alex Certify ಸದ್ದಿಲ್ಲದೇ ವೈವಾಹಿಕ ಬದುಕಿಗೆ ಕಾಲಿಟ್ಟ ನಟಿ ಪ್ರಣೀತಾ ಸುಭಾಷ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದ್ದಿಲ್ಲದೇ ವೈವಾಹಿಕ ಬದುಕಿಗೆ ಕಾಲಿಟ್ಟ ನಟಿ ಪ್ರಣೀತಾ ಸುಭಾಷ್​..!

ಬಹುಭಾಷಾ ನಟಿ ಪ್ರಣೀತಾ ಸುಭಾಷ್​ ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆತ್ಮೀಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಪ್ರಣೀತಾ, ನಿತಿನ್​ ರಾಜು ಜೊತೆ ಸಪ್ತಪದಿ ತುಳಿದಿದ್ದಾರೆ.

ದಂಪತಿಯ ಸ್ನೇಹಿತರೊಬ್ಬರು ಮದುವೆಯ ಫೋಟೋ ಶೇರ್​ ಮಾಡಿದ ಬಳಿಕ ವಿಚಾರ ಮುನ್ನೆಲೆಗೆ ಬಂದಿದೆ.

ಪ್ರಣೀತಾ ಶುಕ್ರವಾರವೇ ಸಪ್ತಪದಿ ತುಳಿದಿದ್ದಾರೆ ಎಂಬ ಮಾತೂ ಸಹ ಸಿನಿ ವಲಯದಲ್ಲಿ ಹರಿದಾಡುತ್ತಿದೆ. ಪ್ರಣೀತಾ ಹಾಗೂ ನಿತಿನ್​ ರಾಜು ದಂಪತಿ ಅದ್ಧೂರಿ ವಿವಾಹ ಸಮಾರಂಭಕ್ಕೆ ಆಯೋಜಿಸಿದ್ದರು. ಆದರೆ ಕೋವಿಡ್ 2ನೇ ಅಲೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ತಮ್ಮ ಆತ್ಮೀಯರು ಹಾಗೂ ಸಂಬಂಧಿಗಳ ಸಮ್ಮುಖದಲ್ಲಿ ಸಿಂಪಲ್ಲಾಗಿ ವಿವಾಹವಾಗಿದ್ದಾರೆ.

ಪ್ರಣೀತಾ ಪತಿ ನಿತಿನ್​ ರಾಜು ಬೆಂಗಳೂರಿನವರು ಎನ್ನಲಾಗಿದೆ. ಆದರೆ ನವಜೋಡಿ ಇಲ್ಲಿಯವರೆಗೆ ತಮ್ಮ ಮದುವೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ನಟಿ ಪ್ರಣೀತಾ ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಬ್ಯುಸಿ ಇದ್ದರು. ಹಂಗಾಮಾ 2 ಹಾಗೂ ಭುಜ್​ ಸಿನಿಮಾಗಳ ಮೂಲಕ ನಟಿ ಪ್ರಣೀತಾ ಕೆಲ ದಿನಗಳಲ್ಲೇ ಬಾಲಿವುಡ್​ ಅಂಗಳಕ್ಕೂ ಪಾದಾರ್ಪಣೆ ಮಾಡಲಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ರಾಮನ ಅವತಾರ ಎಂಬ ಸಿನಿಮಾದಲ್ಲಿ ರಿಷಿ ಜೊತೆ ಕಾಣಿಸಿಕೊಳ್ಳಲಿದ್ದಾರೆ.

View this post on Instagram

A post shared by Vishnu Srinivasamurthy (@mr._gvs)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...