ಹಾಸ್ಯನಟ ಕಪಿಲ್ ಶರ್ಮಾ ಇತ್ತೀಚೆಗೆ “ಬ್ರೌನ್ ಮುಂಡೆ’ ಹಾಡಿನ ಸ್ಪೂಫ್ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ “ವೇಹ್ಲೆ ಮುಂಡೆ’ ಎಂಬ ಹೆಸರಿನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಗಮನವನ್ನು ಆಕರ್ಷಿಸಿದ್ದು ಫ್ಯಾನ್ಸಿ ಎಸ್ಯುವಿ.
ವಿಡಿಯೊದಲ್ಲಿ ಲಕಲಕ ಹೊಳೆಯುವ ಕ್ಯಾಡಿಲಾಕ್ ಎಸ್ಕಲೇಡ್ ಸ್ಪೋರ್ಟ್ ಪ್ಲಾಟಿನಂ ಎಸ್ಯುವಿ ಕಾಣಿಸಿದ್ದು, ಕಂಪನಿಯು ತನ್ನ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡದ ಕಾರಣ ಭಾರತದಲ್ಲಿ ಅತ್ಯಂತ ಅಪರೂಪ.
“ಬ್ರೌನ್ ಮುಂಡೆ’ ಯಶಸ್ಸಿನ ಬಳಿಕ “ವೇಹ್ಲೆ ಮುಂಡೆ’ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಕೇಳಿಕೊಂಡಿರುವ ಕಪಿಲ್ ಶರ್ಮಾ, ಐಷಾರಾಮಿ ಕಾರಿನಿಂದ ಗತ್ತಿನಲ್ಲಿ ಇಳಿದು ಬರುವ ವಿಡಿಯೋ ನೋಡಬಹುದಾಗಿದೆ.
ಕಪಿಲ್ ಶರ್ಮಾ ಕಾರುಗಳ ಆಸಕ್ತಿ ಹೆಚ್ಚು ಚರ್ಚೆಯಲ್ಲಿದೆ. ಅವರ ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚೆಗೆ ಡಾಡ್ಜ್ ಚಾಲೆಂಜರ್ ಹೆಲ್ಕ್ಯಾಟ್ನೊಂದಿಗೆ ಅವರ ಚಿತ್ರ ಕಾಣಿಸಿತ್ತು. ಈ ಫೋಟೋವನ್ನು ಕೆನಡಾದಲ್ಲಿ ತೆಗೆಯಲಾಗಿದೆ.
ಕಪಿಲ್ ಶರ್ಮಾ ಬೆಂಜ್ 400 ಡಿಎಸ್ಯುವಿ ಹೊಂದಿದ್ದಾರೆ. ಇದು ಸಹ ಸಾಕಷ್ಟು ದುಬಾರಿಯಾಗಿದೆ, ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 1.16 ಕೋಟಿ ರೂ.(ಎಕ್ಸ್ ಶೋ ರೂಂ).
ಕಪಿಲ್ ಶರ್ಮಾ ಜತೆಗಿದ್ದ ಕ್ಯಾಡಿಲಾಕ್ ಎಸ್ಕಲೇಡ್ನ ಐದನೇ ತಲೆಮಾರಿನ ಮಾದರಿಯಲ್ಲಿ ಒಂದಾಗಿದೆ. 5.5 ಮೀಟರ್ ಉದ್ದವನ್ನು ಹೊಂದಿದ್ದು ತ್ರೀ ಸೀಟರ್ ಮತ್ತು ಎಂಟು-ಆಸನಗಳ ಎಸ್ಯುವಿ ಗಳನ್ನು ಹೆಚ್ಚಾಗಿ ಉತ್ತರ ಅಮೆರಿಕಾದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.