alex Certify ಹೀಗೆ ಗೋಳೋ ಎಂದು ಅಳುತ್ತಿರುವ ಈ ಪುಟ್ಟ ಬಾಲೆ ಇದೀಗ ಹೆಸರಾಂತ ನಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಗೋಳೋ ಎಂದು ಅಳುತ್ತಿರುವ ಈ ಪುಟ್ಟ ಬಾಲೆ ಇದೀಗ ಹೆಸರಾಂತ ನಟಿ…!

ನಾವು ಯಾರಾದರೂ ಸೆಲೆಬ್ರಿಟಿಗಳನ್ನು ಇಷ್ಟ ಪಟ್ಟೆವು ಅಂದರೆ ಸಾಕು ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಉತ್ಸುಕರಾಗುತ್ತೇವೆ, ತಮ್ಮ ನೆಚ್ಚಿನ ನಟ ಅಥವಾ ನಟಿಯ ಬಾಲ್ಯದ ಫೋಟೋಗಳನ್ನು ನೋಡಿದರೆಂದರೆ ಪರಮಾನಂದವೇ ಸರಿ.

ಹೀಗಾಗಿ ಅನೇಕ ಬಾಲಿವುಡ್​ ನಟಿಯರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳಿಗಾಗಿ ಬಾಲ್ಯದ ಫೋಟೋಗಳನ್ನು ಶೇರ್​ ಮಾಡ್ತಾರೆ. ಪ್ರಸ್ತುತ ಓರ್ವ ಬಾಲಿವುಡ್​ ನಟಿಯ ಬಾಲ್ಯದ ದಿನದ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಫೋಟೋದಲ್ಲಿ ಹೀಗೆ ಅಳುತ್ತಿರುವ ಮಗು ಇದೀಗ ಪ್ರಸಿದ್ಧ ಬಾಲಿವುಡ್​ ನಟಿ ಅಲ್ಲದೇ ತನಗಿಂತ ಹೆಚ್ಚು ವಯಸ್ಸಾದ ನಟನೊಂದಿಗೆ ಹೆಸರು ಥಳುಕು ಹಾಕಿಕೊಂಡಿದ್ದಾರೆ. ಅಂದಹಾಗೆ ಈ ಬಾಲ್ಯದ ಫೋಟೋ ಬೇರ್ಯಾರದ್ದೂ ಅಲ್ಲ ಬದಲಾಗಿ ನಟಿ ಫಾತಿಮಾ ಸನಾ ಶೇಖ್​​ರದ್ದಾಗಿದೆ. ಫೋಟೋದಲ್ಲಿ ತಾಯಿಯ ಜೊತೆ ಇರುವ ಫಾತಿಮಾ ಅಳುತ್ತಿರೋದನ್ನು ಕಾಣಬಹುದಾಗಿದೆ. ಅಂದಹಾಗೆ ಫಾತಿಮಾ ತನಗೆ ಓದುವುದು ಇಷ್ಟವೆಲ್ಲವೆಂದು ಅಳುತ್ತಿದ್ದರಂತೆ..!

ಇನ್​ಸ್ಟಾಗ್ರಾಂನಲ್ಲಿ ಈ ಫೋಟೋವನ್ನು ಶೇರ್​ ಮಾಡಿರುವ ದಂಗಲ್​ ನಟಿ ಸನಾ, ನಾನು ಅಳುತ್ತಿರೋದನ್ನು ಕಂಡು ನನ್ನಮ್ಮ ಎಷ್ಟು ಖುಷಿಯಾಗಿದ್ದಾಳೆ ನೋಡಿ..! ನನಗೆ ಓದಲು ಇಷ್ಟವಿಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ.

ನಟಿ ಸನಾ ಫಾತಿಮಾ ಸನಾ ಶೇಖ್​ರ ಹೆಸರು ಇತ್ತೀಚಿಗೆ ನಟ ಆಮೀರ್​ ಖಾನ್​ ಜೊತೆ ಕೇಳಿ ಬರುತ್ತಿದೆ. ದಂಗಲ್​ ಸಿನಿಮಾದಲ್ಲಿ ನಟಿ ಫಾತಿಮಾ ಆಮೀರ್​ ಖಾನ್ ಮಗಳ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ಫಾತಿಮಾ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆ ಕೂಡ ಕೇಳಿ ಬಂದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...