alex Certify 94 ನೇ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ ನಿವೃತ್ತ ನೌಕರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

94 ನೇ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ ನಿವೃತ್ತ ನೌಕರ…!

ಚುನಾವಣೆಗೆ ಸ್ಪರ್ಧಿಸುವುದನ್ನೇ ಹವ್ಯಾಸವನ್ನಾಗಿಸಿಕೊಂಡಿರುವ ನಿವೃತ್ತ ಸರ್ಕಾರಿ ನೌಕರರೊಬ್ಬರು ಇದೀಗ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿದಿದ್ದು, ಶುಕ್ರವಾರದಂದು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇದು ಇವರ 94ನೇ ಬಾರಿಯ ಚುನಾವಣಾ ನಾಮಪತ್ರವಾಗಿದೆ.

ಆಗ್ರಾ ನಗರದ 75 ವರ್ಷದ ಹಸ್ನು ರಾಮ್ ಅವರೇ ಈ ವಿಶಿಷ್ಟ ವ್ಯಕ್ತಿಯಾಗಿದ್ದು, ಇವರು ಸರ್ಕಾರಿ ನೌಕರರಾಗಿದ್ದ ಸಂದರ್ಭದಲ್ಲಿ ರಾಜಕೀಯ ಪಕ್ಷವೊಂದು ವಿಧಾನಸಭಾ ಟಿಕೆಟ್ ನೀಡುವ ಭರವಸೆ ನೀಡಿ ಉದ್ಯೋಗಕ್ಕೆ ರಾಜೀನಾಮೆ ಕೊಡಿಸಿತ್ತೆಂದು ಹೇಳಲಾಗಿದೆ. ಆ ಬಳಿಕ ಅವರಿಗೆ ಕೊಟ್ಟ ಮಾತಿನಂತೆ ಟಿಕೆಟ್ ನೀಡದೆ ವಂಚಿಸಿದ್ದು, ಇದರಿಂದಾಗಿ ಹಸ್ನು ರಾಮ್ ಅವರ ಕೋಪ ನೆತ್ತಿಗೇರಿದೆ.

ಹೀಗಾಗಿ 1985 ರಲ್ಲಿ ಪ್ರಥಮ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದ ಹಸ್ನು ರಾಮ್, ಮೂರನೇ ಸ್ಥಾನ ಪಡೆದಿದ್ದರಂತೆ. ಆ ಬಳಿಕ ವಿವಿಧ ಹಂತದ ಚುನಾವಣೆಗಳಲ್ಲಿ ಅವರು ಸ್ಪರ್ಧಿಸಿಕೊಂಡು ಬಂದಿದ್ದು, ನಿರಂತರವಾಗಿ ಪರಾಭವಗೊಂಡಿದ್ದಾರೆ. ಆದರೂ ಸಹ ಎದೆಗುಂದದ ಅವರು ಇದೀಗ 94ನೇ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದು, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...