alex Certify ಬರೋಬ್ಬರಿ 12 ದಿನಗಳ ಪ್ರಯಾಣದ ಬಳಿಕ ದತ್ತು ಪೋಷಕರನ್ನು ಸೇರಿದ ಅಫ್ಘನ್​ ಬಾಲಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 12 ದಿನಗಳ ಪ್ರಯಾಣದ ಬಳಿಕ ದತ್ತು ಪೋಷಕರನ್ನು ಸೇರಿದ ಅಫ್ಘನ್​ ಬಾಲಕ..!

ಅಫ್ಘಾನಿಸ್ತಾನದ 10 ವರ್ಷದ ಬಾಲಕ 12 ದಿನಗಳ ಪ್ರಯಾಣದ ಬಳಿಕ ಅಮೆರಿಕದಲ್ಲಿರುವ ತನ್ನ ದತ್ತು ಪೋಷಕರನ್ನು ಭೇಟಿಯಾಗಲು ಯಶಸ್ವಿಯಾಗಿದ್ದಾನೆ.

ಬಹೌದ್ದೀನ್​ ಮುಜ್ತಬಾ ಹಾಗೂ ಅವರ ಪತ್ನಿ ಲಿಸಾ 2016ರಲ್ಲಿ ಅಪ್ಘಾನಿಸ್ತಾನದಿಂದ ಫ್ಲೋರಿಡಾಗೆ ನಾರ್ಮನ್​ನನ್ನು ಕರೆತರುವ ಸಲುವಾಗಿ ದತ್ತು ಪ್ರಕ್ರಿಯೆಯನ್ನು ಆರಂಭಿಸಿದ್ದರು.

ಆದರೆ ಅಫ್ಘಾನಿಸ್ತಾನದಲ್ಲಿ ನಿರ್ಬಂಧಗಳು ಹಾಗೂ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಈ ಕೆಲಸವು ವಿಳಂಬಗೊಂಡಿತ್ತು.

ಅಫ್ಘಾನಿಸ್ತಾನ ಸರ್ಕಾರವು ಪತನಗೊಂಡು ತಾಲಿಬಾನ್​ ಆಡಳಿತ ಆರಂಭಗೊಂಡ ಬಳಿಕ ಕೊನೆಗೂ ನಾರ್ಮನ್​​​ ತನ್ನನ್ನು ದತ್ತು ಪಡೆದ ದೂರದ ಸಂಬಂಧಿ ಕೂಡ ಆಗಿದ್ದ ದಂಪತಿಯ ಬಳಿಗೆ ತೆರಳಿದ್ದಾನೆ.

ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದ ಅಮೆರಿಕ ಕುಟುಂಬದ ಜೊತೆ ಮಿಲಿಟರಿ ವಿಮಾನದಲ್ಲಿ ನಾರ್ಮನ್​ ಫ್ಲೋರಿಡಾಗೆ ತೆರಳಿದ್ದಾನೆ. ಆತ ಮನೆಗೆ ತಲುಪುವಲ್ಲಿ ಯಶಸ್ವಿಯಾದ್ದರಿಂದ ನಿಜಕ್ಕೂ ಈ ಪ್ರಯಾಣವು ಚೆನ್ನಾಗಿಯೇ ಇದ್ದಿರಬಹುದು. ಆದರೆ ಆತ ಮಿಲಿಟರಿ ವಿಮಾನದಲ್ಲಿ ಬಂದಿದ್ದಾನೆ. ಅಲ್ಲಿ ಜನರನ್ನು ಸಣ್ಣ ಮೀನುಗಳ ರಾಶಿಯಂತೆ ತುಂಬಲಾಗಿತ್ತು ಎಂದು ಬಹೌದ್ದೀನ್​ ಹೇಳಿದ್ದಾರೆ.

ತಾಲಿಬಾನಿಗಳು ಗುಂಡಿನ ಮಳೆಗೈಯುತ್ತಿದ್ದ ಸ್ಥಳದಿಂದ ಅನತಿ ದೂರದಲ್ಲಿಯೇ ನಾರ್ಮನ್​ ಇದ್ದ. ಅಲ್ಲಿ ಸಾಕಷ್ಟು ನೂಕಾಟ, ತಳ್ಳಾಟ, ಕಾಲ್ತುಳಿತಗಳು ಸಂಭವಿಸುತ್ತಿದ್ದವು. ಅಲ್ಲಿ ಅನೇಕರು ಗಾಯಗೊಂಡಿದ್ದಾರೆ ಹಾಗೂ ಸಾವನ್ನಪ್ಪಿದ್ದಾರೆ ಎಂದು ಬಹೌದ್ದೀನ್​ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...