alex Certify ಕಾರ್ಡ್ ಬಳಸದೆ ಎಟಿಎಂನಿಂದ ಹಣ ಪಡೆಯೋದು ಹೇಗೆ ? ಇಲ್ಲಿದೆ ವಿವರವಾದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಡ್ ಬಳಸದೆ ಎಟಿಎಂನಿಂದ ಹಣ ಪಡೆಯೋದು ಹೇಗೆ ? ಇಲ್ಲಿದೆ ವಿವರವಾದ ಮಾಹಿತಿ

ನಗದು ಕರೆನ್ಸಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಅಪಾರ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂಗಳಿಂದ ಹಣ ಪಡೆಯುವ ವ್ಯವಸ್ಥೆ ಜಾರಿಗೆ ಬಂದು ಬಹಳ ವರ್ಷಗಳಾದವು. ಈಗ ಕಾರ್ಡ್ ರಹಿತವಾಗಿಯೂ ಎಟಿಎಂನಿಂದ ಹಣ ಪಡೆಯುವ ವಿಧಾನ ಜಾರಿಗೆ ಬಂದಿದೆ. ಆದರೆ ಅನೇಕರಿಗೆ ಇದರ ಬಗ್ಗೆ ಮಾಹಿತಿ ಕೊರತೆ ಇದೆ. ಅದನ್ನು ತಿಳಿಸಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಪಾವತಿಯ ಪ್ರಮುಖ ವಿಧಾನಗಳಲ್ಲಿ ಒಂದಾಗಿದೆ. 2016 ರಲ್ಲಿ ಪ್ರಾರಂಭವಾದ ಈ ವ್ಯವಸ್ಥೆ ಹಣ ವರ್ಗಾವಣೆ ಮತ್ತು ಆನ್‌ಲೈನ್ ಪಾವತಿಗಳನ್ನು ಸುಗಮಗೊಳಿಸುತ್ತದೆ.

ಹೊಸ ವೈಶಿಷ್ಟ್ಯವಾಗಿ ಯುಪಿಐ ಬಳಸಿ ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ಅನುಮತಿಸುವ ವಿಧಾನವನ್ನು ಜಾರಿಮಾಡಲಾಗಿದೆ. ಇದನ್ನು ಇಂಟರ್‌ ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ಹಿಂಪಡೆಯುವಿಕೆ ಎಂದು ಕರೆಯಲಾಗುತ್ತದೆ.

ಗೂಗಲ್ ಪೇ, ಫೋನ್ ಪೇ, ಪೇಟಿಎಂ ನಂತಹ ಪ್ರಮುಖ ಯುಪಿಐ ಅಪ್ಲಿಕೇಶನ್‌ಗಳೊಂದಿಗೆ ಇದನ್ನು ಬಳಸಬಹುದು. ಕಾರ್ಡ್‌ಗಳನ್ನು ಒಯ್ಯುವುದು ಮತ್ತು ಅವರ ಎಟಿಎಂ ಪಿನ್‌ಗಳನ್ನು ನೆನಪಿಟ್ಟುಕೊಳ್ಳುವುದು ಸೇರಿದಂತೆ ಗ್ರಾಹಕರಿಗೆ ಇದು ಬಹಳಷ್ಟು ತೊಂದರೆಗಳನ್ನು ಉಳಿಸುತ್ತದೆ.

ಈ ವಿಧಾನದಲ್ಲಿ ಎಟಿಎಂ ಯಂತ್ರ ಮತ್ತು ಇಂಟರ್ನೆಟ್ ಸಂಪರ್ಕದೊಂದಿಗೆ ಯುಪಿಐ ಆಧಾರಿತ ಅಪ್ಲಿಕೇಶನ್ ಮಾತ್ರ ಅಗತ್ಯವಿದೆ. ಸದ್ಯ ಹಣ ಹಿಂಪಡೆಯುವಿಕೆಯ ಗರಿಷ್ಠ ಮಿತಿ 5,000 ರೂ.ಗಳಾಗಿದೆ.

ಬಳಕೆ ಹೇಗೆ ?
– ಎಟಿಎಂಗೆ ಭೇಟಿ ನೀಡಿ ಮತ್ತು ಕ್ಯಾಶ್ ವಿತ್‌ಡ್ರಾ ಆಯ್ಕೆಯನ್ನು ಆರಿಸಿ.

– ಬಳಿಕ ಎಟಿಎಂ‌ ಮಷೀನ್ನಲ್ಲಿ ಯುಪಿಐ ಆಯ್ಕೆಯನ್ನು ಆಯ್ಕೆ ಮಾಡುವುದು.

– ಎಟಿಎಂ ಪರದೆಯ ಮೇಲೆ ಕ್ಯೂ ಆರ್ ಕೋಡ್ ಪ್ರದರ್ಶಿಸುತ್ತದೆ.

– ನಿಮ್ಮ ಮೊಬೈಲ್ ಸಾಧನದಲ್ಲಿ ಯುಪಿಐ ಆಧಾರಿತ ಪಾವತಿ ಅಪ್ಲಿಕೇಶನ್ ತೆರೆಯಿರಿ ಮತ್ತು ಕ್ಯೂ ಆರ್ ಕೋಡ್ ಸ್ಕ್ಯಾನರ್ ತೆರೆಯಿರಿ.

– ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ನೀವು ನಮೂದಿಸಬಹುದು.

– ಮುಂದಿನ ಹಂತದಲ್ಲಿ ಯುಪಿಐ ಪಿನ್ ನಮೂದಿಸಿ.

– ‘ಹಿಟ್ ಪ್ರೊಸೀಡ್’ ಬಟನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿಗೆ ಸಲೀಸಾದ ಪ್ರಕ್ರಿಯೆ ಮುಕ್ತಾಯ, ಹಣ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...