alex Certify ಪ್ರಿಯಕರನೊಂದಿಗೆ ಪತ್ನಿ ಪರಾರಿ, ಹುಡುಕಿಕೊಂಡು ಬಂದ ಪತಿ ಜೀವವೇ ಹೋಯ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಕರನೊಂದಿಗೆ ಪತ್ನಿ ಪರಾರಿ, ಹುಡುಕಿಕೊಂಡು ಬಂದ ಪತಿ ಜೀವವೇ ಹೋಯ್ತು

ಬೆಳಗಾವಿ: ಬೆಳಗಾವಿ ತಾಲೂಕಿನ ಕಣಬುರ್ಗಿ ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಕೊಲೆಯಾದ ವ್ಯಕ್ತಿಯ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನೇ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡದ ಸಂತೋಷ ನಾರಾಯಣ(36) ಕೊಲೆಯಾದ ವ್ಯಕ್ತಿ. ಈತನ ಪತ್ನಿ ಬೆಳಗಾವಿ ತಾಲೂಕಿನ ಕಣಬುರ್ಗಿ ಗ್ರಾಮದ ಪರಶುರಾಮನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಗಂಡನನ್ನು ತೊರೆದು ಪರಶುರಾಮನೊಂದಿಗೆ ಕಣಬುರ್ಗಿಯಲ್ಲಿ ನೆಲೆಸಿದ್ದಳು.

ಪತ್ನಿ ಪ್ರಿಯಕರನೊಂದಿಗೆ ಕಣಬುರ್ಗಿಯಲ್ಲಿ ಇರುವ ಮಾಹಿತಿ ಪಡೆದ ಸಂತೋಷನಾರಾಯಣ ಮಾರ್ಚ್ 1 ರಂದು ಪತ್ನಿಯನ್ನು ಭೇಟಿಯಾಗಲು ಆಗಮಿಸಿದ್ದಾನೆ. ಪರಶುರಾಮ ಬಸ್ ನಿಲ್ದಾಣದಲ್ಲಿ ಸಂತೋಷನಾರಾಯಣನನ್ನು ನೋಡಿ ಆತನನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಸುರಭಿ ಕ್ರಾಸ್ ಸಮೀಪ ಕರೆದುಕೊಂಡು ಹೋಗಿ ಕಂಠಪೂರ್ತಿ ಮದ್ಯ ಕುಡಿಸಿ ಟವೆಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಭತ್ತದ ಹುಲ್ಲಿನ ಬಣವೆಗೆ ಮೃತದೇಹ ಎಸೆದು ಬೆಂಕಿಹಚ್ಚಿ ಪರಾರಿಯಾಗಿದ್ದಾನೆ. ಮರುದಿನ ಜಮೀನಿಗೆ ಬಂದ ಜಮೀನಿನ ಮಾಲೀಕ ಬಣವೆ ಸುಟ್ಟಿರುವುದು ಮತ್ತು ಸುಟ್ಟು ಕರಕಲಾಗಿದ್ದ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಮಾಳಮಾರುತಿ ಠಾಣೆ ಪೊಲೀಸರು ಘಟನೆ ನಡೆದ 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...