alex Certify BREAKING: ಅಫ್ಘನ್ ಸಂಘರ್ಷ – ಭಾರತಕ್ಕೆ ಮರಳಿದ ರಾಯಭಾರ ಕಚೇರಿಯ 140 ಅಧಿಕಾರಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಅಫ್ಘನ್ ಸಂಘರ್ಷ – ಭಾರತಕ್ಕೆ ಮರಳಿದ ರಾಯಭಾರ ಕಚೇರಿಯ 140 ಅಧಿಕಾರಿಗಳು

140 Indians fly home as govt. closes embassy in Kabul for now - Divya Bharat ??

ಗಲಭೆ ಪೀಡಿತ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಸಿಬ್ಬಂದಿಯನ್ನೂ ಸ್ವದೇಶಕ್ಕೆ ಮರಳಿ ಕರೆತರಲಾಗಿದೆ.

ರಾಯಭಾರ ಕಚೇರಿಯ ಸಿಬ್ಬಂದಿ, ಇಂಡೋ-ಟಿಬೆಟನ್ ಗಡಿ ಪೊಲೀಸ್‌ ಸಿಬ್ಬಂದಿ, ಮಾಧ್ಯಮದ ನಾಲ್ವರು ಮಂದಿ ಸೇರಿ ಒಟ್ಟಾರೆ 140 ಮಂದಿ ಭಾರತೀಯ ಸಶಸ್ತ್ರ ಪಡೆಗಳ ಸಿ-17 ಗ್ಲೋಬ್‌ಮಾಸ್ಟರ್‌ ವಿಮಾನದಲ್ಲಿ ಕಾಬೂಲ್‌ನಿಂದ ಹೊರಟಿದ್ದಾರೆ.

ಸೋಮವಾರ ಸಹ ಮತ್ತೊಂದು ಸಿ-17 ವಿಮಾನದಲ್ಲಿ ಭಾರತದ 40 ಅಧಿಕಾರಿಗಳನ್ನು ಮರಳಿ ಕರೆತರಲಾಗಿತ್ತು. ಭಾರತದ ರಾಯಭಾರಿ ರುದ್ರೇಂದ್ರ ಟಂಡನ್ ನೇತೃತ್ವದಲ್ಲಿ ತಾಲಿಬಾನೀ ಪಡೆಗಳೊಂದಿಗೆ ಸಂವಹನ ನಡೆಸಿದ 140 ಸಿಬ್ಬಂದಿಯ ತಂಡ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಒಂದು ರಾತ್ರಿ ಕಳೆದಿದೆ.

ಇಂಧನ ಬೆಲೆ ಏರಿಕೆ ಹಿಂದಿನ ಕಾರಣ ಬಿಚ್ಚಿಟ್ಟ ವಿತ್ತ ಸಚಿವೆ

ಇಂದು ಬೆಳಿಗ್ಗೆ 6 ಗಂಟೆಗೆ ಕಾಬೂಲ್‌ನಲ್ಲಿ ಈ 140 ಮಂದಿಯನ್ನು ಹೊತ್ತೊಯ್ದ ಸಿ-17 ವಿಮಾನವು ಪಾಕಿಸ್ತಾನದ ಮೇಲೆ ಬರುವುದನ್ನು ತಪ್ಪಿಸಿ, ಸಾಧ್ಯವಾದಷ್ಟು ಅಫ್ಘನ್ ನೆತ್ತಿಯ ಮೇಲೆ ಹಾರಾಟ ಕಡಿಮೆ ಮಾಡಲೆಂದು ಪಕ್ಕದ ಇರಾನ್‌‌ ಮೇಲೆ ಹಾರಿ ಅರಬ್ಬೀ ಸಮುದ್ರ ದಾಟಿ, ಗುಜರಾತ್‌ಗುಂಟ ಭಾರತಕ್ಕೆ ಬಂದಿದೆ.

ಈ ಮೂಲಕ ಅಫ್ಘಾನಿಸ್ತಾನದಲ್ಲಿದ್ದ ಭಾರತದ ಎಲ್ಲಾ ರಾಯಭಾರ ಚಟುವಟಿಕೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಜಲಾಲಾಬಾದ್ ಮತ್ತು ಹೇರತ್‌ನಲ್ಲಿರುವ ತನ್ನ ರಾಯಭಾರ ಕಚೇರಿಗಳನ್ನು ಕಳೆದ ವರ್ಷ ಮುಚ್ಚಿದ್ದ ಭಾರತ, ಕಳೆದ ತಿಂಗಳು ಕಂದಹಾರ್‌ ಮತ್ತು ಮಜ಼ರ್‌-ಎ-ಶರೀಫ್‌ನಲ್ಲಿರುವ ರಾಯಭಾರ ಕಾರ್ಯಾಲಯಗಳ ಚಟುವಟಿಕೆಗೆ ಅಂತ್ಯ ಹಾಡಿತ್ತು.

ಕಾಬೂಲ್‌ನಲ್ಲಿರುವ ತಾಲಿಬಾನೀ ಸರ್ಕಾರ ಹೇಗೆ ವರ್ತಿಸುತ್ತದೆ ಎಂಬುದನ್ನು ಪರಿಗಣಿಸಿ ಭಾರತ ಅಫ್ಘಾನಿಸ್ತಾನದೊಂದಿಗೆ ತನ್ನ ಸಂಬಂಧದಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...