alex Certify BREAKING: ಭಾರಿ ಅಗ್ನಿ ಅವಘಡ; 9 ಮಕ್ಕಳು ಸೇರಿ 19 ಜನ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಭಾರಿ ಅಗ್ನಿ ಅವಘಡ; 9 ಮಕ್ಕಳು ಸೇರಿ 19 ಜನ ಸಾವು

ನ್ಯೂಯಾರ್ಕ್: ಅಮೆರಿಕದಲ್ಲಿ ಅಗ್ನಿ ಅವಘಡ ಉಂಟಾಗಿದ್ದು, ಬರೋಬ್ಬರಿ 19 ಜನ ಸಾವನ್ನಪ್ಪಿದ್ದಾರೆ. ಅಗ್ನಿ ದುರಂತದಲ್ಲಿ 9 ಮಕ್ಕಳು ಸೇರಿದಂತೆ 19 ಜನರು ಮೃತಪಟ್ಟಿದ್ದಾರೆ.

ನ್ಯೂಯಾರ್ಕ್ ನ ಅಪಾರ್ಟ್ಮೆಂಟ್ ನಲ್ಲಿ ದುರಂತ ಸಂಭವಿಸಿದೆ. ಬ್ರಾಂಕ್ಸ್ ಬರೋದಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ದುರಂತ ಸಂಭವಿಸಿದೆ.

19 ಜನರು ಮೃತಪಟ್ಟಿದ್ದಾರೆಂದು ದೃಢಪಡಿಸಿದ್ದು, ಇನ್ನೂ ಹಲವಾರು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಗಾಯಗೊಂಡ 63 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ತಿಳಿಸಿದ್ದಾರೆ,

ಬ್ರಾಂಕ್ಸ್ ಮೃಗಾಲಯದ ಪಶ್ಚಿಮಕ್ಕೆ 181 ನೇ ಬೀದಿಯಲ್ಲಿರುವ 19 ಅಂತಸ್ತಿನ ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 200 ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...