alex Certify ಜೈಲಿನಲ್ಲಿರುವ ‘ರೀಲ್ಸ್ ರಾಣಿ’ ಸೋನುಗೌಡ ಭೇಟಿಯಾದ ನಟ ರಾಕೇಶ್ ಅಡಿಗ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲಿನಲ್ಲಿರುವ ‘ರೀಲ್ಸ್ ರಾಣಿ’ ಸೋನುಗೌಡ ಭೇಟಿಯಾದ ನಟ ರಾಕೇಶ್ ಅಡಿಗ..!

ಬೆಂಗಳೂರು : ಅಕ್ರಮವಾಗಿ ಮಗು ದತ್ತು ಪ್ರಕರಣದಲ್ಲಿ ರೀಲ್ಸ್ ರಾಣಿ ಸೋನುಗೌಡ ಸದ್ಯ ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ.

ಜೈಲು ಸೇರಿರುವ ನಟಿ ಸೋನುಗೌಡರನ್ನು ನಟ ರಾಕೇಶ್ ಅಡಿಗ ಭೇಟಿಯಾಗಿ ಧೈರ್ಯ ಹೇಳಿದ್ದಾರೆ. ಕಳೆದ ಬಿಗ್ ಬಾಸ್ ಸೀಸನಲ್ಲಿ ಸೋನುಗೌಡ ಹಾಗೂ ರಾಕೇಶ್ ಅಡಿಗ ಒಟ್ಟಾಗಿ ಇರುತ್ತಿದ್ದರು. ನಂತರ ಇಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಂಡಿದ್ದರು. ಇದೀಗ ಜೈಲಿನಲ್ಲಿರುವ ಸೋನುಗೌಡರನ್ನು ನಟ ರಾಕೇಶ್ ಅಡಿಗ ಭೇಟಿಯಾಗಿ ಧೈರ್ಯ ಹೇಳಿಬಂದಿದ್ದಾರೆ.

ಮಗುವನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣದಲ್ಲಿ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡರನ್ನು ಬಂಧಿಸಿ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

ಚೈಲ್ಡ್ ವೇಲ್ ಫೇರ್ ಕಮಿಟಿ ಅಧಿಕಾರಿಗಳು ಬ್ಯಾಡರಹಳ್ಳಿ ದೂರು ನೀಡಿದ ದೂರಿನ ಹಿನ್ನೆಲೆ ಅಂದ್ರಹಳ್ಳಿ ನಿವಾಸದಲ್ಲಿ ಸೋನುಗೌಡ ಅವರನ್ನು ಪೊಲೀಸರು ಬಂಧಿಸಿದ್ದರು. ಉತ್ತರ ಕರ್ನಾಟಕ ಮೂಲದ ಎಂಟು ವರ್ಷದ ಬಾಲಕಿಯನ್ನು ದತ್ತು ಪಡೆದಿರುವುದಾಗಿ ಸೋನು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದ್ದರು. ಸೋನುಗೌಡ ಅವರು ಮಗುವನ್ನು ದತ್ತು ಪಡೆಯಲು ಅನುಸರಿಬೇಕಾದ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಸರಿಯಾಗಿ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.ಈ ಹಿನ್ನೆಲೆ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಸೋನು ಗೌಡರನ್ನು ಬಂಧಿಸಲಾಗಿತ್ತು. ನಂತರ ಸೋನು ಗೌಡರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು ವಿಚಾರಣೆ ನಡೆಸಿದ ಕೋರ್ಟ್  14 ದಿನ ನ್ಯಾಯಾಂಗ ಬಂಧನ ವಿಧಿಸಿ  ಆದೇಶ ಹೊರಡಿಸಿದೆ.

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...