alex Certify ಶಾಖಾಹಾರಿಗಳಿಗೆ ಗುಡ್​ ನ್ಯೂಸ್​: ಈ ರೈಲುಗಳಲ್ಲಿ ಶೀಘ್ರದಲ್ಲೇ ಸಿಗಲಿದೆ ಸಂಪೂರ್ಣ ಸಸ್ಯಾಹಾರ ಸೌಕರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಖಾಹಾರಿಗಳಿಗೆ ಗುಡ್​ ನ್ಯೂಸ್​: ಈ ರೈಲುಗಳಲ್ಲಿ ಶೀಘ್ರದಲ್ಲೇ ಸಿಗಲಿದೆ ಸಂಪೂರ್ಣ ಸಸ್ಯಾಹಾರ ಸೌಕರ್ಯ

ರೈಲಿನಲ್ಲಿ ಪ್ರಯಾಣಿಸುವ ಸಸ್ಯಾಹಾರಿಗಳಿಗೆ ಭಾರತೀಯ ರೈಲ್ವೆ ಇಲಾಖೆ ಶುಭ ಸುದ್ದಿಯೊಂದನ್ನು ನೀಡಿದೆ. ಶೀಘ್ರದಲ್ಲಿಯೇ ಕೆಲ ರೈಲುಗಳಲ್ಲಿ ಪ್ರಯಾಣಿಕರಿಗೆ ಶುದ್ಧ ಸಸ್ಯಾಹಾರಿ ಊಟ ಸಿಗಲಿದೆ. ಇದು ಹೇಗೆ ಎಂದು ಕೇಳ್ತಿದ್ದೀರಾ..? ಈ ಕಾರ್ಯಕ್ರಮದ ಮೊದಲ ಹಂತ ಎಂಬಂತೆ ವಂದೇ ಭಾರತ್​ ಸೇರಿದಂತೆ ಇನ್ನೂ 18 ರೈಲುಗಳು ಸಸ್ಯಾಹಾರಿ ಪ್ರಮಾಣ ಪತ್ರವನ್ನು ಪಡೆಯಲಿವೆ.

ಸಾಲ ತೀರಿಸಲಿಕ್ಕೋಸ್ಕರ ಚಿನ್ನವನ್ನೇ ನುಂಗಿದ ಭೂಪ ಅಂದರ್…​..!

ದೇಶಾದ್ಯಂತ ಧಾರ್ಮಿಕ ಸ್ಥಳಗಳಿಗೆ ಸಂಚರಿಸುವ ರೈಲುಗಳಲ್ಲಿ ಶುದ್ಧ ಶಾಖಾಹಾರಿ ವ್ಯವಸ್ಥೆ ಇರಲಿದೆ.
ಐಆರ್​ಸಿಟಿಸಿ ಸಹಯೋಗದಲ್ಲಿ ಶಾಖಾಹಾರಿ ರೈಲು ಸೇವೆಯಲ್ಲಿ ಆರಂಭಿಸಿರುವ ಸಾತ್ವಿಕ್​ ಕೌನ್ಸಿಲ್​ ಆಫ್​ ಇಂಡಿಯಾ ಈ ಪ್ರಮಾಣಿಕರಣವನ್ನು ನೀಡುತ್ತಿದೆ.

ಈ ಪ್ರಮಾಣಿಕರಣವು ಕೇವಲ ರೈಲುಗಳಲ್ಲಿ ಸಿಗುವ ಶಾಖಾಹಾರಿ ಆಹಾರಗಳಿಗೆ ಸೀಮಿತವಾಗಿಲ್ಲ. ಬದಲಾಗಿ ಐಆರ್​ಸಿಟಿಸಿ ಅಡುಗೆ ಕೋಣೆ, ಎಕ್ಸಿಕ್ಯೂಟಿವ್​ ಲಾಂಜ್​ಗಳು. ಬಜೆಟ್​ ಹೋಟೆಲ್​ ಸೇರಿದಂತೆ ಎಲ್ಲಾ ಕಡೆಯೂ ಶುದ್ಧ ಶಾಖಾಹಾರಿ ವ್ಯವಸ್ಥೆಯೇ ಇರಲಿದೆ.

ಈ ಸಿಂಪಲ್ ಟ್ರಿಕ್ ಬಳಸಿದರೆ ʼಮಗ್ಗಿʼ ಸಲೀಸು

ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೇವಲ ಸಸ್ಯಹಾರಿ ಊಟವನ್ನು ನೀಡುವ ಮೂಲಕ ಈ ಪ್ರಮಾಣಿಕರಣವನ್ನು ನೀಡಲಾಗೋದಿಲ್ಲ. ಅಡುಗೆ ಕೋಣೆಗೆ ಪ್ರವೇಶಿಸುವ ಪಾತ್ರೆ ಸೇರಿದಂತೆ ಯಾವುದೇ ಉತ್ಪನ್ನಗಳು ಸಹ ಸಸ್ಯಾಹಾರಿ ಎಂಬ ಚಿಹ್ನೆ ಹೊಂದಿದ್ದಲ್ಲಿ ಮಾತ್ರ ಅವುಗಳಿಗೆ ಅನುಮತಿ ಸಿಗಲಿದೆ. ಅಂದರೆ ಪಾತ್ರೆ ತೊಳೆಯುವ ಸೋಪು, ಬ್ರಶ್​ ಇವೆಲ್ಲವೂ ಸಹ ಸಸ್ಯಹಾರಿ ಪಂಗಡಕ್ಕೆ ಸೇರಿರಬೇಕು.

ಇನ್ನು ಆಹಾರ ವಿತರಿಸುವವರು ಯಾವುದೇ ಕಾರಣಕ್ಕೂ ಮಾಂಸಾಹಾರವನ್ನು ಬಡಿಸೋದಿಲ್ಲ. ಅಡುಗೆ ಮನೆಯಲ್ಲಿ ತಯಾರಾದ ಶುದ್ಧ ಶಾಖಾಹಾರಿ ಆಹಾರವನ್ನೇ ನೀಡಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...