alex Certify ಭಾರತೀಯ ವಧುಗಾಗಿ ಮಲಯಾಳಂನಲ್ಲಿ ವಿವಾಹ ಪ್ರತಿಜ್ಞೆ ಮಾಡಿದ ಅಮೆರಿಕನ್ ವರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ವಧುಗಾಗಿ ಮಲಯಾಳಂನಲ್ಲಿ ವಿವಾಹ ಪ್ರತಿಜ್ಞೆ ಮಾಡಿದ ಅಮೆರಿಕನ್ ವರ…!

ಆಫ್ರಿಕನ್- ಅಮೆರಿಕನ್ ಪ್ರಜೆಯೊಬ್ಬ ಭಾರತೀಯ ವಧುವನ್ನು ವರಿಸುವ ಸಂದರ್ಭದಲ್ಲಿ ಆಕೆಯ ಸ್ಥಳೀಯ ಭಾಷೆಯಾದ ಮಲಯಾಳಂನಲ್ಲಿ ವಿವಾಹದ ಪ್ರತಿಜ್ಞೆ ನುಡಿ ಹೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಹೃದಯ ಗೆಲ್ಲುತ್ತಿದೆ.

ಎರಡು ದಿನಗಳ ಹಿಂದೆಯಷ್ಟೇ ಜೆನೋವಾ ಜೂಲಿಯನ್ ಪ್ರಯರ್ ಎಂಬುವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

“ನನ್ನ ಪತಿ ನನ್ನ ಮಾತೃಭಾಷೆಯಾದ ಮಲಯಾಳಂನಲ್ಲಿ ವಿವಾಹದ ಪ್ರತಿಜ್ಞೆಯ ಭಾಗವನ್ನು ಕಲಿತು ಹೇಳಿದರು. ನಾನು ಭಾವುಕಳಾಗಿ ತುಂಬಾ ಅಳುತ್ತಿದ್ದೆ” ಎಂದು ಶೀರ್ಷಿಕೆ ಕೂಡ ಇದೆ.

ವರ ಡ್ಯಾನ್ಜೆಲ್ ಎ. ಪೈರೋರ್ ತನ್ನ ಹೆಂಡತಿಯೊಂದಿಗೆ ನಿಂತು ಫೋನ್‌ ನೋಡಿ ಓದುವುದನ್ನು ಕಾಣಬಹುದು. ಆತ ಮಲಯಾಳಂ ಮತ್ತು ಇಂಗ್ಲಿಷ್ ಎರಡರಲ್ಲೂ ಪ್ರತಿಜ್ಞೆ ಮಾಡುತ್ತಾನೆ.

ಇಂಗ್ಲಿಷ್‌ನಲ್ಲಿ ಪ್ರಾರಂಭಿಸಿ ತಕ್ಷಣವೇ ಮಲಯಾಳಂಗೆ ಬದಲಾಯಿಸಿ “ನಾನು ನನ್ನ ಹೆಂಡತಿಯನ್ನು ಕಂಡುಕೊಂಡಿದ್ದೇನೆ” ಎಂದು ಹೇಳುತ್ತಾನೆ.

“ನಾನು ಭಗವಂತನಿಂದ ಅನುಗ್ರಹ ಕಂಡುಕೊಂಡಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಆತ ಹೇಳುತ್ತಿದ್ದಂತೆ ಹರ್ಷೋದ್ಗಾರ ಮತ್ತು ಚಪ್ಪಾಳೆ ಕೇಳಿಬರುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ 67,000 ಕ್ಕೂ ಹೆಚ್ಚು ವೀಕ್ಷಣೆ ಮತ್ತು 5,000ಕ್ಕೂ ಹೆಚ್ಚು ಲೈಕ್‌ ಸ್ವೀಕರಿಸಿದೆ. ಅನೇಕರು ಕಾಮೆಂಟ್ ಮಾಡಿ ಶ್ಲಾಘಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...