alex Certify ಮಗನಿಂದ್ಲೇ ಹತ್ಯೆಯಾಗಿದ್ದೇನೆಂಬ ವದಂತಿ ಸುಳ್ಳು; ಕೇಸ್ ದಾಖಲಿಸಿದ ನಟಿ ವೀಣಾ ಕಪೂರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನಿಂದ್ಲೇ ಹತ್ಯೆಯಾಗಿದ್ದೇನೆಂಬ ವದಂತಿ ಸುಳ್ಳು; ಕೇಸ್ ದಾಖಲಿಸಿದ ನಟಿ ವೀಣಾ ಕಪೂರ್

ತನ್ನ ಮಗನಿಂದ್ಲೇ ವೀಣಾ ಕಪೂರ್ ಹತ್ಯೆಯಾಗಿದ್ದಾರೆಂದು ವದಂತಿ ಹಬ್ಬಿಸಿದವರ ವಿರುದ್ಧ ನಟಿ ವೀಣಾ ಕಪೂರ್ ಎಫ್ಐಆರ್ ದಾಖಲಿಸಿದ್ದಾರೆ. ಮುಂಬೈನ ದಿಂಡೋಶಿ ಪೊಲೀಸ್ ಠಾಣೆಯಲ್ಲಿ ಮಾನಹಾನಿಗಾಗಿ ನಾನ್-ಕಾಗ್ನೈಸಬಲ್ ಪ್ರಕರಣವೂ ದಾಖಲಾಗಿದೆ.

ಹಿರಿಯ ನಟಿ ವೀಣಾ ಕಪೂರ್ ಅವರನ್ನು ಅವರ ಮಗನೇ ಹತ್ಯೆ ಮಾಡಿದ್ದಾನೆಂಬ ಸುದ್ದಿ ವೈರಲ್ ಆಗಿ ಹರಿದಾಡಿತ್ತು. ವದಂತಿಗಳನ್ನು ಹರಡಿದವರ ವಿರುದ್ಧ ನಟಿ ವೀಣಾ ಕಪೂರ್ ತನ್ನ ಮಗನೊಂದಿಗೆ ಮುಂಬೈ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ತನ್ನ ಮಗನಿಂದಲೇ ಕೊಲೆಯಾಗಿದ್ದಾರೆ ಎಂಬ ವದಂತಿ ಹಬ್ಬಿದ್ದ ಕುರಿತಂತೆ ಹಿರಿಯ ನಟಿ ವೀಣಾ ಕಪೂರ್ ಸ್ಪಷ್ಟನೆ ನೀಡಿದ್ದು, ಹತ್ಯೆಗೀಡಾದವರು ಬೇರೆಯವರಾಗಿದ್ದು ತಮ್ಮ ಹೆಸರನ್ನೇ ಹೊಂದಿದ್ದರೆಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇದು ಸುಳ್ಳು ಸುದ್ದಿ. ನಿಜವೆಂದರೆ ವೀಣಾ ಕಪೂರ್ ಕೊಲೆಯಾಗಿದ್ದಾಳೆ. ಆದರೆ ನಾನು ಆ ವೀಣಾ ಕಪೂರ್ ಅಲ್ಲ . ಹೆಸರು ಒಂದೇ ಆದರೂ ನಾನು ಗೋರೆಗಾಂವ್‌ನಲ್ಲಿ ಇರುತ್ತೇನೆ. ಜುಹುವಿನಲ್ಲಲ್ಲ. ನಾನು ನನ್ನ ಮಗನ ಜೊತೆಗೇ ಇದ್ದೇನೆ ಎಂದರು.

ತಾನು ಸತ್ತಿದ್ದೇನೆ ಎಂದು ಭಾವಿಸಿದ ಜನರಿಗೆ ತಿಳಿಸಿದ ಸಂದೇಶದಲ್ಲಿ ನಾನು ಬದುಕಿದ್ದೇನೆ, ಚೆನ್ನಾಗಿದ್ದೇನೆ. ನಕಲಿ ಸುದ್ದಿಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...