alex Certify ಬಟ್ಟೆ ಬದಲಿಸುವ ಕೋಣೆಯಲ್ಲಿ ತುಂಡುಡುಗೆಯ ವಿಡಿಯೋ ಹಂಚಿಕೊಂಡ ನಟಿ ಊರ್ವಶಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಟ್ಟೆ ಬದಲಿಸುವ ಕೋಣೆಯಲ್ಲಿ ತುಂಡುಡುಗೆಯ ವಿಡಿಯೋ ಹಂಚಿಕೊಂಡ ನಟಿ ಊರ್ವಶಿ

ಬಾಲಿವುಡ್ ನಟಿ ಊರ್ವಶಿ ರೌಟೆಲಾ ಸೌಂದರ್ಯ ಎಷ್ಟು ಚರ್ಚೆ ಆಗುತ್ತದೆಯೋ, ಅಷ್ಟೇ ಚರ್ಚೆ ಅವರು ಧರಿಸುವ ಬಿಗಿಯಾದ ಉಡುಪುಗಳು ಮತ್ತು ತುಂಡು ಉಡುಗೆಗಳ ಬಗ್ಗೆಯೂ ಆಗುತ್ತದೆ. ಇನ್‍ಸ್ಟ್ರಾಗ್ರಾಂನಲ್ಲಿ ಸಕ್ರಿಯವಾಗಿರುವ ಊರ್ವಶಿ, ಆಗಾಗ್ಗೆ ಫ್ಯಾನ್ಸ್ ಖುಷಿಗಾಗಿ ತಮ್ಮ ಸಖತ್ ಪೋಸ್‍ಗಳ ಫೋಟೊ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ಆದರೆ ಈ ಬಾರಿ ಊರ್ವಶಿ ಪೋಸ್ಟ್ ಮಾಡಿರುವ ಒಂದು ವಿಡಿಯೋ ಮಾತ್ರ, ಸಾಮಾಜಿಕ ಜಾಲತಾಣ ಬಳಕೆದಾರರಿಂದ ಭಾರಿ ಟೀಕೆಗೆ ಗುರಿಯಾಗಿದೆ. ಟ್ರಯಲ್ ರೂಮ್‍ನಲ್ಲಿ ಬಟ್ಟೆ ಬದಲಿಸುತ್ತಿರುವಂತೆ ಕನ್ನಡಿಯ ಮುಂದೆ ನಿಂತಿರುವ ಊರ್ವಶಿ, ಮಿನಿ ಸ್ಕರ್ಟ್ ಮತ್ತು ಬ್ರಾಲೆಟ್ ಧರಿಸಿದ್ದಾರೆ. ಜಾಕೆಟ್ ಹಾಕಿದ್ದರೂ ಕೂಡ ಕುತ್ತಿಗೆ ಕೆಳಭಾಗ ಬಹುಪಾಲು ಎಕ್ಸ್ ಪೋಸ್ ಆಗಿದೆ. ಇದನ್ನು ಕಂಡ ನೆಟ್ಟಿಗರು, ” ಇಷ್ಟೇ ಬಟ್ಟೆ ಯಾಕೆ ತೊಟ್ಟಿದ್ದೀಯಮ್ಮ” ಎಂದು ರೇಗಿಸಿದ್ದಾರೆ.

ನಟಿ ಊರ್ವಶಿ ರೌಟೇಲ ಲೇಟೆಸ್ಟ್ ಫೋಟೋಶೂಟ್

ಮತ್ತೆ ಕೆಲವರು, ಎಕ್ಸ್ ಪೋಸ್ ಮಾಡಿ ಫ್ಯಾನ್ಸ್ ಹೆಚ್ಚಿಸಿಕೊಳ್ಳುವ ಈ ಚಾಳಿ ಬೇಡ ಎಂದು ನೇರವಾಗಿ ಕುಟುಕಿದ್ದಾರೆ. ಇನ್ನೂ ಕೆಲವರು ನಟಿಯ ದೇಹ ಸೌಂದರ್ಯಕ್ಕೆ ಮಾರುಹೋಗಿ, ‘ನನ್ನ ಕನಸಿನ ಯುವರಾಣಿ’, ‘ ಲಕ್ಷಾಂತರ ಹೃದಯಗಳ ಒಡತಿ’ ಎಂದು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ‘ಬ್ಲ್ಯಾಕ್ ರೋಸ್’ ಹೆಸರಿನ ತೆಲುಗು ಸಿನಿಮಾದಲ್ಲಿ ನಟಿ ಊರ್ವಶಿ ಕಾಣಿಸಿಕೊಳ್ಳಲಿದ್ದಾರೆ.

https://youtu.be/eEl0kbHfZOw

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...