alex Certify 73 ಲಕ್ಷ ರೂ. ಜೊತೆಗೆ ಕೆಲಸವನ್ನೂ ಕಳೆದುಕೊಳ್ಳುವಂತೆ ಮಾಡ್ತು ಆ ಒಂದು ಸುಳ್ಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

73 ಲಕ್ಷ ರೂ. ಜೊತೆಗೆ ಕೆಲಸವನ್ನೂ ಕಳೆದುಕೊಳ್ಳುವಂತೆ ಮಾಡ್ತು ಆ ಒಂದು ಸುಳ್ಳು….!

ಚೀನಾ: ಒಂದು ಸುಳ್ಳಿನಿಂದ ವ್ಯಕ್ತಿಯೊಬ್ಬ 73 ಲಕ್ಷ ರೂಪಾಯಿ ಜೊತೆಗೆ ಕೆಲಸವನ್ನೂ ಕಳೆದುಕೊಂಡಿದ್ದಾನೆ ಎಂದರೆ ನಂಬುವಿರಾ ? ಹೌದು. ಇದು ಚೀನಾದಲ್ಲಿ ಆಗಿರುವ ಘಟನೆ.

ಚೀನಾದ ವ್ಯಕ್ತಿಯೊಬ್ಬ ಅನಾರೋಗ್ಯ ಕಾರಣ ನೀಡಿ ರಜೆ ಪಡೆದು ಆ ಸಮಯದಲ್ಲಿ ಸಿಕ್ಕಿಬಿದ್ದಿದ್ದಾನೆ. ಈ ಹಿನ್ನೆಲೆಯಲ್ಲಿ 620,000 ಯುವಾನ್ (ಸುಮಾರು 73 ಲಕ್ಷ ರೂಪಾಯಿ) ದಂಡ ತೆತ್ತಿದ್ದಾನೆ. ಕ್ಸು ಮೌಮೌ ಎಂಬ ವ್ಯಕ್ತಿ ಈತ. ಈತ ಅನಾರೋಗ್ಯ ರಜೆಯಲ್ಲಿದ್ದಾಗ ದ್ವೀಪದಲ್ಲಿ ವಿಹಾರ ಮಾಡುತ್ತಿದ್ದ. ಅಲ್ಲಿ ದುರದೃಷ್ಟಕ್ಕೆ ಸಹೋದ್ಯೋಗಿ ಭೇಟಿ ಕೊಟ್ಟಿದ್ದ. ಅದನ್ನು ಆತ ಕಚೇರಿಯಲ್ಲಿ ಹೇಳಿದ್ದಾನೆ.

ಈ ಹಿನ್ನೆಲೆಯಲ್ಲಿ ದಂಡ ವಿಧಿಸಿದ್ದೂ ಅಲ್ಲದೇ, ಕೆಲಸದಿಂದ ತೆಗೆದುಹಾಕಲಾಗಿದೆ. ಚೀನಾದಲ್ಲಿ ಈ ರೀತಿಯ ಸುಳ್ಳು ಹೇಳುವುದು ಮಹಾ ಅಪರಾಧ. ಈತ ಎರಡು ವಾರಗಳ ಸಂಬಳದ ರಜೆಗಾಗಿ ಅರ್ಜಿ ಸಲ್ಲಿಸಿದ್ದ. ಆದರೆ ತಿರಸ್ಕರಿಸಲಾಗಿತ್ತು. ನಂತರ ಅನಾರೋಗ್ಯದ ರಜೆ ಪಡೆದು ಟೂರ್​ಗೆ ಹೋಗಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...