alex Certify ವೋಟರ್‌ ಐಡಿ ಜೊತೆ ಆಧಾರ್‌ ಲಿಂಕ್‌ ಮಾಡಲು ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೋಟರ್‌ ಐಡಿ ಜೊತೆ ಆಧಾರ್‌ ಲಿಂಕ್‌ ಮಾಡಲು ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಜೆಗಳ ಆಧಾರ್‌ ಕಾರ್ಡ್‌ಗಳನ್ನು ಅವರ ಮತದಾರರ ಗುರುತಿನ ಚೀಟಿಗಳೊಂದಿಗೆ ಲಿಂಕ್ ಮಾಡಲು ಅಗತ್ಯವಾದ ಚುನಾವಣಾ ಸುಧಾರಣಾ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ‌

ಪ್ರತಿ ವರ್ಷ ಮತದಾರರಿಗೆ ನೋಂದಣಿ ಮಾಡಿಕೊಳ್ಳಲು ನಾಲ್ಕು ಅವಕಾಶಗಳನ್ನು ನೀಡಲು ಭಾರತೀಯ ಚುನಾವಣಾ ಆಯೋಗ ಪ್ರಸ್ತಾವನೆ ಇಟ್ಟಿದೆ. 18 ವರ್ಷ ಮೇಲ್ಪಟ್ಟವರು ಮತದಾನ ಮಾಡಲು ನೋಂದಣಿ ಮಾಡಿಕೊಳ್ಳಬೇಕು.

ಈಗ ಆಧಾರ್‌ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ಲಿಂಕ್ ಮಾಡುವುದು ಸರಳವಾಗಿದೆ. ಕೆಳಕಂಡ ವಿವರಗಳನ್ನು ಇದಕ್ಕೆಂದೇ ನೀಡಿದ್ದೇವೆ:

BIG BREAKING: ಒಮಿಕ್ರಾನ್ ಆತಂಕದ ನಡುವೆ ಒಂದೇ ದಿನ 7,081 ಜನರಲ್ಲಿ ಕೋವಿಡ್ ಪಾಸಿಟಿವ್; ದೇಶದಲ್ಲಿದೆ 83,913 ಕೋವಿಡ್ ಸಕ್ರಿಯ ಪ್ರಕರಣ

ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಮೂಲಕ

1. https://voterportal.eci.gov.in/ ಗೆ ಭೇಟಿ ನೀಡಿ.

2. ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ, ಮತ್ತು ಮತದಾರರ ಗುರುತಿನ ಸಂಖ್ಯೆ ಬಳಸಿಕೊಂಡು ಪೋರ್ಟಲ್‌ಗೆ ಲಾಗಿನ್ ಆಗಿ ನಿಮ್ಮ ಪಾಸ್‌ವರ್ಡ್ ಎಂಟರ್‌ ಮಾಡಿ.

3. ಇದಾದ ಮೇಲೆ, ನಿಮ್ಮ ರಾಜ್ಯ, ಜಿಲ್ಲೆ ಹಾಗೂ ವೈಯಕ್ತಿಕ ವಿವರಗಳಾದ ಹೆಸರು, ಜನ್ಮ ದಿನಾಂಕ ಮತ್ತು ತಂದೆ ಹೆಸರುಗಳನ್ನು ಎಂಟರ್‌ ಮಾಡಿ.

4. ನೀವು ಎಂಟರ್‌ ಮಾಡಿರುವ ವಿವರಗಳು ಸರ್ಕಾರಿ ದತ್ತಾಂಶಗಳೊಂದಿಗೆ ಹೋಲಿಕೆಯಾದಲ್ಲಿ, ಸರ್ಚ್ ಬಟನ್ ಒತ್ತಿದಲ್ಲಿ, ವಿವರಗಳನ್ನು ಸ್ಕ್ರೀನ್‌ನಲ್ಲಿ ನೋಡಬಹುದು.

5. ಸ್ಕ್ರೀನ್‌ನ ಎಡಬದಿಯಲ್ಲಿ, ‘Feed Aadhaar No’ ಮೇಲೆ ಕ್ಲಿಕ್ ಮಾಡಿ.

6. ಆಧಾರ್‌ ಕಾರ್ಡ್ ಮೇಲೆ ಕಂಡಂತೆ ಹೆಸರನ್ನು ಭರ್ತಿ ಮಾಡಿ, ಆಧಾರ್‌ ಸಂಖ್ಯೆ, ಮತದಾರರ ಗುರುತಿನ ಸಂಖ್ಯೆ, ನೋಂದಣಿಯಾದ ಮೊಬೈಲ್ ಸಂಖ್ಯೆ ಮತ್ತು/ ನೋಂದಣಿಯಾದ ಇಮೇಲ್ ವಿಳಾಸವನ್ನು ಪಾಪ್‌-ಅಪ್ ಪುಟದಲ್ಲಿ ಭರ್ತಿ ಮಾಡಿ.

7. ಎಲ್ಲ ಮಾಹಿತಿಗಳನ್ನು ಭರಿಸಿದ ಬಳಿಕ, ಮತ್ತೊಮ್ಮೆ ಖಾತ್ರಿ ಮಾಡಿಕೊಂಡು ಸಲ್ಲಿಕೆ ಬಟನ್ ಮೇಲೆ ಕ್ಲಿಕ್ ಮಾಡಿ.

8. ಕೊನೆಯದಾಗಿ, ಈ ಪ್ರೋಗ್ರಾಂ ಯಶಸ್ವಿಯಾಗಿ ನೋಂದಣಿಯಾಗಿದೆ ಎಂಬ ನೋಟಿಸ್ ಸ್ಕ್ರೀನ್ ಮೇಲೆ ಬರುತ್ತದೆ.

ಎಸ್‌ಎಂಎಸ್ ಮೂಲಕ

1. ನಿಮ್ಮ ಫೋನ್‌ನಲ್ಲಿ ಟೆಕ್ಸ್ಟ್ ಮೆಸೇಜ್ ತೆರೆಯಿರಿ.

2. 166 ಅಥವಾ 51969ಕ್ಕೆ ಸಂದೇಶ ಕಳುಹಿಸಿ

3. ಎಸ್‌ಎಂಎಸ್ ಫಾರ್ಮ್ಯಾಟ್ ಕೆಳಕಂಡಂತೆ ಇರುತ್ತದೆ

ಡಿ. 24 ರಿಂದ ಜ. 1 ರವರೆಗೆ ಚಳಿಗಾಲದ ರಜೆ ಘೋಷಣೆ: ಹೈಕೋರ್ಟ್ ಪ್ರಧಾನ ಪೀಠ, ಧಾರವಾಡ, ಕಲಬುರಗಿ ಪೀಠಗಳಿಗೆ ರಜೆ

ಫೋನ್ ಮೂಲಕ

1. ಕಾಲ್ ಸೆಂಟರ್‌ಗೆ ಕರೆ ಮಾಡುವ ಮೂಲಕವೂ ನೀವು ನಿಮ್ಮ ಆಧಾರ್‌ ಅನ್ನು ಮತದಾರರ ಗುರುತಿನ ಸಂಖ್ಯೆಯೊಂದಿಗೆ ಲಿಂಕ್ ಮಾಡಬಹುದು.

2. ವಾರದ ದಿನಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ, 1950ಕ್ಕೆ ಡಯಲ್ ಮಾಡಿ.

3. ಮತದಾರರ ಗುರುತಿನ ಸಂಖ್ಯೆ ಮತ್ತು ಆಧಾರ್‌ ಸಂಖ್ಯೆಗಳೆರಡನ್ನೂ ಕೊಟ್ಟಲ್ಲಿ ಲಿಂಕಿಂಗ್ ಮಾಡಲಾಗುತ್ತದೆ.

ಬೂತ್‌ ಮಟ್ಟದ ಅಧಿಕಾರಿಗಳ ಮೂಲಕ

1. ನಿಮಗೆ ಹತ್ತಿರದ ಬೂತ್‌ ಮಟ್ಟದ ಕಚೇರಿಯೊಂದಿಗೆ ಅರ್ಜಿ ಹಂಚಿಕೊಳ್ಳಿ.

2. ಬೂತ್‌ ಅಧಿಕಾರಿ ಮಾಹಿತಿಯನ್ನು ಖಾತ್ರಿಪಡಿಸಿಕೊಂಡು ನಿಮ್ಮ ಸ್ಥಳಕ್ಕೆ ಬಂದು ಹೆಚ್ಚುವರಿ ಖಾತ್ರಿಯ ಕೆಲಸ ಮಾಡುತ್ತಾರೆ.

3. ಒಮ್ಮೆ ಪೂರ್ಣಗೊಂಡಲ್ಲಿ ಇದು ರೆಕಾರ್ಡ್ ಆಗುತ್ತದೆ.

ನಿಮ್ಮ ಮತದಾರರ ಗುರುತಿನ ಸಂಖ್ಯೆಯೊಂದಿಗೆ ಆಧಾರ್‌ ಲಿಂಕಿಂಗ್‌ನ ಸ್ಟೇಟಸ್ ಪರಿಶೀಲಿಸುವುದು ಹೇಗೆ ?

1. https://voterportal.eci.gov.in/ಗೆ ಭೇಟಿ ನೀಡಿ.

2. ‘Seeding Through NVSP Portal’ ಸೆಕ್ಷನ್‌ನಲ್ಲಿ ಖಾಲಿ ಇರುವ ಜಾಗಗಳನ್ನು ಭರ್ತಿ ಮಾಡಿ.

3. ಅದಾಗಲೇ ಸಲ್ಲಿಸಲಾಗಿರುವ ಮನವಿ ಹಾಗೂ ಪರಿಷ್ಕರಣೆಯಲ್ಲಿರುವ ಮನವಿಗಳ ಸಂಬಂಧ ನೋಟಿಫಿಕೇಶನ್ ತೋರಲಾಗುವುದು.

4. ಇದಾದ ಬಳಿಕ https://uidai.gov.in/ ಜಾಲತಾಣದ ಮೂಲಕ ನಿಮ್ಮ ಆಧಾರ್‌ ಮತ್ತು ಮತದಾರರ ಐಡಿ ಲಿಂಕ್ ಆಗಿದೆಯೇ ಎಂದು ತಿಳಿಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...