alex Certify ಗಮನಿಸಿ: ಆಧಾರ್ ಕಾರ್ಡ್ ತಯಾರಿಯಲ್ಲಾಗಿದೆ ದೊಡ್ಡ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಆಧಾರ್ ಕಾರ್ಡ್ ತಯಾರಿಯಲ್ಲಾಗಿದೆ ದೊಡ್ಡ ಬದಲಾವಣೆ

ಆಧಾರ್ ಕಾರ್ಡ್, ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ತಯಾರಿ ನಿಯಮದಲ್ಲಿ ದೊಡ್ಡ ಬದಲಾವಣೆಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ  ಆಧಾರ್ ತಯಾರಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿದೆ. ಯುಐಡಿಎಐ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.

ಮಕ್ಕಳಿಗಾಗಿ ಬಾಲ್ ಆಧಾರ್ ಕಾರ್ಡ್‌ ತಯಾರಿಸಲಾಗುತ್ತದೆ. ನವಜಾತ ಶಿಶುವಿಗೂ ಆಧಾರ್ ಪಡೆಯಬಹುದು. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಯಾರಿಸಲಾಗುವ ಆಧಾರ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಬಯೋಮೆಟ್ರಿಕ್ ವಿವರಗಳ ಅಗತ್ಯ ಇನ್ಮುಂದೆ ಇರುವುದಿಲ್ಲ.

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಕೆನರಾ ಬ್ಯಾಂಕಿನಿಂದ ‘ಬಂಪರ್’ ಆಫರ್

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬೆರಳಚ್ಚು ಹಾಗೂ ಕಣ್ಣಿನ ಸ್ಕ್ಯಾನ್ ಅಗತ್ಯವಿಲ್ಲವೆಂದು ಯುಐಡಿಎಐ ಹೇಳಿದೆ. ಮಗುವಿಗೆ ಐದು ವರ್ಷ ತುಂಬಿದ ನಂತ್ರ ಬಯೋಮೆಟ್ರಿಕ್ ನವೀಕರಣ ಅಗತ್ಯವಾಗಲಿದೆ.

ಮಗುವಿಗೆ ಆಧಾರ್ ಕಾರ್ಡ್ ಪಡೆಯಲು, ಯುಐಡಿಎಐ ವೆಬ್ಸೈಟ್ ಗೆ ಹೋಗಬೇಕು. ಇಲ್ಲಿ ಆಧಾರ್ ಕಾರ್ಡ್ ನೋಂದಣಿ ಆಯ್ಕೆ ಮಾಡಬೇಕು. ಮಗುವಿನ ಹೆಸರು ಮತ್ತು ಇತರ ಬಯೋಮೆಟ್ರಿಕ್ ಮಾಹಿತಿಯಂತಹ ಅಗತ್ಯ ದಾಖಲೆ ಭರ್ತಿ ಮಾಡಬೇಕು. ಮನೆ ವಿಳಾಸ, ಊರು, ರಾಜ್ಯ ಮುಂತಾದ ಮಾಹಿತಿ ಭರ್ತಿ ಮಾಡಬೇಕು. ಆಧಾರ್ ಕಾರ್ಡ್‌ಗಾಗಿ ನೋಂದಣಿಯನ್ನು ನಿಗದಿಪಡಿಸಲು ಅಪಾಯಿಂಟ್‌ಮೆಂಟ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಹತ್ತಿರದ ದಾಖಲಾತಿ ಕೇಂದ್ರವನ್ನು ಆಯ್ಕೆಮಾಡಿ, ಅಪಾಯಿಂಟ್‌ಮೆಂಟ್ ನಿಗದಿಪಡಿಸಿಕೊಳ್ಳಬೇಕು. ನಂತ್ರ ನಿಗದಿಪಡಿಸಿದ ದಿನಾಂಕದಂದು ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕು.

ನೀವೂ ಕುಳಿತಲ್ಲೇ ಕಾಲು ಅಲ್ಲಾಡಿಸುತ್ತೀರಾ…? ಎಚ್ಚರ…!

ಮನೆಯ ವಿಳಾಸ, ಮಗುವಿನ ಜನ್ಮ ದಿನಾಂಕ ಹಾಗೂ ತಂದೆ-ತಾಯಿ ಅಥವಾ ಪೋಷಕರ ಆಧಾರ್ ಕಾರ್ಡ್ ನಕಲನ್ನು ತೆಗೆದುಕೊಂಡು ಹೋಗಬೇಕು. ಆಧಾರ್ ಕೇಂದ್ರದಲ್ಲಿ ಮಗು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನದ್ದಾಗಿದ್ದರೆ ಬಯೋಮೆಟ್ರಿಕ್ ಪಡೆಯದೆ ಆಧಾರ್ ಸಿದ್ಧಪಡಿಸುತ್ತದೆ. ಅರ್ಜಿ ಪ್ರಕ್ರಿಯೆ ಮುಗಿದ 60 ದಿನಗಳಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಬರುತ್ತದೆ. 90 ದಿನಗಳಲ್ಲಿ ನೀಡಿದ ವಿಳಾಸಕ್ಕೆ ಆಧಾರ್ ಬರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...