alex Certify Bengaluru : ರಾಜಧಾನಿಯಲ್ಲಿದ್ದಾನೆ ‘ಸೈಕೋ ಕಿಲ್ಲರ್’ : ಸೆಕ್ಯುರಿಟಿ ಗಾರ್ಡ್ ಗಳೇ ಈತನ ಟಾರ್ಗೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Bengaluru : ರಾಜಧಾನಿಯಲ್ಲಿದ್ದಾನೆ ‘ಸೈಕೋ ಕಿಲ್ಲರ್’ : ಸೆಕ್ಯುರಿಟಿ ಗಾರ್ಡ್ ಗಳೇ ಈತನ ಟಾರ್ಗೆಟ್

ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ವಿಕೃತ ಕಾಮಿಯೊಬ್ಬ ಮಹಿಳೆಯರ ನಿದ್ದೆಗೆಡಿಸಿದ್ದನು. ಮಹಿಳೆಯರು ಸ್ನಾನ ಮಾಡುವುದನ್ನು ಮೊಬೈಲ್ ಲ್ಲಿ ಸೆರೆ ಹಿಡಿದು ಮಹಿಳೆಯರ ಒಳ ಉಡುಪು ಕದಿಯುತ್ತಿದ್ದನು. ಈ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತೊಂದು ಆತಂಕ ಶುರುವಾಗಿದೆ.

ಬೆಂಗಳೂರಿನಲ್ಲೊಬ್ಬ ತೌಸೀಫ್ ಎಂಬ  ಸೈಕೋ  ಪ್ರತ್ಯಕ್ಷನಾಗಿದ್ದು, ಸೆಕ್ಯುರಿಟಿ ಗಾರ್ಡ್ ಗಳೇ ಈತನ ಟಾರ್ಗೆಟ್ ಆಗಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಗಳನ್ನೇ ಹುಡುಕಿ ಇರಿಯುವ ಸೈಕೋ ಕಿಲ್ಲರ್ ಕೃತ್ಯಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ.

ಮಧ್ಯರಾತ್ರಿ ಕೃತ್ಯಕ್ಕೆ ಇಳಿಯುವ ಸೈಕೋ ಕಂಠಪೂರ್ತಿ ಎಣ್ಣೆ ಹೊಡೆದು ಬಲಿಗಾಗಿ ಕಾಯತ್ತಿರುತ್ತಾನೆ. ತೌಸೀಫ್ ಎಂಬ ಈ ಸೈಕೋಪಾತ್ ನಗರದ ಹಲವು ಕಡೆ ಸೆಕ್ಯೂರಿಟಿ ಗಾರ್ಡ್ ಗಳಿಗೆ ಇರಿದಿದ್ದಾನೆ. ಈತನ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರ್ ಟಿ ನಗರ ಪೊಲೀಸರು ಈತನನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...