alex Certify ಆಯುರ್ವೇದದ ಪ್ರಕಾರ ಚಳಿಗಾಲದಲ್ಲಿ ಆರೋಗ್ಯಕ್ಕೆ ಇವುಗಳನ್ನು ಸೇವಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಯುರ್ವೇದದ ಪ್ರಕಾರ ಚಳಿಗಾಲದಲ್ಲಿ ಆರೋಗ್ಯಕ್ಕೆ ಇವುಗಳನ್ನು ಸೇವಿಸಿ

Eat with purpose

ಚಳಿಗಾಲದಲ್ಲಿ ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲವಾದರೆ ಸಮಸ್ಯೆಗೆ ಒಳಗಾಗುತ್ತೇವೆ. ಹಾಗಾಗಿ ಆಯುರ್ವೇದದ ಪ್ರಕಾರ ಚಳಿಗಾಲದಲ್ಲಿ ಇವುಗಳನ್ನು ಸೇವಿಸಿದರೆ ಆರೋಗ್ಯಕರವಾಗಿ ಇರಬಹುದು ಎನ್ನಲಾಗಿದೆ.

*ಕೊಬ್ಬು : ಚಳಿಗಾಲದಲ್ಲಿ ಕೊಬ್ಬಿನಾಂಶವಿರುವ ಆಹಾರ ಸೇವಿಸಿದರೆ ತುಂಬಾ ಒಳ್ಳೆಯದು. ಇದು ನಮ್ಮ ಚರ್ಮವನ್ನು ತೇವವಾಗಿಡಲು ಸಹಾಯ ಮಾಡುತ್ತದೆ.

*ಧಾನ್ಯಗಳು : ಧಾನ್ಯಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳನ್ನು ಚಳಿಗಾಲದಲ್ಲಿ ಸೇವಿಸಿದರೆ ದೇಹದ ಅಗತ್ಯವಾದ ಪೋಷಕಾಂಶಗಳು ದೊರೆತು ಆರೋಗ್ಯಕರವಾಗಿರುತ್ತೇವೆ.

*ತರಕಾರಿ : ಚಳಿಗಾಲದಲ್ಲಿ ತರಕಾರಿಗಳನ್ನು ಅತಿಯಾಗಿ ಸೇವಿಸಿದರೆ ದೇಹಕ್ಕೆ ಬೇಕಾದ ಪೋಷಕಾಂಶಗಳು, ಜೀವಸತ್ವಗಳು ದೊರೆತು ದೇಹದ, ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ.

*ಮಸಾಲೆ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಚೆನ್ನಾಗಿ ಬಳಸಿ. ಇವು ದೇಹವನ್ನು ಬೆಚ್ಚಗಿಡುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ. ಆರೋಗ್ಯವನ್ನು ಕಾಪಾಡುತ್ತದೆ.

*ಪ್ರತಿದಿನ ವ್ಯಾಯಾಮಗಳನ್ನು ಮಾಡಿ. ಇದರಿಂದ ದೇಹದ ಆರೋಗ್ಯ ಹೆಚ್ಚುತ್ತದೆ. ಹಾಗೇ ಪ್ರತಿದಿನ ಆಯಿಲ್ ಮಸಾಜ್ ಮಾಡಿ. ಇದರಿಂದ ಚರ್ಮ ತೇವಾಂಶದಿಂದ ಕೂಡಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...