alex Certify ಪ್ರಾಣಭೀತಿಯಿಂದ ಮಿಲಿಟರಿ ವಿಮಾನದಲ್ಲಿ ಕಿಕ್ಕಿರಿದು ತುಂಬಿದ ಅಫ್ಘನ್ನರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣಭೀತಿಯಿಂದ ಮಿಲಿಟರಿ ವಿಮಾನದಲ್ಲಿ ಕಿಕ್ಕಿರಿದು ತುಂಬಿದ ಅಫ್ಘನ್ನರು

ತಾಲಿಬಾನ್ ಹಿಡಿತಕ್ಕೆ ಸಿಲುಕಿರುವ ತಮ್ಮ ದೇಶದಲ್ಲಿ ಮುಂದಿನ ದಿನಗಳ ಬಗ್ಗೆ ಭಯ ಹುಟ್ಟಿಕೊಂಡಿರುವ ಹಿನ್ನೆಲೆಯಲ್ಲಿ ಸಾವಿರಾರು ಅಫ್ಘನ್ನರು ವಿದೇಶಗಳಿಗೆ ಓಡಿಹೋಗಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮುಗಿಬಿದ್ದಿದ್ದಾರೆ.

ಆಗಸ್ಟ್ 16ರಂದು ಅಫ್ಘನ್ನರು ಸಿಕ್ಕ ವಿಮಾನವನ್ನೇರಿ ತಾಲಿಬಾನ್‌ ಕೈಗೆ ಸಿಗದಂತೆ ಪಲಾಯನಗೈಯ್ಯಲು ಮುಂದಾಗಿದ್ದು, ಈ ವೇಳೆ ಭಾರೀ ಕಾಲ್ತುಳಿತ ಸಂಭವಿಸುತ್ತಿರುವ ಮನಕಲಕುವ ದೃಶ್ಯಗಳು ವೈರಲ್ ಆಗಿವೆ.

ಇಂಥದ್ದೇ ಮತ್ತೊಂದು ನಿದರ್ಶನದಲ್ಲಿ, ಅಮೆರಿಕದ ಸರಕು ಸಾಗಾಟ ವಿಮಾನವೊಂದರಲ್ಲಿ 640 ಮಂದಿ ಅಫ್ಘನ್ನರು ಕಿಕ್ಕಿರಿದು ಕುಳಿತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಮೆರಿಕ ಮಿಲಿಟರಿಯ ಸಿ-17 ಗ್ಲೋಬ್‌ಮಾಸ್ಟರ್‌ ಸರಕು ಸಾಗಾಟದ ವಿಮಾನದಲ್ಲಿ ಸೆರೆ ಹಿಡಿಯಲಾದ ಈ ಚಿತ್ರವನ್ನು ಅಮೆರಿಕ ರಕ್ಷಣಾ ಮತ್ತು ಭದ್ರತಾ ಪೋರ್ಟಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

— Marcus Weisgerber (@MarcusReports) August 16, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...