alex Certify ಸಿಬ್ಬಂದಿಗೆ 9 ದಿನಗಳ ರಜೆ ನೀಡಿರುವುದರ ಜೊತೆಗೆ ಸಂಬಳವನ್ನೂ ನೀಡಿದೆ ಈ ಕಂಪನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಬ್ಬಂದಿಗೆ 9 ದಿನಗಳ ರಜೆ ನೀಡಿರುವುದರ ಜೊತೆಗೆ ಸಂಬಳವನ್ನೂ ನೀಡಿದೆ ಈ ಕಂಪನಿ….!

ನಾವು ಕೆಲಸ ಮಾಡುವ ಕಚೇರಿಯಲ್ಲಿ ರಜಾ ಕೇಳೋದು ಅಂದ್ರೆ ಎಲ್ಲರಿಗೂ ಕಠಿಣವಾದ ಕೆಲಸ. ರಜೆ ಕೇಳುವ ಸಂದರ್ಭದಲ್ಲಿ ಮೇಲಾಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸೋದೇ ಒಂದು ಕಷ್ಟ. ಈ ಎಲ್ಲದರ ನಡುವೆ ಅಮೆರಿಕ ಮೂಲದ ಸಾಫ್ಟ್ ವೇರ್​ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ವಿಶ್ರಾಂತಿ ನೀಡುವ ಸಲುವಾಗಿ 9 ದಿನಗಳ ಕಾಲ ಸಂಬಳದ ಜೊತೆಯಲ್ಲಿ ರಜೆ ನೀಡಿದೆ.

ಲಿಂಕ್ಡಿನ್​​ ಬಳಕೆದಾರರಾಗಿರುವ ಶೈಲೇಂದ್ರ ಪಾಂಡೆ ಎಂಬವರು ಈ ಸಂಬಂಧ ಪೋಸ್ಟ್​ ಶೇರ್​ ಮಾಡಿದ್ದಾರೆ ಜುಲೈ ಮೊದಲ ವಾರದಲ್ಲಿ ಕ್ಯಾಲಿಫೋರ್ನಿಯಾದ ಸಂಸ್ಥೆಯೊಂದು ಸಂಬಳ ಸಮೇತ ರಜೆ ನೀಡುವ ಬಗ್ಗೆ ಮಾಡಿರುವ ಇಮೇಲ್​ನ ಸ್ಕ್ರೀನ್​ಶಾಟ್​ ಶೇರ್​ ಮಾಡಿದ್ದಾರೆ.

ನಾವು ವಾಸಿಸುತ್ತಿರುವ ಈ ಜಗತ್ತಿನಲ್ಲಿ ಅನೇಕ ಕಂಪನಿಗಳು ಕೆಲಸಕ್ಕೆ ಪ್ರಾಮುಖ್ಯತೆ ನೀಡುತ್ತವೆ.‌ ಒತ್ತಡವಿಲ್ಲದ ಕೆಲಸದ ನಡುವೆ ನಾವು ವಿಶ್ರಾಂತಿ ತೆಗೆದುಕೊಳ್ಳೋದನ್ನೇ ಮರೆತುಬಿಡ್ತೇವೆ. ಇದನ್ನೇ ಗಮನದಲ್ಲಿಟ್ಟುಕೊಂಡು ಅಮೆರಿಕ ಮೂಲದ ಸಾಫ್ಟ್​ವೇರ್​ ಕಂಪನಿಯು ತನ್ನ ಉದ್ಯೋಗಿಗಳಿಗೆ ವಿಶ್ರಾಂತಿ ಮತ್ತು ರೀಚಾರ್ಜ್​ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಸಂಬಳದ ಜೊತೆಯಲ್ಲಿ ರಜೆ ನೀಡಿದೆ. ಜುಲೈ 1ರಿಂದ 9ರವರೆಗೆ ನಮ್ಮ ತಂಡವು ವಿಶ್ರಾಂತಿ ಹಾಗೂ ರೀಚಾರ್ಜ್ ಮಾಡಿಕೊಳ್ಳಲು ವಿರಾಮ ತೆಗೆದುಕೊಳ್ಳಲಿದೆ ಎಂದು ಹ್ಯಾಕರ್​​ರ್ಯಾಂಕ್​​ ಮೇಲ್​ನಲ್ಲಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...