alex Certify 3ನೇ ಮದುವೆಯಾಗುತ್ತಿದ್ದಾರಾ ನಟ ಆಮೀರ್​ ಖಾನ್​..? ಇಲ್ಲಿದೆ ವೈರಲ್ ಸುದ್ದಿ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3ನೇ ಮದುವೆಯಾಗುತ್ತಿದ್ದಾರಾ ನಟ ಆಮೀರ್​ ಖಾನ್​..? ಇಲ್ಲಿದೆ ವೈರಲ್ ಸುದ್ದಿ ಹಿಂದಿನ ಅಸಲಿ ಸತ್ಯ

ಕೆಲ ತಿಂಗಳ ಹಿಂದಷ್ಟೇ ತಮ್ಮ ಎರಡನೇ ಮದುವೆಯಿಂದ ವಿಚ್ಛೇದನ ಪಡೆದಿರುವ ಬಾಲಿವುಡ್​ ನಟ ಆಮೀರ್​ ಖಾನ್​ ಇದೀಗ ಮೂರನೇ ಮದುವೆಯಾಗುತ್ತಿದ್ದಾರೆ ಎಂಬ ವದಂತಿ ಬಿ ಟೌನ್​ನಲ್ಲಿ ಹರಿದಾಡುತ್ತಿದೆ. ಕರೀನಾ ಕಪೂರ್ ಖಾನ್​ ಜೊತೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ತಿರುವ ಆಮೀರ್​ ಖಾನ್​ ಮುಂದಿನ ಚಿತ್ರ ಲಾಲ್​ ಸಿಂಗ್​ ಚಡ್ಡಾ ರಿಲೀಸ್​ ಬಳಿಕ ಆಮೀರ್​ ಖಾನ್​ ಬಿ ಟೌನ್​ ನಟಿಯ ಜೊತೆ ತಮ್ಮ ವಿವಾಹವನ್ನು ಘೋಷಿಸಲಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹರಡಿದೆ.

ಆದರೆ ಉನ್ನತ ಮೂಲಗಳು ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಬಳಿಕ ಇದೊಂದು ನಕಲಿ ಸುದ್ದಿ ಎನ್ನುವುದು ತಿಳಿದು ಬಂದಿದೆ.

ಜುಲೈ 3ರಂದು ಆಮೀರ್​ ಖಾನ್​ ಹಾಗೂ ಕಿರಣ್​ ರಾವ್​ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿರುವುದರ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಜಂಟಿಯಾಗಿ ಹೇಳಿಕೆ ಬಿಡುಗಡೆ ಮಾಡಿದ್ದರು.

ಇದಾದ ಬಳಿಕ ಆಮೀರ್​ ಖಾನ್, ಫಾತಿಮಾ ಸನಾ ಶೇಖ್​ ಜೊತೆ ಅಫೇರ್​ ಹೊಂದಿದ್ದರು ಇದೇ ಕಾರಣಕ್ಕೆ ಕಿರಣ್​ ಜೊತೆ ವೈವಾಹಿಕ ಜೀವನ ಅಂತ್ಯಗೊಳಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಅಲ್ಲದೇ ಶೀಘ್ರದಲ್ಲೇ ಇವರು ತಮ್ಮ ಮದುವೆ ಬಗ್ಗೆ ಘೋಷಣೆ ಕೂಡ ಮಾಡಲಿದ್ದಾರೆ ಅಂತಲೂ ಸುದ್ದಿಯಾಗಿತ್ತು. ಆದರೆ ಇದೆಲ್ಲವೂ ಕೇವಲ ವದಂತಿ ಎನ್ನುವುದು ಫ್ಯಾಕ್ಟ್​ ಚೆಕ್​ನಲ್ಲಿ ಬಯಲಾಗಿದೆ‌.

ಕಳೆದ ಕೆಲ ಸಮಯಗಳಿಂದ ಫಾತಿಮಾ ಸನಾ ಶೇಖ್​ ಹೆಸರು ಆಮೀರ್​ ಖಾನ್​ರೊಂದಿಗೆ ಥಳುಕು ಹಾಕಿಕೊಂಡಿದೆ. ಆಮೀರ್​ ಖಾನ್​ ಹಾಗೂ ಫಾತಿಮಾ ಡೇಟ್​ ಮಾಡುತ್ತಿದ್ದಾರೆ ಎಂಬ ವದಂತಿಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದ ಫಾತಿಮಾ, ನನ್ನನ್ನು ಭೇಟಿಯೇ ಮಾಡದ ಅಪರಿಚಿತರು ನನ್ನ ಬಗ್ಗೆ ಬರೆಯುತ್ತಿದ್ದಾರೆ. ಅವರಿಗೆ ಇದು ಸತ್ಯವೋ ಇಲ್ಲವೋ ಎಂಬುದೇ ತಿಳಿದಿಲ್ಲ. ಆದರೆ ಇದನ್ನು ಓದುವ ಜನರು ನಾನು ಒಳ್ಳೆಯ ವ್ಯಕ್ತಿ ಅಲ್ಲ ಎಂದು ಭಾವಿಸುತ್ತಾರೆ. ಆದರೆ ಜನರು ನನ್ನ ಬಗ್ಗೆ ತಪ್ಪು ತಿಳಿಯುವುದು ನನಗಿಷ್ಟವಿಲ್ಲ ಎಂದು ಹೇಳಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...