alex Certify ಆನೆಯ ಪುಟ್ಟ ಸಂಸಾರದ ವಿಡಿಯೋ ವೈರಲ್​: ಮರಿಗಳ ತುಂಟಾಟಕ್ಕೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನೆಯ ಪುಟ್ಟ ಸಂಸಾರದ ವಿಡಿಯೋ ವೈರಲ್​: ಮರಿಗಳ ತುಂಟಾಟಕ್ಕೆ ನೆಟ್ಟಿಗರು ಫಿದಾ

ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿ ಸುಪ್ರಿಯಾ ಸಾಹು ಅವರು ತಮಿಳುನಾಡಿನ ಅನಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಯ ಸಂಸಾರದ ಕ್ಯೂಟ್​ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ಆನಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮರಿ ಆನೆ ಮತ್ತು ಅದರ ಕುಟುಂಬವನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋದಲ್ಲಿ ಮರಿಯಾನೆಗಳು ಸಂತೋಷದಿಂದ ಓಡುತ್ತಿರುವುದನ್ನು ಮತ್ತು ತನ್ನ ಹೆತ್ತವರ ಕಾವಲು ಕಣ್ಣುಗಳ ಅಡಿಯಲ್ಲಿ ಇರುವುದನ್ನು ನೋಡಬಹುದಾಗಿದೆ.

“ನಮ್ಮ ಅನಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಈ ಕುಟ್ಟಿ (ಮರಿ) ಆನೆಯು ತನ್ನ ಹೆತ್ತವರ ಕಣ್ಗಾವಲಿನಲ್ಲಿ ತನ್ನ ಹೊಸ ಜಗತ್ತನ್ನು ಅನ್ವೇಷಿಸುತ್ತಿದೆ. ಇದು ಅತ್ಯಂತ ಅದ್ಭುತ” ಎಂದು ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೊವನ್ನು ಇದಾಗಲೇ 50 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಮರಿ ಆನೆಗೆ ಫಿದಾ ಆಗಿರುವ ಹಲವಾರು ಕಮೆಂಟ್​ಗಳು ಬರುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...