alex Certify ʼಆಧಾರ್‌ʼ ನಲ್ಲಿ ವಿಳಾಸದ ವಿವರ ಪರಿಷ್ಕರಿಸಲು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಧಾರ್‌ʼ ನಲ್ಲಿ ವಿಳಾಸದ ವಿವರ ಪರಿಷ್ಕರಿಸಲು ಇಲ್ಲಿದೆ ಮಾಹಿತಿ

ನಿಮ್ಮ ಆಧಾರ್‌ ಕಾರ್ಡ್‌ನಲ್ಲಿ ವಿಳಾಸದ ವಿವರಗಳನ್ನು ಅಪ್ಡೇಟ್ ಮಾಡಲು ನೀವು ಮಾಡಬೇಕಾದ ಸರಳವಾದ ಪ್ರಕ್ರಿಯೆಗಳ ವಿವರ ಇಂತಿದೆ:

1. https://ssup.uidai.gov.in/ssup/ ಪೋರ್ಟಲ್‌ ತೆರೆಯಿರಿ.

2. ಹೋಂ ಪೇಜ್‌ನಲ್ಲಿ ‘continue to update Aadhaar’ ಕ್ಲಿಕ್ ಮಾಡಿ.

3. ಯುಐಡಿಎಐ ಕೇಳಿದ ಮಾಹಿತಿ ಭರ್ತಿ ಮಾಡಿ ಕ್ಯಾಪ್ಚಾವನ್ನು ಸರಿಯಾಗಿ ಎಂಟರ್‌ ಮಾಡಿ.

ಸಾರ್ವಜನಿಕರಿಗೆ ಗುಡ್‌ ನ್ಯೂಸ್: ಆಧಾರ್ ಕಾರ್ಡ್ ನೀಡಿದ್ರೆ ತಕ್ಷಣ ಸಿಗುತ್ತೆ LPG ಸಿಲಿಂಡರ್

4. ‘Send OTP’ ಆಯ್ಕೆಯನ್ನು ಕ್ಲಿಕ್ ಮಾಡಿ. ನೀವು ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ ಆರು ಅಂಕಿಯ ಓಟಿಪಿ ಬರುತ್ತದೆ.

5. ವಿಳಾಸವನ್ನು ಪರಿಷ್ಕರಿಸಲು, ಓಟಿಪಿ ಎಂಟರ್‌ ಮಾಡಿ, ’’Update Address’ ಆಯ್ಕೆ ಮಾಡಿ.

6. ಅಗತ್ಯವಿರುವ ಮಾರ್ಪಾಡುಗಳನ್ನು ಮಾಡಿ ‘Proceed’ ಮೇಲೆ ಕ್ಲಿಕ್ ಮಾಡಿ.

7. ನೀವು ಕೇಳುವ ಮಾರ್ಪಾಡುಗಳಿಗೆ ಅಗತ್ಯವಾದ ದಾಖಲೆಗಳನ್ನು ಅಪ್ಲೋಡ್ ಮಾಡಿ.

8. ಅರ್ಜಿಯನ್ನು ಸಲ್ಲಿಸಿ. ನೀವು ಮಾಡಿದ ಮಾರ್ಪಾಡುಗಳ ಪ್ರೀವ್ಯೂವನ್ನು ಸಹ ನೋಡಬಹುದು.

9. ಯುಐಡಿಎಐ ನಿಮಗೆ ಅಪ್ಡೇಟ್ ವಿನಂತಿ ಸಂಖ್ಯೆ (ಯುಆರ್‌ಎನ್‌) ಕಳುಹಿಸಲಿದೆ. ಇದನ್ನು ಬಳಸಿಕೊಂಡು ನಿಮ್ಮ ಆಧಾರ್‌ ಕಾರ್ಡ್ ಪರಿಷ್ಕರಣೆಯ ಸ್ಟೇಟಸ್‌ ಪರೀಕ್ಷಿಬಹುದು.

LPG ಗ್ರಾಹಕರಿಗೆ ಶುಭ ಸುದ್ದಿ: ಅಡುಗೆ ಅನಿಲ ಸಬ್ಸಿಡಿ ಪುನಾರಂಭ, ದುರ್ಬಲ ವರ್ಗದವರಿಗೆ ಮಾತ್ರ ಅನ್ವಯ ಸಾಧ್ಯತೆ

ಆಧಾರ್‌ ನಲ್ಲಿರುವ ವಿಳಾಸದ ವಿವರಗಳನ್ನು ಮಾರ್ಪಾಡು ಮಾಡಲು 45 ಬಗೆಯ ವಿವಿಧ ದಾಖಲೆಗಳನ್ನು ಮಾನ್ಯ ಮಾಡಲಾಗಿದೆ.

ಪಾಸ್‌ ಪೋರ್ಟ್, ಬ್ಯಾಂಕ್ ಹೇಳಿಕೆ/ಪಾಸ್‌ ಬುಕ್, ಅಂಚೆ ಕಚೇರಿ ಪಾಸ್‌ ಬುಕ್, ನೀರಿನ/ದೂರವಾಣಿ/ಕರೆಂಟ್/ಗ್ಯಾಸ್ ಬಿಲ್, ಕ್ರೆಡಿಟ್‌ ಕಾರ್ಡ್ ಹೇಳಿಕೆ, ಆಸ್ತಿ ತೆರಿಗೆ ಪಾವತಿ ಬಿಲ್ ಸೇರಿದಂತೆ ದಿನನಿತ್ಯದಲ್ಲಿ ಬಳಸುವ 45 ದಾಖಲೆಗಳಲ್ಲಿ ಒಂದನ್ನು ಸಲ್ಲಿಸುವ ಮೂಲಕ ನಿಮ್ಮ ಆಧಾರ್‌ ಅಪ್ಡೇಟ್ ಪ್ರಕ್ರಿಯೆ ಪೂರ್ಣಗೊಳಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...