ಕೋವಿಡ್ ಮೂರನೇ ಅಲೆಯ ಭಯದ ನಡುವೆಯೇ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ನಿಗೂಢ ಜ್ವರವೊಂದು ತನ್ನ ಕಬಂಧಬಾಹುವನ್ನು ಚಾಚುತ್ತಿದೆ. ಈ ನಿಗೂಢ ಜ್ವರದಿಂದ ಕಳೆದ 24 ಗಂಟೆಗಳಲ್ಲಿ 10 ವರ್ಷ ಕಡಿಮೆ ವಯಸ್ಸಿನ ಐವರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಎಲ್ಲಾ ಮಕ್ಕಳು ಡೆಂಗ್ಯೂ ಮಾದರಿಯ ಲಕ್ಷಣಗಳನ್ನು ಹೊಂದಿದ್ದರು ಎನ್ನಲಾಗಿದೆ.
ಆರ್ಯನ್ ಪರ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ ಹೃತಿಕ್ಗೆ ಟಾಂಗ್ ಕೊಟ್ಟ ಕಂಗನಾ
ಕಳೆದ 1 ತಿಂಗಳಲ್ಲಿ ಆಗ್ರಾ ಜಿಲ್ಲೆಯಲ್ಲಿ ಈ ನಿಗೂಢ ಜ್ವರದಿಂದಾಗಿ 40 ಮಕ್ಕಳು ಸೇರಿದಂತೆ 50 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಳೆದ 24 ಗಂಟೆಗಳಲ್ಲಿ ಸಾವನ್ನಪ್ಪಿದ ಐವರು ಮಕ್ಕಳನ್ನು ದಿವ್ಯಾ(8), ಶಿವಾನಿ(4), ಉಮಾ(7), ಲಕ್ಷ್ಮೀ( 3 ತಿಂಗಳು) ಹಾಗೂ ನಿತಿನ್(8) ಎಂದು ಗುರುತಿಸಲಾಗಿದೆ.
ಅಂದ ಹಾಗೆ ಆಗ್ರಾ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನದವರೆಗೆ 250 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಇಂತಹ ರೋಗಿಗಳನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದಾರೆ. ವೈರಲ್ ಜ್ವರ ಹೆಚ್ಚಿರುವ ಪ್ರದೇಶಗಳಲ್ಲಿ ಮೆಡಿಕಲ್ ಕ್ಯಾಂಪ್ ನಡೆಸಲಾಗ್ತಿದೆ ಎಂದು ಮೆಡಿಕಲ್ ಆಫಿಸರ್ ಅರುಣ್ ಕುಮಾರ್ ಶ್ರೀವಾತ್ಸವ ಹೇಳಿದ್ದಾರೆ.