಖರ್ಜೂರ

ಸಾರ್ವಜನಿಕ ರಸ್ತೆಗಳ ಸಮೀಪದಲ್ಲೇ ಮಾಂಸಾಹಾರ ಅಂಗಡಿಗಳು ಇರುವ ಬಗ್ಗೆ ಸಾಕಷ್ಟು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಾಂಗ್​ ಹೇಳಿದ್ದಾರೆ.

ಮಾಂಸಾಹಾರ ಸ್ಟಾಲ್​ಗಳ ನಿಷೇಧದ ಕುರಿತಂತೆ ಪ್ರತಿಕ್ರಿಯೆ ನೀಡಿದ ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್​, ಜನರು ತಮಗೆ ಬೇಕಾದ ಆಹಾರವನ್ನು ಸೇವಿಸಲು ಸ್ವತಂತ್ರರು ಎಂದು ಹೇಳಿದ್ದಾರೆ.

ಇಲ್ಲಿ ಸಸ್ಯಹಾರಿ ಅಥವಾ ಮಾಂಸಾಹಾರಿ ಎಂಬ ಪ್ರಶ್ನೆ ಉದ್ಭವಿಸೋದಿಲ್ಲ. ಜನರು ತಮಗೆ ಬೇಕಾದ ಆಹಾರವನ್ನು ಸೇವಿಸಲು ಸ್ವತಂತ್ರ್ಯರಿದ್ದಾರೆ. ಆದರೆ ಸ್ಟಾಲ್​ಗಳಲ್ಲಿ ಮಾರಾಟ ಮಾಡುವ ಆಹಾರಗಳು ಹಾನಿಕಾರಕವಾಗಿರಬಾರದು ಹಾಗೂ ಇದರಿಂದ ಸಂಚಾರಕ್ಕೂ ಅಡ್ಡಿಯಾಗುವಂತಿರಬಾರದು ಎಂದು ಭೂಪೇಂದ್ರ ಪಟೇಲ್​ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...