alex Certify ಪ್ರೇಮ ನಿವೇದನೆ ವೇಳೆಯೇ ಕುಸಿದ ಪ್ರೇಮಿ, ಮುಂದೇನಾಯ್ತು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಮ ನಿವೇದನೆ ವೇಳೆಯೇ ಕುಸಿದ ಪ್ರೇಮಿ, ಮುಂದೇನಾಯ್ತು ಗೊತ್ತಾ ?

ಈ ವಿಡಿಯೋ ನೋಡಿ ಅಯ್ಯೋ ಎನಿಸಬಹುದು, ಕೊನೆಗೆ ಖುಷಿಯೂ ತರಿಸಬಹುದು. ಅಂತಹ ಒಂದು ಮನಮುಟ್ಟುವ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ, ಒಬ್ಬ ಕ್ರೀಡಾಪಟು ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ತನ್ನ ಗೆಳತಿಗೆ ಪ್ರಪೋಸ್​ ಮಾಡುತ್ತಿರುವುದನ್ನು ಕಾಣಬಹುದು. ಆತ ಪ್ರಸ್ತಾವನೆ ಇಡುವವರೆಗೂ ಎಲ್ಲವೂ ಸರಿ ಇರುತ್ತದೆ,

ಇನ್ನೇನು ತನ್ನ ಅಭಿಲಾಷೆ ವ್ಯಕ್ತಮಾಡಬೇಕೆನ್ನುವ ಹೊತ್ತಿಗೆ ಆತನಿಂದ ಆರ್ತನಾದ ಹೊರಹೊಮ್ಮುತ್ತದೆ. ನೋವಿನ ಸೆಳೆತದಿಂದ ತನ್ನ ಪ್ರಿಯತಮೆಗೆ ಪ್ರೇಮ ನಿವೇದನೆ ಮಾಡಿ ಕೈಗೆ ಉಂಗುರ ತೊಡಿಸಬೇಕೆನ್ನುವಾಗ ಈ ರೀತಿ ಆಗಿ ಹೋಯಿತು. ಕೊನೆಗೆ ರಿಂಗ್​ ವಾಪಸ್​ ಇಟ್ಟುಕೊಳ್ಳಬೇಕಾಗುತ್ತದೆ, ನೆಲಕ್ಕೂ ಕುಸಿದುಬಿಡುತ್ತಾನೆ.

ಅವನ ಗೆಳತಿಗೆ ಆಘಾತ. ಆದರೆ, ಆತ ಹಠ ಬಿಡಲಿಲ್ಲ. ನೋವಿನ ನಡುವೆಯೂ ಇಬ್ಬರ ಸಹಾಯ ಪಡೆದು ರಿಂಗ್​ ಕೊಟ್ಟೇಬಿಟ್ಟ. ಸಹಾಯಕ್ಕೆ ಬಂದವರು ಆತನ ಸ್ನಾಯುವನ್ನು ಉಜ್ಜಿ ಸಹಾಯ ಮಾಡಿದರು. ಆಕೆ ಪ್ರೇಮ ನಿವೇದನೆ ಒಪ್ಪಿಕೊಂಡಾಗ ಕ್ರೀಡಾಂಗಣದಲ್ಲಿ ಹರ್ಷೋದ್ಗಾರ ಕೇಳಿಬಂತು. ಕೊನೆಯಲ್ಲಿ ಆ ಜೋಡಿ ಮುತ್ತಿಟ್ಟಿತು.

ಈ ವಿಡಿಯೋ 2.7 ಮಿಲಿಯನ್​ ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ಅಥ್ಲೀಟ್​ನ ಸಾಹಸ ಶ್ಲಾಘಿಸಿದ್ದಾರೆ ಮತ್ತು ಕಾಮೆಂಟ್​ ವಿಭಾಗದಲ್ಲಿಯೂ ಹುರಿದುಂಬಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...