alex Certify LPG ಗ್ರಾಹಕರಿಗೆ ಶುಭ ಸುದ್ದಿ: ಅಡುಗೆ ಅನಿಲ ಸಬ್ಸಿಡಿ ಪುನಾರಂಭ, ದುರ್ಬಲ ವರ್ಗದವರಿಗೆ ಮಾತ್ರ ಅನ್ವಯ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

LPG ಗ್ರಾಹಕರಿಗೆ ಶುಭ ಸುದ್ದಿ: ಅಡುಗೆ ಅನಿಲ ಸಬ್ಸಿಡಿ ಪುನಾರಂಭ, ದುರ್ಬಲ ವರ್ಗದವರಿಗೆ ಮಾತ್ರ ಅನ್ವಯ ಸಾಧ್ಯತೆ

ನವದೆಹಲಿ: ಅಡುಗೆ ಅನಿಲ ಸಬ್ಸಿಡಿಯನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ದುರ್ಬಲ ವರ್ಗಗಳಿಗೆ ಮಾತ್ರ ಎಲ್ಪಿಜಿ ಸಬ್ಸಿಡಿ ಪುನಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಪ್ರಸ್ತುತ ಇರುವ ಎಲ್ಪಿಜಿ ಸಬ್ಸಿಡಿ ಯೋಜನೆಯನ್ನು ಪರಿಶೀಲನೆಗೆ ಒಳಪಡಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗಿದೆ.

ಕೋವಿಡ್ ಅವಧಿಗಿಂತ ಪ್ರಸ್ತುತ ಇಂಧನ ಬಳಕೆಯ ಪ್ರಮಾಣ ಹೆಚ್ಚಾಗಿದ್ದು, ಇಂಧನ ಬೆಲೆ ಗಗನಕ್ಕೇರಿದೆ. ಕಳೆದ ಒಂದು ವರ್ಷದಿಂದ ಸಬ್ಸಿಡಿ ತಡೆಹಿಡಿಯಲಾಗಿದೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಅನುಕೂಲ ಕಲ್ಪಿಸಲು ಎಲ್ಪಿಜಿ ಸಬ್ಸಿಡಿ ನೀಡಲಾಗುವುದು. ದುರ್ಬಲ ವರ್ಗಗಳಿಗೆ ಮಾತ್ರ ಸಬ್ಸಿಡಿ ನೀಡುವ ಚಿಂತನೆ ಇದೆ ಎಂದು ಹೇಳಲಾಗಿದೆ.

ಇಂಧನ ಬೆಲೆಯನ್ನು ಕಡಿಮೆ ಮಾಡಲು ಪೆಟ್ರೋಲಿಯಂ ಸಚಿವಾಲಯವು ಹಣಕಾಸು ಸಚಿವಾಲಯದೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದೆ ಎಂದು ಹೆಸರು ಹೇಳಲು ಬಯಸದ ಅಧಿಕಾರಿ ಹೇಳಿದ್ದಾರೆ. ಹೆಚ್ಚಿನ ತೆರಿಗೆಗಳ ಕಾರಣದಿಂದಾಗಿ ಜನರು ಇಂಧನಕ್ಕಾಗಿ ಹೆಚ್ಚು ಹಣವನ್ನು ಕೊಡಬೇಕಾಗಿದೆ. ಇದು ಕಳವಳಕಾರಿ ಸಂಗತಿಯಾಗಿದೆ ಮತ್ತು ಅದನ್ನು ಬಗೆಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...