alex Certify ಸಿಂಹ- ಚಿರತೆ ಕಾದಾಟ: ಕೊನೆಗೆ ಗೆಲ್ಲುವವರು ಯಾರು……? ಕುತೂಹಲದ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಹ- ಚಿರತೆ ಕಾದಾಟ: ಕೊನೆಗೆ ಗೆಲ್ಲುವವರು ಯಾರು……? ಕುತೂಹಲದ ವಿಡಿಯೋ ವೈರಲ್​

ಪ್ರಾಣಿಗಳ ವೀಡಿಯೊಗಳು, ವಿಶೇಷವಾಗಿ ಮಾಂಸಾಹಾರಿ ಪ್ರಾಣಿಗಳ ಬೇಟೆಯ ವಿಡಿಯೋಗಳು ಬಹಳ ಕುತೂಹಲಕಾರಿಯಾಗಿರುತ್ತದೆ. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಿಸಲು ಅತ್ಯಂತ ಆಕರ್ಷಕವಾಗಿವೆ. ಈ ವೀಡಿಯೊಗಳು ಒಂದೇ ಸಮಯದಲ್ಲಿ ಮನರಂಜನೆ ಜೊತೆಗೆ ಹಲವು ವಿಷಯಗಳನ್ನೂ ತಿಳಿಸುತ್ತವೆ.
ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಚಿರತೆ ಮತ್ತು ಸಿಂಹಿಣಿ ಜಗಳದಲ್ಲಿ ಗೆಲ್ಲುವವರು ಯಾರು ಎನ್ನುವುದು ಈ ವಿಡಿಯೋದ ಕುತೂಹಲ.

ಸಾಮಾನ್ಯವಾಗಿ ಸಿಂಹಗಳು ಬಲಿಷ್ಠವಾಗಿರುತ್ತವೆ. ಇವುಗಳ ಕೈಗೆ ಯಾವುದೇ ಪ್ರಾಣಿ ಸಿಕ್ಕರೂ ಅವುಗಳ ಕಥೆ ಮುಗಿದಂತೆಯೇ. ಅದೇ ರೀತಿ ಸಿಂಹ ಮತ್ತು ಚಿರತೆ ಕಾದಾಡುವ ವಿಡಿಯೋ ವೈರಲ್​ ಆಗಿದೆ. ಚಿರತೆಯ ಕಥೆ ಮುಗಿಯಿತು ಎನ್ನುವಷ್ಟರಲ್ಲಿ ಟ್ವಿಸ್ಟ್​ ಸಿಗುತ್ತದೆ. ಚಿರತೆ ಅಲ್ಲಿಯೇ ಇದ್ದ ಮರವನ್ನು ಸರಸರ ಏರಿ ಹೋದರೆ ಸಿಂಹ ಮಾತ್ರ ಮರ ಹತ್ತಲಾಗದೇ ಅಸಹಾಯಕವಾಗಿ ಕುಳಿತುಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು. ರಾಜನಾಗಿದ್ದರೂ ಕೆಲವು ಸಲ ಸೋಲು ಒಪ್ಪಿಕೊಳ್ಳಲೇಬೇಕಾಗುತ್ತದೆ ಎನ್ನುವುದು ಇದರ ಪಾಠ ಎಂದಿದ್ದಾರೆ ನೆಟ್ಟಿಗರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...