alex Certify ಬಿಜೆಪಿ ಸಂಸದರ ಕೆಂಗಣ್ಣಿಗೆ ಗುರಿಯಾದ ಅಮೀರ್‌ ಖಾನ್‌ ಜಾಹೀರಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಸಂಸದರ ಕೆಂಗಣ್ಣಿಗೆ ಗುರಿಯಾದ ಅಮೀರ್‌ ಖಾನ್‌ ಜಾಹೀರಾತು

ದೀಪಾವಳಿಯನ್ನು ವರ್ಣಿಸಲು ಉರ್ದು ಸಾಲುಗಳನ್ನು ಆಯ್ದುಕೊಂಡು ಜಾಹೀರಾತೊಂದನ್ನು ಸೃಷ್ಟಿಸಿದ ಫ್ಯಾಬ್‌ ಇಂಡಿಯಾಗೆ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ದಿನಗಳ ಬಳಿಕ ಇದೀಗ ಸಿಯಟ್ ಟೈರ್‌ಗಳ ಜಾಹೀರಾತೊಂದು ’ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದೆ’ ಎಂದು ಸಂಸದ ಅನಂತ್‌ ಕುಮಾರ್‌ ಹೆಗಡೆ ತಕರಾರು ಮಾಡಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯುವುದರ ವಿರುದ್ಧ ಜಾಗೃತಿ ಮೂಡಿಸಲು ಬಂದ ಸಿಯೆಟ್ ಟೈರ್‌‌ ನಮಾಜ಼್‌ ಮಾಡುತ್ತಾ ರಸ್ತೆಗಳನ್ನು ಅಡ್ಡಗಟ್ಟುವ ಹಾಗೂ ಆಜ಼ಾನ್ ಸಮಯದಲ್ಲಿ ಮಸೀದಿಗಳಿಂದ ಬರುವ ವಿಪರೀತ ಶಬ್ದದ ವಿಚಾರವಾಗಿಯೂ ಇಂಥದ್ದೇ ನಿಲುವನ್ನು ಸಿಯೆಟ್ ಕಂಪನಿ ತಾಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಥೇಟ್​ ಮೈಕಲ್​ ಜಾಕ್ಸನ್​ ರಂತೆ ನರ್ತಿಸಿದ ಬಾತುಕೋಳಿ..! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಬಾಲಿವುಡ್ ನಟ ಅಮೀರ್‌ ಖಾನ್‌ರನ್ನು ಒಳಗೊಂಡ ಈ ಜಾಹೀರಾತಿನ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿರುವ ಅನಂತ್‌ ಕುಮಾರ್‌ ಹೆಗಡೆ, ಸಿಯೆಟ್‌ ಕಂಪನಿಯ ಎಂಡಿ ಹಾಗೂ ಸಿಇಓ ಅನಂತ್ ವರ್ಧನ್ ಗೊಯೆಂಕಾಗೆ ಪತ್ರ ಬರೆದಿದ್ದು, ಹಿಂದೂಗಳಲ್ಲಿ ಅಸಮಾಧಾನ ತಂದಿರುವ ಜಾಹೀರಾತಿನ ಬಗ್ಗೆ ವಿಶ್ಲೇಷಣೆ ಮಾಡಲು ತಿಳಿಸಿದ್ದು, ಭವಿಷ್ಯದಲ್ಲಿ ಹಿಂದೂ ಭಾವನೆಗಳನ್ನು ಸಂಸ್ಥೆಯು ಗೌರವಿಸುತ್ತದೆ ಎಂದು ಭಾವಿಸಿರುವುದಾಗಿ ತಿಳಿಸಿದ್ದಾರೆ.

“ನಿಮ್ಮ ಕಂಪನಿಯ ಇತ್ತೀಚಿನ ಜಾಹೀರಾತೊಂದರಲ್ಲಿ ಜನರಿಗೆ ಪಟಾಕಿ ಹೊಡೆಯದಂತೆ ಅಮೀರ್‌ ಖಾನ್ ಸಲಹೆ ನೀಡುತ್ತಿರುವುದು ಬಹಳ ಒಳ್ಳೆಯ ಸಂದೇಶ. ಸಾರ್ವಜನಿಕ ವಿಷಯಗಳ ಮೇಲೆ ನಿಮಗಿರುವ ಕಾಳಜಿಗೆ ಮೆಚ್ಚುಗೆ ಕೊಡಬೇಕು. ಈ ನಿಟ್ಟಿನಲ್ಲಿ, ರಸ್ತೆಗಳಲ್ಲಿ ಜನರಿಗೆ ಎದುರಾಗುತ್ತಿರುವ ಇನ್ನೊಂದು ಸಮಸ್ಯೆ ಮೇಲೆ ಬೆಳಕು ಚೆಲ್ಲಲು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ, ಅದೆಂದರೆ, ಶುಕ್ರವಾರಗಳು ಹಾಗೂ ಮುಸ್ಲಿಮರ ಪ್ರಮುಖ ಹಬ್ಬದ ದಿನಗಳಲ್ಲಿ ನಮಾಜ಼್‌ ಮಾಡುವುದು,” ಎಂದು ಅಕ್ಟೋಬರ್‌ 14ರ ದಿನಾಂಕದಂದು ಹೆಗಡೆ ಈ ಪತ್ರ ಬರೆದಿದ್ದಾರೆ.

ಹಡಗಿನಲ್ಲಿ ಇಂಗ್ಲೆಂಡ್‌ ಗೆ ಪ್ರಯಾಣ ಬೆಳೆಸಿದ ಕೊಳಕುಮಂಡಲ ಹಾವು..!

ಆಜ಼ಾನ್ ಸಂದರ್ಭದಲ್ಲಿ ಧ್ವನಿವರ್ಧಕಗಳಿಂದ ಹೊರ ಬರುವ ಶಬ್ದದಿಂದಾಗಿಯೂ ಸಾರ್ವಜನಿಕರಿಗೆ ಭಾರೀ ತೊಂದರೆಯಾಗುತ್ತಿದೆ ಎಂದಿರುವ ಹೆಗಡೆ, “ಶುಕ್ರವಾರಗಳಲ್ಲಿ ಇದು ಇನ್ನಷ್ಟು ಹೆಚ್ಚಿನ ಕಾಲ ವಿಸ್ತರಿಸಿರುತ್ತದೆ. ಇದರಿಂದಾಗಿ ಆರೋಗ್ಯದ ಸಮಸ್ಯೆ ಇರುವ ಜನರಿಗೆ, ವಿವಿಧ ರೀತಿಯ ಕೆಲಸ ಮಾಡುವ ಮಂದಿ ಹಾಗೂ ತರಗತಿಗಳಲ್ಲಿ ಪಾಠ ಮಾಡುವ ಶಿಕ್ಷಕರಿಗೆ ಇನ್ನಷ್ಟು ಸವಾಲುಗಳು ಎದುರಾಗುತ್ತಿವೆ” ಎಂದು ವಿವರಿಸಿದ್ದಾರೆ.

ಪಠ್ಯ ನ ಚಿತ್ರವಾಗಿರಬಹುದು

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...