alex Certify ಮಹಿಳೆಯರ ವಾಸಕ್ಕೆ ಸುರಕ್ಷಿತವಾಗಿವೆ ವಿಶ್ವದ ಈ 9 ದೇಶಗಳು; ಇಲ್ಲಿದೆ ಸಂಪೂರ್ಣ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ ವಾಸಕ್ಕೆ ಸುರಕ್ಷಿತವಾಗಿವೆ ವಿಶ್ವದ ಈ 9 ದೇಶಗಳು; ಇಲ್ಲಿದೆ ಸಂಪೂರ್ಣ ಪಟ್ಟಿ

ನೀವು ಪ್ರಸ್ತುತ ವಿದೇಶಕ್ಕೆ ಶಿಫ್ಟ್ ಆಗುವ ಪ್ಲ್ಯಾನ್ ಹಾಕೊಂಡಿರುವ ಮಹಿಳೆಯಾಗಿದ್ದರೆ ಅಥವಾ ಮುಂಬರುವ ವಿದೇಶ ಪ್ರಯಾಣದ ಪ್ಲ್ಯಾನ್ ಮಾಡಿಕೊಂಡಿದ್ದರೆ ನಾವು ನಿಮಗೆ ಮಹತ್ವದ ಮಾಹಿತಿಯೊಂದನ್ನು ಹೇಳುತ್ತೇವೆ. ಜಗತ್ತಿನಲ್ಲಿ ಮಹಿಳೆಯರಿಗೆ ಪ್ರಯಾಣಿಸಲು ಅಥವಾ ವಾಸಿಸಲು ಸುರಕ್ಷಿತವಾದ ದೇಶಗಳ ಪಟ್ಟಿ ಮತ್ತು ಅದರ ವಿವರಣೆಯನ್ನು ನಾವು ಹೇಳುತ್ತೇವೆ.

ಮೊದಲನೆಯದಲಾಗಿ ಮಹಿಳೆಯರಿಗೆ ವಾಸಿಸಲು ಅಥವಾ ಪ್ರಯಾಣಿಸಲು ಯೋಗ್ಯವಾದ ವಿಶ್ವದ 9 ಸುರಕ್ಷಿತ ದೇಶಗಳು ಯಾವುದೆಂದು ಪಟ್ಟಿ ಮಾಡೋದಾದ್ರೆ ನಾರ್ವೆ, ಫಿನ್ಲ್ಯಾಂಡ್, ಐಸ್ಲ್ಯಾಂಡ್, ಡೆನ್ಮಾರ್ಕ್, ಲಕ್ಸೆಂಬರ್ಗ್, ಸ್ವಿಟ್ಜರ್ಲೆಂಡ್, ಸ್ವೀಡನ್, ಆಸ್ಟ್ರಿಯಾ, ಯುನೈಟೆಡ್ ಕಿಂಗ್ಡಮ್.

ಮಹಿಳೆಯರಿಗಾಗಿ ಇಲ್ಲಿ ನೀಡಿರುವ ಟಾಪ್ 9 ಸುರಕ್ಷಿತ ದೇಶಗಳ ಈ ಪಟ್ಟಿಯು ಶಾಂತಿ ಮತ್ತು ಭದ್ರತೆಯ ಬಗ್ಗೆ ಪಡೆದ ಡೇಟಾವನ್ನು ಆಧರಿಸಿ ತಯಾರಿಸಲಾಗಿದೆ. ಈ ಪಟ್ಟಿಯನ್ನು ಆ ದೇಶದಲ್ಲಿ ಸಿಗುವ ಶಿಕ್ಷಣ, ಆರ್ಥಿಕ ಸೌಲಭ್ಯ, ಉದ್ಯೋಗ, ಮೊಬೈಲ್ ಬಳಕೆ, ರಾಜಕೀಯ ಅವಕಾಶ, ಕಾನೂನು, ಗಂಡು ಹೆಣ್ಣಿನ ಸಮಾನತೆ, ಪುರುಷ ತಾರತಮ್ಯ, ಜೀವನ ಸಂಗಾತಿ, ಸಮುದಾಯದಿಂದ ಸುರಕ್ಷತೆ, ಸಂಘಟಿತ ದೌರ್ಜನ್ಯ ಹೀಗೆ ಒಟ್ಟು 11 ವಿಭಿನ್ನ ಆಯಾಮಗಳಲ್ಲಿ ನೋಡಿ ತಯಾರು ಮಾಡಲಾಗಿದೆ.

ಮಹಿಳೆಯರಿಗೆ ಸುರಕ್ಷಿತವಾಗಿರುವ ಟಾಪ್ ವನ್ ದೇಶ ನಾರ್ವೆಯ ಬಗೆಗೆ ವಿವರವನ್ನು ನೋಡೋದಾದ್ರೆ ಕಳೆದ ಎರಡು ವರ್ಷಗಳಿಂದ ಶಾಂತಿಯನ್ನು ಕಾಪಾಡಿಕೊಂಡು ಬಂದಿರುವ ಮಾನದಂಡದಲ್ಲಿ ನಾರ್ವೆ ಮೊದಲ ಸ್ಥಾನವನ್ನು ಸತತವಾಗಿ ಉಳಿಸಿಕೊಂಡಿದೆ. ನಾರ್ವೆಯಲ್ಲಿ ಮಹಿಳೆಯರು ಯಾವುದೇ ಭಯದ ವಾತವರಣವಿಲ್ಲದೇ ಹಗಲು ಅಥವಾ ರಾತ್ರಿ ಸಂದರ್ಭದಲ್ಲಿ ನಿರ್ಭಯವಾಗಿ ನಗರದ ಬೀದಿಗಳಲ್ಲಿ ಪ್ರಯಾಣಿಸಬಹುದಾಗಿದೆ. ನಾರ್ವೆಯಲ್ಲಿ ಲಿಂಗ ಸಮಾನತೆ ಮತ್ತು ಪರಸ್ಪರ ಗೌರವದ ತತ್ವಗಳನ್ನು ಅನುಸರಿಸಲಾಗುತ್ತದೆ. ನಾರ್ವೇಯಲ್ಲಿ ಮಹಿಳೆಯರು ತಾವು ಇರುವ ಶೈಕ್ಷಣಿಕ ಸಂಸ್ಥೆಗಳು ಮತ್ತು ಕೆಲಸದ ಸ್ಥಳಗಳಲ್ಲಿ ಸಮಾನತೆಯ ವಾತಾವರಣವನ್ನು ಹೊಂದಿದ್ದಾರೆ.

ಇನ್ನು ಎರಡನೇ ದೇಶವಾದ ಫಿನ್ಲ್ಯಾಂಡ್‌ನಲ್ಲಿ ಫಿನ್ನಿಷ್ ಸಮಾಜವು ಲಿಂಗ ಸಮಾನತೆಯನ್ನು ಗೌರವಿಸುತ್ತದೆ. ಇಲ್ಲಿ 1917 ರಲ್ಲಿ ಸ್ವಾತಂತ್ರ್ಯಕ್ಕೆ ಮುಂಚೆಯೇ, 1906 ರಲ್ಲಿ ಮಹಿಳೆಯರಿಗೆ ಸಂಪೂರ್ಣ ರಾಜಕೀಯ ಹಕ್ಕುಗಳನ್ನು ನೀಡಿದ ಮೊದಲ ಯುರೋಪಿಯನ್ ರಾಷ್ಟ್ರವಾಗಿದೆ. ಇನ್ನು ಐಸ್ಲ್ಯಾಂಡ್ ದೇಶದಲ್ಲಿ ಹಿಂಸಾಚಾರ ಮತ್ತು ತಾರತಮ್ಯದಿಂದ ಮಹಿಳೆಯರನ್ನು ರಕ್ಷಿಸಲು ಬಲವಾದ ಕಾನೂನನ್ನು ಜಾರಿಗೊಳಿಸಲಾಗಿದೆ. ಇಲ್ಲಿ ಉದ್ಯೋಗದಲ್ಲಿರುವ ಗಂಡ ಹೆಂಡತಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಮಾನ ರಜೆಯ ಆಫರ್ ಇದೆ.

ಇನ್ನು ಡೆನ್ಮಾರ್ಕ್ ದೇಶದಲ್ಲಿ ಲಿಂಗ ತಾರತಮ್ಯ ಮಾಡುವುದು ಕಾನೂನು ಬಾಹಿರವಾಗಿದೆ. ಹೀಗೆ ಇನ್ನುಳಿದ ದೇಶಗಳಲ್ಲಿಯೂ ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಯುನೈಟೆಡ್ ಕಿಂಗ್ಡಮ್‌ನಲ್ಲಿ ಬಾಲಕಿಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...