alex Certify 90ರ ದಶಕದ ಬರ್ತ್ ಡೇ ಪಾರ್ಟಿಯಲ್ಲಿ ಏನು ತಿಂಡಿಯಿರುತ್ತಿತ್ತು ಗೊತ್ತಾ..? ಐಎಎಸ್ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ ಇಂಟ್ರೆಸ್ಟಿಂಗ್ ಚಿತ್ರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

90ರ ದಶಕದ ಬರ್ತ್ ಡೇ ಪಾರ್ಟಿಯಲ್ಲಿ ಏನು ತಿಂಡಿಯಿರುತ್ತಿತ್ತು ಗೊತ್ತಾ..? ಐಎಎಸ್ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ ಇಂಟ್ರೆಸ್ಟಿಂಗ್ ಚಿತ್ರಣ

ಮಕ್ಕಳ ಹುಟ್ಟುಹಬ್ಬ ಅಂದ್ರೆ ಇತ್ತೀಚಿನ ದಿನಗಳಲ್ಲಿ ದೊಡ್ಡ ಪಾರ್ಟಿಯನ್ನೇ ಆಯೋಜಿಸಲಾಗುತ್ತದೆ. ಆದರೆ, 80 ಮತ್ತು 90 ರ ದಶಕದಲ್ಲಿ ಮಕ್ಕಳ ಹುಟ್ಟುಹಬ್ಬದ ಪಾರ್ಟಿಗಳು ಹೇಗಿರುತ್ತಿತ್ತು ಎಂಬುದು ನಿಮಗೆ ತಿಳಿದಿದೆಯೇ..? ಈ ಕುರಿತಾಗಿ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ನೆಟ್ಟಿಗರು ಕಣ್ ಕಣ್ ಬಿಟ್ಟಿದ್ದಾರೆ.

ಅಧಿಕಾರಿ ಹಂಚಿಕೊಂಡ ಚಿತ್ರದಲ್ಲಿ ಸಮೋಸಾ, ಬಿಸ್ಕತ್ತು, ಗುಲಾಬ್ ಜಾಮೂನ್ ಮತ್ತು ಕೆಲವು ನಮ್ಕೀನ್ ಅನ್ನು ಒಳಗೊಂಡಿರುವ ಪುಟ್ಟ ತಟ್ಟೆಯು ಮಕ್ಕಳ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಪ್ರಧಾನವಾಗಿತ್ತು ನಮ್ಮಲ್ಲಿ ಯಾರೂ ನಿಜವಾಗಿಯೂ ಆ ಸರಳ ಸಂತೋಷಗಳನ್ನು ಮೀರುವುದಿಲ್ಲ ಅಂತಾ ಅಧಿಕಾರಿ ತಿಳಿಸಿದ್ದಾರೆ.

ಮಧ್ಯಮ ವರ್ಗದ ಮನೆಗಳಲ್ಲಿ, ಈ ಪ್ಲೇಟ್ ಈಗಲೂ ಸಹ ಒಂದು ಅದ್ಭುತವಾದ ತಿಂಡಿಗಾಗಿ ಮಾಡುವುದನ್ನು ಮುಂದುವರೆಸಿದೆ ಎಂದು ಅನೇಕ ಟ್ವಿಟ್ಟರ್ ಬಳಕೆದಾರರು ಸೇರಿಸಿದ್ದಾರೆ.

ಇನ್ನು ಅಂದಿನ ದಿನಗಳಲ್ಲಿ ಉಡುಗೊರೆಗಳು ಸ್ಕೆಚ್ ಪೆನ್, ಬಣ್ಣದ ಪೆನ್ಸಿಲ್, ಪೆನ್ಸಿಲ್ ಬಾಕ್ಸ್ ಮುಂತಾದವುಗಳನ್ನು ಹೊಂದಿತ್ತು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಟ್ವಿಟ್ಟರ್ 80, 90ರ ದಶಕವನ್ನು ಆಗಾಗ್ಗೆ ನೆನಪಿಸುತ್ತದೆ. ಇತ್ತೀಚೆಗಷ್ಟೇ ಮಧ್ಯಮ ವರ್ಗದ ಮನೆಗಳಲ್ಲಿ ಮೊಸಾಯಿಕ್ ನೆಲಹಾಸಿನ ಫೋಟೋವನ್ನು ಹಂಚಿಕೊಳ್ಳಲಾಗಿತ್ತು. ಹಳೆಯ ಮನೆಗಳ ಮೊಸಾಯಿಕ್ ನೆಲದ ಫೋಟೋ ಹಂಚಿಕೊಂಡ ಬಳಕೆದಾರರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದರು.

— Awanish Sharan (@AwanishSharan) April 24, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...