alex Certify ಸೇಬು ಕದ್ದವನಿಂದ ಈಗ 2 ಕ್ರೇಟ್ ಟೊಮೆಟೊ ಕಳ್ಳತನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೇಬು ಕದ್ದವನಿಂದ ಈಗ 2 ಕ್ರೇಟ್ ಟೊಮೆಟೊ ಕಳ್ಳತನ

ದುಬಾರಿಯಾಗಿರುವ ಟೊಮೆಟೊ ಈಗ ಸುದ್ದಿಯಲ್ಲಿದೆ. ಇಲ್ಲೊಬ್ಬ ಮಹಾಶಯ ಸೇಬು ಬೆಲೆಯಷ್ಟು ದುಬಾರಿಯಾಗಿರುವ ಟೊಮೆಟೊ ಕದ್ದು ಸಿಕ್ಕಿಬಿದ್ದಿದ್ದಾನೆ‌.

ತಮಿಳುನಾಡಿನ‌ ಸೇಲಂ‌ ಜಿಲ್ಲೆ ಪೆರುಮಾಕವುಂಡಂಪಟ್ಟಿ ಗ್ರಾಮದ ತರಕಾರಿ ಅಂಗಡಿ ಮಾಲೀಕ ಶಂಕರ್ ತಮ್ಮ ಅಂಗಡಿಯಲ್ಲಿ ಸುಮಾರು 60 ಕಿಲೋ ತೂಕದ ಎರಡು ಕ್ರೇಟ್ ಟೊಮೆಟೊ ನಾಪತ್ತೆಯಾಗಿದ್ದನ್ನು ಕಂಡು ಆಶ್ಚರ್ಯಚಕಿತರಾಗಿದ್ದರು.

ನಿಂತಿದ್ದ ವ್ಯಾನ್ ಗೆ ಟ್ರಕ್ ಡಿಕ್ಕಿ: ಭೀಕರ ಅಪಘಾತದಲ್ಲಿ 6 ಜನ ಸಾವು, 10 ಮಂದಿಗೆ ಗಾಯ

ಬಳಿಕ ಸಿಸಿ ಟಿವಿ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಮುಂಜಾನೆ ತನ್ನ ದ್ವಿಚಕ್ರ ವಾಹನವನ್ನು ಅಂಗಡಿಯ ಬಳಿ ನಿಲ್ಲಿಸಿ, ಎರಡು ಕ್ರೇಟ್ ಟೊಮೆಟೊಗಳೊಂದಿಗೆ ಓಡಿಹೋಗುತ್ತಿರುವುದನ್ನು ಕಂಡುಕೊಂಡರು.

ವಾಹನದ ನೋಂದಣಿ ಸಂಖ್ಯೆ ಆಧರಿಸಿ ಬಲೆ ಬೀಸಿದ ಶಂಕರ್, ಪೊಲೀಸರಿಗೆ ಮಾಹಿತಿ ನೀಡಿದರು. ಕಳ್ಳನನ್ನು ಚಿಂರಾಜ್ ಎಂದು ಗುರುತಿಸಲಾಗಿದೆ. ಈ ಹಿಂದೆ ಸೆವ್ವೈಪೆಟ್ಟೈನ ಅಂಗಡಿಯೊಂದರಿಂದ ಸೇಬು ಕಳ್ಳತನ ಮಾಡಿ ಚಿಂರಾಜ್ ಸಿಕ್ಕಿ ಬಿದ್ದಿದ್ದ ಇದೀಗ ಆತನನ್ನ ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...