alex Certify ಶುಭಮನ್ ಗಿಲ್ ರನ್ನು ಡೇಟಿಂಗ್​ ಆಪ್​ಗೆ ಆಹ್ವಾನಿಸಿದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭಮನ್ ಗಿಲ್ ರನ್ನು ಡೇಟಿಂಗ್​ ಆಪ್​ಗೆ ಆಹ್ವಾನಿಸಿದ ಯುವತಿ

23 ವರ್ಷದ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಕೇವಲ 54 ಎಸೆತಗಳಲ್ಲಿ ಶತಕ ಬಾರಿಸಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ T20I ನಲ್ಲಿ ಅವರು ಈ ಸಾಧನೆ ಮಾಡಿದರು.

ಆದರೆ, ಶುಬ್ಮನ್ ಗಿಲ್ ಹೊರತುಪಡಿಸಿ, ಜನರ ಗಮನ ಮತ್ತೊಬ್ಬ ವ್ಯಕ್ತಿಯ ಮೇಲಿತ್ತು. ಅದು ಸ್ಟ್ಯಾಂಡ್‌ನಲ್ಲಿ ಹುಡುಗಿಯೊಬ್ಬಳು ಫಲಕವೊಂದನ್ನು ಹಿಡಿದು ನಿಂತಿದ್ದಳು. ಅದರಲ್ಲಿ “ಟಿಂಡರ್, ಶುಭಮನ್ ಸೆ ಮ್ಯಾಚ್ ಕರದೋ” (ಟಿಂಡರ್…​… ಶುಭಮನ್​ ಅವರಿಂದ ಮ್ಯಾಚ್​ ಮಾಡಿಸಿ) ಎಂದು ಬರೆಯಲಾಗಿತ್ತು.

ಈಕೆಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಡೇಟಿಂಗ್ ಅಪ್ಲಿಕೇಶನ್ ಟಿಂಡರ್‌ಗಾಗಿ ಈ ಜಾಹೀರಾತು ಪ್ರಚಾರ ಎನ್ನುವುದು ತಿಳಿದುಬಂದಿದೆ. ಏಕೆಂದರೆ ಟಿಂಡರ್ ಎನ್ನುವುದು ಡೇಟಿಂಗ್​ ಆ್ಯಪ್​. ಇದರ ಪ್ರಚಾರ ಮಾಡುವ ಮೂಲಕ ಯುವತಿ ಶುಭಮನ್​ ಅವರನ್ನು ಆಹ್ವಾನಿಸಿದ್ದಾಳೆ. ಭಾರತದ ವೇಗದ ಬೌಲರ್ ಉಮೇಶ್ ಯಾದವ್ ಈ ಫೋಟೋ ಶೇರ್​ ಮಾಡಿಕೊಂಡಿದ್ದು, ಶುಭಮನ್​ ಅವರನ್ನು ಆ್ಯಪ್​ಗೆ ಆಹ್ವಾನಿಸಿದ್ದಾರೆ.

ಇದಕ್ಕೆ ತಮಾಷೆಯ ಪ್ರತಿಕ್ರಿಯೆ ನೀಡಿದ ಶುಭಮನ್ ಅವರು, ಉಮೇಶ್​ ಯಾದವ್ ಡೇಟಿಂಗ್​ ಆ್ಯಪ್​ ಜಾಯಿನ್​ ಆಗಿದ್ದು, ಈಗ ನನ್ನನ್ನೂ ಆಹ್ವಾನಿಸುತ್ತಿದ್ದಾರೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...