alex Certify ಮನಕಲಕುತ್ತೆ ತಾಯಿಯನ್ನ ಕಳೆದುಕೊಂಡ ಈ ‘ಆಮ್ಲಜನಕ ಮಹಿಳೆ’ಯ ದಾರುಣ ಕತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುತ್ತೆ ತಾಯಿಯನ್ನ ಕಳೆದುಕೊಂಡ ಈ ‘ಆಮ್ಲಜನಕ ಮಹಿಳೆ’ಯ ದಾರುಣ ಕತೆ..!

36 ವರ್ಷದ ಸೀತಾದೇವಿ ಎಂಬವರು ಅನೇಕರಿಗೆ ಜೀವದಾನ ಮಾಡಿದ್ದಾರೆ. ಕೋವಿಡ್​ನಿಂದ ತಮ್ಮ ತಾಯಿಯನ್ನ ಕಳೆದುಕೊಂಡ ಸೀತಾದೇವಿ ಇದೀಗ ಚೆನ್ನೈನ ʼಆಮ್ಲಜನಕ ಮಹಿಳೆʼ ಎಂಬ ಪಟ್ಟವನ್ನ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತನ್ನ ತಾಯಿಗೆ ಬಂದ ಸ್ಥಿತಿ ಯಾರಿಗೂ ಬರಕೂಡದು ಎಂದು ನಿರ್ಧರಿಸಿದ ಸೀತಾದೇವಿ ಆಟೋಗೆ ಆಕ್ಸಿಜನ್​ ಸಂಪರ್ಕ ನೀಡಿದ್ದು ಈ ನೀಲಿ ಆಟೋದ ಸಹಾಯದಿಂದ ಅನೇಕರ ಜೀವ ಕಾಪಾಡಿದ್ದಾರೆ. ರಾಜೀವ್ ಗಾಂಧಿ ಆಸ್ಪತ್ರೆ ಹೊರಗೆ ನಿಂತುಕೊಳ್ಳುವ ಸೀತಾ ದೇವಿ ಆಮ್ಲಜನಕದ ಅಗತ್ಯ ಇರುವವರಿಗೆ ಹಾಸಿಗೆ ಸಿಗುವವರೆಗೂ ತನ್ನ ಆಟೋದಲ್ಲೇ ಆಶ್ರಯ ನೀಡ್ತಿದ್ದಾರೆ.

ನಾವು ಈಗಾಗಲೇ ಮುನ್ನೂರಕ್ಕೂ ಅಧಿಕ ಕೋವಿಡ್​ ಹೊಂದಿದ್ದ ಜೀವಗಳನ್ನ ಕಾಪಾಡಿದ್ದೇವೆ. ಅವರಿಂದ ಯಾವುದೇ ಹಣವನ್ನ ಪಡೆಯದೇ ಈ ಸಹಾಯ ಮಾಡಲಾಗ್ತಿದೆ ಎಂದು ಸೀತಾ ದೇವಿ ಹೇಳಿದ್ರು.

ಆಕ್ಸಿಜನ್​ ಅಭಾವದಿಂದಾಗಿ ಸೀತಾ ದೇವಿ ಮೇ 1ನೇ ತಾರೀಖಿನಂದು ತನ್ನ ತಾಯಿಯನ್ನ ಕೋವಿಡ್​ನಿಂದ ಕಳೆದುಕೊಂಡಿದ್ದರು. ರಾಜೀವ್​ ಗಾಂಧಿ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ಆಂಬುಲೆನ್ಸ್​ಗಾಗಿ ಸೀತಾದೇವಿ ಕುಟುಂಬ ಬರೋಬ್ಬರಿ 12 ಗಂಟೆಗಳ ಕಾಲ ಕಾದಿತ್ತು. ಸೀತಾದೇವಿ ವೆಂಟಿಲೇಟರ್​ ಸೌಲಭ್ಯ ಪಡೆಯುವಲ್ಲಿ ಯಶಸ್ವಿಯಾದರೂ ಸಹ ತಮ್ಮ ತಾಯಿಯನ್ನ ದಾಖಲು ಮಾಡುವಷ್ಟರಲ್ಲಿ ತುಂಬಾನೇ ವಿಳಂಬವಾಗಿತ್ತು.

ತನ್ನ ತಾಯಿಗೆ ಬಂದ ಸ್ಥಿತಿ ಇನ್ಯಾರಿಗೂ ಬರಬಾರದು ಎಂದು ನಿರ್ಧರಿಸಿದ ಸೀತಾ ದೇವಿ ಆಮ್ಲಜನಕದ ತುರ್ತು ಅವಶ್ಯಕತೆ ಇರುವವರಿಗೆ ತಮ್ಮ ಆಟೋದಲ್ಲೇ ಆಕ್ಸಿಜನ್​ ಸೌಲಭ್ಯ ನೀಡುವ ಕೆಲಸ ಮಾಡ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...