ಉದ್ದೇಶಿತ ರಸ್ತೆ ನಿರ್ಮಾಣ ಕಾಮಗಾರಿಗೆ ಮರಗಳನ್ನು ಕಡಿಯುವುದನ್ನು ತಪ್ಪಿಸಲು ಮುಂದಾದ ಛತ್ತೀಸ್‌ಘಡದ ಪರಿಸರ ಕಾರ್ಯಕರ್ತರೊಬ್ಬರು ಮರಗಳ ಮೇಲೆ ಪರಮೇಶ್ವರನ ಫೋಟೋಗಳನ್ನು ಅಂಟಿಸುತ್ತಿದ್ದಾರೆ.
“ಯೋಜನೆಗೆಂದು ಬರೀ 2,900 ಮರಗಳನ್ನು ಕಡಿಯುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ 20,000ಕ್ಕೂ ಹೆಚ್ಚಿನ ಮರಗಳನ್ನು ಯೋಜನೆಗೆಂದು ಧರೆಗುರುಳಿಸಿದರೂ ಅಚ್ಚರಿಯಿಲ್ಲ” ಎಂದು ಕಾರ್ಯಕರ್ತ ವೀರೇಂದ್ರ ಸಿಂಗ್ ತಿಳಿಸಿದ್ದಾರೆ.
ವಧುವಿಗೆ ಮಾಲೆ ಹಾಕಲು ಪರದಾಡಿದ ವರ…! ವಿಡಿಯೋ ವೈರಲ್
ಇಲ್ಲಿನ ಬಲೋದ್ ಜಿಲ್ಲೆಯ ತಾರೌಡ್-ದಾಯ್ಹಾನ್ ನಡುವೆ 8 ಕಿಮೀ ಉದ್ದದ ರಸ್ತೆ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆ ಯೋಜನೆ ರೂಪಿಸಿದೆ.
ಅಭಿವೃದ್ಧಿ ಆಗಬೇಕು. ಆದರೆ ಅರಣ್ಯಗಳನ್ನು ಕಳೆದುಕೊಂಡು ಮಾಡುವ ಅಭಿವೃದ್ಧಿ ಬೇಕಿಲ್ಲ ಎನ್ನುವ ಸಿಂಗ್, ತಮ್ಮ ಈ ಹೋರಾಟದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಬೆಂಬಲಿಸಬೇಕೆಂದು ಕೋರಿದ್ದಾರೆ.