alex Certify 84 ವರ್ಷದ ಪ್ರಿಯತಮೆಯನ್ನು ನರ್ಸಿಂಗ್‌ ಹೋಮ್‌ನಿಂದ ಎಗರಿಸಿಕೊಂಡು ಹೋದ 80 ರ ವೃದ್ಧ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

84 ವರ್ಷದ ಪ್ರಿಯತಮೆಯನ್ನು ನರ್ಸಿಂಗ್‌ ಹೋಮ್‌ನಿಂದ ಎಗರಿಸಿಕೊಂಡು ಹೋದ 80 ರ ವೃದ್ಧ….!

ವೃದ್ಧಾಪ್ಯದಲ್ಲೂ ಪ್ರೇಮ ಬತ್ತುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಆಸ್ಪ್ರೇಲಿಯಾದಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. 84 ವರ್ಷದ ಕೆರೊಲ್‌ ಲಿಸ್ಲಿಗೆ ಪಾರ್ಕಿನ್ಸನ್‌ ಕಾಯಿಲೆ, ಆಕೆಯನ್ನು ಪರ್ತ್‌ನಲ್ಲಿನ ನರ್ಸಿಂಗ್‌ ಹೋಮ್‌ನಲ್ಲಿ ನೋಡಿಕೊಳ್ಳಲಾಗುತ್ತಿತ್ತು.
ಆದರೆ ಜನವರಿ 4ರಂದು ಆಕೆ ಕಣ್ಮರೆಯಾಗಿದ್ದಳು. ಎರಡು ದಿನಗಳ ಹುಡುಕಾಟದ ಬಳಿಕ 80ರ ವೃದ್ಧನೊಂದಿಗೆ ಕಾರಿನಲ್ಲಿ ತೆರಳುವಾಗ ಆಕೆಯು ಪೊಲೀಸರಿಗೆ ಸಿಕ್ಕಿಬಿದ್ದಳು!

ಹೌದು, ಇದು ವೃದ್ಧ ಪ್ರೇಮಿಗಳ ವಿಶ್ವಪರ್ಯಟನೆ ಯತ್ನದ ಪ್ರೇಮ್‌ ಕಹಾನಿ. ಕ್ವೀನ್ಸ್‌ಲ್ಯಾಂಡಿನ ತನ್ನ ಮನೆಗೆ ಪ್ರಿಯತಮೆಯನ್ನು ಕೊಂಡೊಯ್ಯಲು ಕೆರೊಲ್‌ರನ್ನು ಎಗರಿಸಿಕೊಂಡು ಹೋಗಿದ್ದರು ರಾಲ್ಫ್‌ ಗಿಬ್ಸ್‌. ಇವರಿಗೆ 80 ವರ್ಷ ವಯಸ್ಸು. ಒಟ್ಟಾರೆ 4,800 ಕಿ.ಮೀ. ದೂರವನ್ನು ಕಾರಿನಲ್ಲಿ ಇಬ್ಬರೇ ಪ್ರಯಾಣಿಸಲು ಯತ್ನಿಸಿತ್ತು ವೃದ್ಧ ಪ್ರೇಮಿಗಳ ಜೋಡಿ.

BIG BREAKING: ಭಜರಂಗದಳ ಕಾರ್ಯಕರ್ತನ ಹತ್ಯೆ ಕೇಸ್; ಓರ್ವ ಆರೋಪಿ ಪೊಲೀಸ್ ವಶಕ್ಕೆ

43 ಡಿಗ್ರಿ ಸೆಲ್ಸಿಯಸ್‌ ತಾಪಮಾನದ ಬಿಸಿಯಲ್ಲಿ ಕಂಗೆಟ್ಟ ಸ್ಥಿತಿಯಲ್ಲಿ ಪೊಲೀಸರಿಗೆ ಸಿಕ್ಕ ವೃದ್ಧರನ್ನು ಹೆಲಿಕಾಪ್ಟರ್‌ನಲ್ಲಿ ಪರ್ತ್‌ನ ನರ್ಸಿಂಗ್‌ ಹೋಮ್‌ಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಉಪಚಾರ ಮಾಡಲಾಗಿದೆ. ತನ್ನ ವಿರುದ್ಧ ಕೇಸ್‌ ಜಡಿದ ಪೊಲೀಸರಿಗೆ 80ರ ಗಿಬ್ಸ್‌ ಹೇಳಿದ್ದು, ಮುಂದಿನ 15 ವರ್ಷಗಳವರೆಗೆ ಕೆರೊಲ್‌ ಜತೆಗೆ ಜೀವನ ಸಾಗಿಸಲು ಒಂದು ಸಾಹಸ ಮಾಡಿದೆ ಎನ್ನುವ ಮುಗ್ಧ ಆಸೆಯನ್ನು ಮಾತ್ರ. ಆದರೂ, ಕೆರೊಲ್‌ ಜೀವಕ್ಕೆ ಕುತ್ತು ತಂದ ಆರೋಪದ ಮೇರೆಗೆ ಗಿಬ್ಸ್‌ಗೆ 7 ತಿಂಗಳ ಕಾಲ ಜೈಲಿಗೆ ಅಟ್ಟಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...