alex Certify SHOCKING: ಬಹಿರಂಗವಾಯ್ತು ಶ್ರದ್ಧಾ ಬರ್ಬರ ಹತ್ಯೆಯ ಮತ್ತಷ್ಟು ಬೆಚ್ಚಿಬೀಳಿಸುವ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಬಹಿರಂಗವಾಯ್ತು ಶ್ರದ್ಧಾ ಬರ್ಬರ ಹತ್ಯೆಯ ಮತ್ತಷ್ಟು ಬೆಚ್ಚಿಬೀಳಿಸುವ ಮಾಹಿತಿ

ನವದೆಹಲಿ: ದೆಹಲಿ ಪೊಲೀಸರು 28 ವರ್ಷದ ಶ್ರದ್ಧಾ ವಾಕರ್ ಭೀಕರ ಹತ್ಯೆಗೆ ಸಂಬಂಧಿಸಿದ ಹೊಸ ವಿವರಗಳನ್ನು ಪ್ರತಿದಿನ ಬಹಿರಂಗಪಡಿಸುತ್ತಿದ್ದಾರೆ. ಶ್ರದ್ಧಾ ದೇಹವನ್ನು ಮೃದುಗೊಳಿಸಲು ಅಫ್ತಾಬ್ ಬಿಸಿ ನೀರು ಬಳಸಿದ್ದಾನೆ ಎಂದು ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಮಾಹಿತಿ ಗೊತ್ತಾಗಿದೆ.

ಮಹತ್ವಾಕಾಂಕ್ಷಿ ಪತ್ರಕರ್ತೆಯನ್ನು ಮೇ 18 ರಂದು ಆಕೆಯ ಲೈವ್-ಇನ್ ಪಾಲುದಾರ ಅಫ್ತಾಬ್ ಪೂನಾವಾಲಾ ಕತ್ತು ಹಿಸುಕಿ ಕೊಂದ ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ಅವರ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ 300-ಲೀಟರ್ ಫ್ರಿಡ್ಜ್ನಲ್ಲಿ ಇರಿಸಿದ್ದರು. ಮಧ್ಯರಾತ್ರಿ ವೇಳೆ ನಗರ ಹಾಗೂ ನಿರ್ಜನ ಪ್ರದೇಶದಲ್ಲಿ ಮೃತದೇಹದ ಭಾಗಗಳನ್ನು ಎಸೆದಿದ್ದ.

ಹಣಕಾಸಿನ ವಿಚಾರದಲ್ಲಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮೇ 18 ರ ಸಂಜೆ ಜಗಳದ ವೇಳೆ ಅಫ್ತಾಬ್ ಶ್ರದ್ಧಾಳನ್ನು ಕೊಂದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಅಫ್ತಾಬ್ ಶ್ರದ್ಧಾಳ ದೇಹವನ್ನು ಮೃದುಗೊಳಿಸಲು ಬಿಸಿನೀರನ್ನು ಸುರಿದಿದ್ದ, ಇದರಿಂದ ಕತ್ತರಿಸಲು ಸುಲಭವಾಗುತ್ತದೆ ಎಂಬ ಕಾರಣದಿಂದ ಮೇ 19 ರಂದು ಇಮ್ಮರ್ಶನ್ ರಾಡ್ ವಾಟರ್ ಹೀಟರ್ ಮತ್ತು ರೆಫ್ರಿಜರೇಟರ್ ಅನ್ನು ಖರೀದಿಸಿದ್ದರು. ಇದರಿಂದ ಮೃತದೇಹವನ್ನು ಕತ್ತರಿಸಿ ಅದನ್ನು ಸಂಗ್ರಹಿಸಬಹುದು ಎಂಬುದು ಅವನ ಯೋಜನೆಯಾಗಿತ್ತು.

ನೀರನ್ನು ಬಿಸಿ ಮಾಡಿ, ಅದರಲ್ಲಿ ಸ್ವಲ್ಪ ಬ್ಲೀಚಿಂಗ್ ಪೌಡರ್ ಬೆರೆಸಿ, ಕಠಿಣವಾದ ಮೋರ್ಟಿಸ್(ಸಾವಿನ ನಂತರ ರಾಸಾಯನಿಕ ಬದಲಾವಣೆಗಳಿಂದ ದೇಹದ ಸ್ನಾಯುಗಳು ಗಟ್ಟಿಯಾಗುವುದು) ಸೆಟ್ ಮಾಡಿದ ನಂತರ ಅದನ್ನು ಮೃದುಗೊಳಿಸಲು ಶ್ರದ್ಧಾ ಅವರ ದೇಹಕ್ಕೆ ಸುರಿಯುತ್ತಾನೆ. ಪೊಲೀಸರು ಅಫ್ತಾಬ್‌ನ ಮನೆಯಿಂದ ಫ್ರಿಡ್ಜ್, ಹೀಟರ್, ವ್ಯಾಕ್ಯೂಮ್ ಕ್ಲೀನರ್ ಮತ್ತು ಬ್ಲೀಚಿಂಗ್ ಪೌಡರ್ ವಶಪಡಿಸಿಕೊಂಡಿದ್ದಾರೆ.

ದೇಹವನ್ನು ಕತ್ತರಿಸಿದಾಗ ರಕ್ತವು ಚರಂಡಿಗೆ ಹರಿಯುತ್ತದೆ ಎಂದು ಅರಿವಾಗಿ ಬಾತ್ರೂಮ್ ಟ್ಯಾಪ್ ಅನ್ನು ತೆರೆದಿಡುತ್ತಿದ್ದ, ಇದರಿಂದ ರಕ್ತ ನೀರಿನೊಂದಿಗೆ ಸೇರಿ ಹರಿಯುತ್ತದೆ. ಯಾರಿಗೂ ಗೊತ್ತಾಗುವುದಿಲ್ಲ ಎಂದುಕೊಂಡಿದ್ದ. ಸ್ಥಳವನ್ನು ಸ್ವಚ್ಛಗೊಳಿಸಲು ಬ್ಲೀಚ್ ಕೂಡ ಬಳಸಿದ್ದರು. ಅಫ್ತಾಬ್ ತನ್ನ ಗುರುತನ್ನು ಮರೆಮಾಚಲು ಶ್ರದ್ಧಾಳ ಮುಖವನ್ನು ಸುಟ್ಟು ಹಾಕಿದ್ದನ್ನು ಬಹಿರಂಗಪಡಿಸಿದ್ದಾನೆ.

ತನಿಖೆಯ ವೇಳೆ ಅಫ್ತಾಬ್ ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರೊಂದಿಗೆ ಸ್ನೇಹ ಬೆಳೆಸಿದ್ದು, ಒಬ್ಬಂಟಿಯಾಗಿರುವಾಗ ಅವರನ್ನು ಮನೆಗೆ ಕರೆಸಿಕೊಂಡಿದ್ದ ಎಂಬುದು ಬೆಳಕಿಗೆ ಬಂದಿದೆ. ವಿವಿಧ ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ವಿವಿಧ ಸಾಮಾಜಿಕ ಮಾಧ್ಯಮಗಳು ಮತ್ತು ಡೇಟಿಂಗ್ ಪ್ಲಾಟ್‌ ಫಾರ್ಮ್‌ಗಳಲ್ಲಿ ಹಲವಾರು ಖಾತೆಗಳನ್ನು ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಫ್ತಾಬ್ 15-20 ಹುಡುಗಿಯರೊಂದಿಗೆ ಸ್ನೇಹ ಹೊಂದಿದ್ದು, ಹೆಚ್ಚಿನವರು ಆತನ ಮನೆಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಈಗ ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳಾದ ಬಂಬಲ್ ಮತ್ತು ಟಿಂಡರ್‌ನಿಂದ ಖಾತೆಗಳ ವಿವರಗಳನ್ನು ಕೇಳಿದ್ದಾರೆ.

ಮೂಲಗಳ ಪ್ರಕಾರ ಅಫ್ತಾಬ್ ಶ್ರದ್ಧಾ ತಲೆಯನ್ನು ಡಬಲ್ ಡೋರ್ ರೆಫ್ರಿಜರೇಟರ್‌ನ ಫ್ರೀಜರ್‌ ನಲ್ಲಿ ಇರಿಸಿದ್ದ. ಶ್ರದ್ಧಾ ದೇಹದ ಉಳಿದ ತುಂಡುಗಳನ್ನು ಕಸದ ಚೀಲದಲ್ಲಿ ತುಂಬಿ ಕೆಳಗಿನ ಕಂಪಾರ್ಟ್‌ ಮೆಂಟ್‌ನಲ್ಲಿ ಇರಿಸಿದ್ದ. ಪೊಲೀಸರು ಇದುವರೆಗೆ ಶ್ರದ್ಧಾಳದ್ದು ಎಂದು ನಂಬಲಾದ 13 ದೇಹದ ಭಾಗಗಳನ್ನು ವಿವಿಧ ಪ್ರದೇಶಗಳಿಂದ ವಶಪಡಿಸಿಕೊಂಡಿದ್ದು, ಡಿಎನ್‌ಎ ವಿಶ್ಲೇಷಣೆಗೆ ಕಳುಹಿಸಲಾಗಿದೆ.

ಆರೋಪಿಯು ತನಿಖೆಯನ್ನು ದಾರಿತಪ್ಪಿಸಲು ತಪ್ಪು ಮಾಹಿತಿ ನೀಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಅಫ್ತಾಬ್‌ನ ನಾರ್ಕೋ ವಿಶ್ಲೇಷಣೆ ಪರೀಕ್ಷೆ ನಡೆಸಲು ನ್ಯಾಯಾಲಯದಿಂದ ಅನುಮತಿ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...