alex Certify ತಂದೆ ಹಾಗೂ ಬಾಯ್​ಫ್ರೆಂಡ್​ ಜೊತೆಗಿನ ವಿಶೇಷ ಫೋಟೋ ಶೇರ್​ ಮಾಡಿದ ಅಮೀರ್​ ಖಾನ್​ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಹಾಗೂ ಬಾಯ್​ಫ್ರೆಂಡ್​ ಜೊತೆಗಿನ ವಿಶೇಷ ಫೋಟೋ ಶೇರ್​ ಮಾಡಿದ ಅಮೀರ್​ ಖಾನ್​ ಪುತ್ರಿ

ಸೂಪರ್​ ಸ್ಟಾರ್​ ಅಮೀರ್​ ಖಾನ್​ ಪುತ್ರಿ ಈರಾ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಇದ್ದು ತಮ್ಮ ಫೋಟೊ ಹಾಗೂ ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರ್ತಾರೆ. ಅದೇ ರೀತಿ ಈ ಬಾರಿ ಕೂಡ ತಮ್ಮ ಕೆಲವೊಂದಿಷ್ಟು ಅನ್​ಸೀನ್​ ಫೋಟೋಗಳನ್ನು ಶೇರ್​ ಮಾಡಿದ್ದಾರೆ.

ಈರಾ ಖಾನ್​ ತಮ್ಮ ತಂದೆ ಅಮೀರ್ ಖಾನ್​ ಹಾಗೂ ಬಾಯ್​ಫ್ರೆಂಡ್​​ ನೂಪುರ್​ ಶಿಖಾರೆ ಜೊತೆ ಇರುವ ಫೋಟೋ ಶೇರ್​ ಮಾಡಿದ್ದು ಈ ಫೋಟೋದಲ್ಲಿ ಅಮೀರ್ ಖಾನ್​ ಹಾಗೂ ನೂಪುರ್​ ಒಂದೇ ರೀತಿಯ ನೈಟ್​ ಡ್ರೆಸ್​ ಧರಿಸಿರುವುದನ್ನು ನೀವು ಕಾಣಬಹುದಾಗಿದೆ. ಅದೇ ರೀತಿ ಈರಾ ಹಾಗೂ ಅವರ ಸ್ನೇಹಿತೆ ಒಂದೇ ರೀತಿಯ ನೈಟ್​ಡ್ರೆಸ್​ ಧರಿಸಿದ್ದಾರೆ. ಈ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿರುವ ಈರಾ, ಸ್ವೆಟರ್​ ಹವಾಮಾನ ಮತ್ತೆ ವಾಪಸ್​ ಬರಲಿ ಹಾಗೂ ಕ್ರಿಸ್​ಮಸ್​ಗೆ ಎಂದಿಗೂ ಸ್ವಾಗತ ಎಂದು ಶೀರ್ಷಿಕೆ ನೀಡಿದ್ದಾರೆ.

ಅಮೀರ್​​ ಖಾನ್​ ತಮ್ಮ ಮೊದಲ ಪತ್ನಿ ರೀನಾ ದತ್ತಾರ ಮೂಲಕ ಈರಾ ಖಾನ್​ರನ್ನು ತಮ್ಮ ಮಗಳಾಗಿ ಪಡೆದಿದ್ದಾರೆ. ತಮ್ಮ ಮೊದಲ ವಿವಾಹದಲ್ಲಿ ಅಮೀರ್​ ಖಾನ್​ ಜುಲೈದ್​ ಎಂಬ ಹೆಸರಿನ ಪುತ್ರ ಕೂಡ ಇದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...