alex Certify ಕಾಬೂಲ್ ನಲ್ಲಿ ಆತ್ಮಹತ್ಯಾ ದಾಳಿಕೋರನ ಹತ್ಯೆ; ತಪ್ಪಿದ ಭಾರೀ ಅನಾಹುತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಬೂಲ್ ನಲ್ಲಿ ಆತ್ಮಹತ್ಯಾ ದಾಳಿಕೋರನ ಹತ್ಯೆ; ತಪ್ಪಿದ ಭಾರೀ ಅನಾಹುತ

ಕಾಬೂಲ್: ಅಫ್ಘಾನಿಸ್ತಾನದ ಜನರಿಗೆ ನೆಮ್ಮದಿ ಸಿಗುವುದು ಯಾವಾಗ ಎಂದು ಜಗತ್ತೇ ಇಂದಿಗೂ ಮಮ್ಮಲ ಮರಗುವಂತಾಗುತ್ತಿದೆ. ತಾಲಿಬಾನ್ ವಶಪಡಿಸಿಕೊಳ್ಳುತ್ತಿದ್ದಂತೆ ಅಲ್ಲಿ ಒಂದಿಲ್ಲೊಂದು ಘಟನೆಗಳು ಜನರ ನೆಮ್ಮದಿ ಕಸಿದು ತಿನ್ನುತ್ತಿವೆ.

ಇಂದು ಕಾಬೂಲ್ ನ ಪಾಸ್ ಪೋರ್ಟ್ ಕಚೇರಿಯ ಪ್ರವೇಶ ದ್ವಾರದ ಹತ್ತಿರ ಆತ್ಮಹತ್ಯಾ ದಾಳಿಕೋರನನ್ನು ಹತ್ಯೆ ಮಾಡಲಾಗಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಆತ್ಮಹತ್ಯಾ ದಾಳಿಕೋರ ಇಂದು ಪಾಸ್ ಪೋರ್ಟ್ ಕಚೇರಿಯ ದ್ವಾರ ಪ್ರವೇಶಿಸಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಈ ಘಟನೆಯಲ್ಲಿ ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ಅಲ್ಲಿನ ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ. ಸದ್ಯ ಪಾಸ್ ಪೋರ್ಟ್ ಕಚೇರಿಯ ಸುತ್ತಮುತ್ತಲಿನ ಪ್ರದೇಶವನ್ನು ಬಂದ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...